ಗೌರಿಬಿದನೂರು: ಪೀತ್ರಾರ್ಜಿತ ಆಸ್ತಿ ವಿಚಾರದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ (Brother Murder) ಘಟನೆ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಡುವಲಹಳ್ಳಿಯಲ್ಲಿ ಸಂಭವಿಸಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾಲನ್ ಗೆ ಸೇರಿಕೊಳ್ಳಿ.. https://t.me/dcgkannada
ನಡುವಲಹಳ್ಳಿ ಗ್ರಾಮ ನಂಜುಂಡಯ್ಯ ಹಾಗೂ ರಾಮಾಂಜಿನಪ್ಪ ನವರ ಆಸ್ತಿ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ದೊಣ್ಣೆ, ಕಲ್ಲುಗಳಿಂದ ಬಡೆದುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ.
ಇದೇ ವೇಳೆ ತಮ್ಮನ ಮಕ್ಕಳು ದೊಡ್ಡಪ್ಪನ ಮೇಲೆ ವಿಕೋಪಕ್ಕೆ ಹೋಗಿದ್ದು ತಮ್ಮ ಹಾಗೂ ತಮ್ಮನ ಮಕ್ಕಳು ಸೇರಿ ಕಲ್ಲು, ದೊಣ್ಣೆಗಳಿಂದ ಅಣ್ಣ ನಂಜುಂಡಪ್ಪನ ಮೇಲೆ ದಾಳಿ ಮಾಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡ 55 ವರ್ಷದ ನಂಜುಂಡಪ್ಪನನ್ನು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ ನಂಜುಂಡಪ್ಪ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಉದ್ಯೋಗ ಸಿಗದ ಹತಾಶೆ; ಯುವಕ ಆತ್ಮಹತ್ಯೆ..! “I am a big failure” ಎಂದು ಡೆತ್ ನೋಟ್
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಿಪಿಐ, ಪಿಎಸೈ ಸೇರಿದಂತೆ ಇತರರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.