ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ

ಮುದ್ದೇಬಿಹಾಳ : ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಕೊಡುವ ಪ್ರಮಾಣ ಪತ್ರವೇ ನಿಮ್ಮ ಸೇವೆಯ ನಿಜವಾದ ಅರ್ಹತೆಯಾಗಿದೆ.ಒಳ್ಳೆಯ ಸೇವೆ ನೀಡುವುದನ್ನು ಮುಂದುವರೆಸಿಕೊoಡು ಸಾಗಿ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಆಸ್ಪತ್ರೆಯ ಮೂಲಸೌಕರ‍್ಯಗಳನ್ನು ವೀಕ್ಷಿಸಿ ಬಾಣಂತಿಯರ ಕೊಠಡಿ,ಹೆರಿಗೆ ಕೊಠಡಿಗಳನ್ನು ಪರಿಶೀಲನೆ ನಡೆಸಿದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ರೋಗಿಗಳನ್ನು ಅವರ ಸಂಬoಧಿಕರನ್ನು ಮಾತನಾಡಿಸಿ ಆಸ್ಪತ್ರೆಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳೆಯೊಬ್ಬರು ಇಲ್ಲಿ ಹೇಗೆ ಆರೈಕೆ ಮಾಡಲಾಗುತ್ತಿದೆ.ಮಹಿಳೆಯರಿಗೆ ಚಿಕಿತ್ಸೆ ಹೇಗೆ ದೊರೆಯುತ್ತಿದೆ ಎಂಬುದನ್ನು ಖುದ್ದಾಗಿ ರೋಗಿಯ ಸಂಬoಧಿಕರೊoದಿಗೆ ಸಂವಾದ ನಡೆಸಿದ ಚೌಧರಿ ಅವರಿಗೆ ಮಹಿಳೆಯರು ಉತ್ತರಿಸಿ ‘ ಇಲ್ಲಿನ ವೈದ್ಯರು ನಮಗೆ ದೇವರಿದ್ದಂತೆ,ಒಳ್ಳೆಯ ಸೇವೆ ಕೊಡುತ್ತಿದ್ದಾರೆ’ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ನಾಗಲಕ್ಷ್ಮೀ, ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಅನುಷ್ಠಾನವಾಗಿರುವ ಕುರಿತು ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು,ಅವರ ಸಂಬAಧಿಕರನ್ನು ಮಾತನಾಡಿಸಿದರೆ ತಿಳಿದು ಬರುತ್ತದೆ.ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ಸೇವೆ ದೊರೆಯುತ್ತಿದ್ದು ಇದನ್ನು ಮುಂದುವರೆಸುವoತೆ ಆಡಳಿತ ವೈದ್ಯಾಧಿಕಾರಿ ಡಾ.ರಂಗನಾಥ ವೈದ್ಯ ಅವರಿಗೆ ಸೂಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ನಾಗಲಕ್ಷ್ಮೀ, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯ ಶವಾಗಾರ ಸ್ಥಳಾಂತರ,ಇಲ್ಲಿನ ಸಿಬ್ಬಂದಿಗೆ ವಸತಿ ಗೃಹಸೌಲಭ್ಯ ಸೇರಿದಂತೆ ಮೂಲಸೌರ‍್ಯ ಒದಗಿಸುವ ಕುರಿತು ಜಿಲ್ಲಾಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಡಾ.ಸತೀಶ ತಿವಾರಿ,ಕರ್ನಾಟಕ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಆನಂದಗೌಡ ಬಿರಾದಾರ,ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ವಿಠ್ಠಲ ಕಿಲಾರಟ್ಟಿ, ಮಹ್ಮದರಫೀಕ ಬಾಗವಾನ ಸೇರಿದಂತೆ ಹಲವರು ಇದ್ದರು.

ಹೆಣ್ಣು ಭ್ರೂಣ ಹತ್ಯೆ ವಾಸನೆ ಬಡಿಯುತ್ತಿದೆ ಎಂದು ಚೌಧರಿ..!:
ಮುದ್ದೇಬಿಹಾಳ ತಾಲ್ಲೂಕಿನಲ್ಲಿ 1000 ಪುರುಷರಿಗೆ 936 ಮಹಿಳೆಯರ ಅನುಪಾತ ಇರುವುದಕ್ಕೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ, ಬಾಗಲಕೋಟ ,ಗದಗ ಜಿಲ್ಲೆಯಲ್ಲಿ ಹೆಣ್ಣು-ಗಂಡಿನ ಅನುಪಾತ ಸರಿಯಾಗಿದೆ.ಆದರೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಹೆಣ್ಣಿನ ಅನುಪಾತ ಕಡಿಮೆಯಾಗಿರುವುದು ಆರೋಗ್ಯಕರ ಬೆಳವಣಿಗೆಯಲ್ಲ.ಎಲ್ಲೋ ಈ ಭಾಗದಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಲ ಸಕ್ರಿಯವಾಗಿದೆಯೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಗಂಭೀರವಾಗಿ ತನಿಖೆ ನಡೆಸಬೇಕು ಎಂದು ತಿಳಿಸಿದರು.

Latest News

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :               ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :   ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಮುದ್ದೇಬಿಹಾಳ : ಅಕ್ಕ ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ವಿಜಯಪುರ: ನಾವು ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ದುಶ್ಚಟಗಳಿಂದ ದೂರ ಇರಬೇಕೆಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ

ಆ.22 ರಂದು ಪುಟ್ಟರಾಜ ಗವಾಯಿ ಜನಪದ ಸಂಘದ ಪದಗ್ರಹಣ

ಆ.22 ರಂದು ಪುಟ್ಟರಾಜ ಗವಾಯಿ ಜನಪದ ಸಂಘದ ಪದಗ್ರಹಣ

ಮುದ್ದೇಬಿಹಾಳ : ಗಾನ ಗಾರುಡಿಗ ಪಂಡಿತ ಪುಟ್ಟರಾಜ ಗವಾಯಿಗಳ ಜನಪದ ಮತ್ತು ಸಾಂಸ್ಕೃತಿಕ ಸಂಘ

ಆ.23 ರಂದು ರಾಯಣ್ಣನವರ ಜಾತ್ರೆ:        ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಆ.23 ರಂದು ರಾಯಣ್ಣನವರ ಜಾತ್ರೆ: ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಮುದ್ದೇಬಿಹಾಳ : ವಿಜಯಪುರದಲ್ಲಿ ಆ.23 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ : ತೀವ್ರ ತುರುಸಿನಿಂದ ಕೂಡಿದ ಇಲ್ಲಿನ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ಸೋಮವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಟ್ಟು ಶೇ.92.95ರಷ್ಟು ಮತದಾನ ಆಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 2625 ಮತದಾರರಲ್ಲಿ 2440 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಆರಂಭದಲ್ಲಿ ಚುರುಕುಗೊಂಡಿದ್ದ ಮತದಾನ ಪ್ರಕ್ರಿಯೆ ಮದ್ಯಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿತ್ತು.ಅಂತಿಮ ಸಮಯ ಮೀರುವ ಮುನ್ನವೇ ಬಹುತೇಕ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಒಂದು ಮತಗಟ್ಟೆಯಲ್ಲಿ ಇಬ್ಬರು ಮತದಾರರು ನಕಲಿ ಮತದಾನಕ್ಕೆ

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ: BJP ಕಾರ್ಯಕರ್ತನ ಪ್ಯಾಂಟ್‌ಗೆ ತಾಗಿದ ಬೆಂಕಿ

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ: BJP ಕಾರ್ಯಕರ್ತನ ಪ್ಯಾಂಟ್‌ಗೆ ತಾಗಿದ ಬೆಂಕಿ

ಗದಗ: ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಲು ಮುಂದಾದಾಗ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಕಾಂಗ್ರೆಸ್‌ ನಾಯಕರ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ರಸ್ತೆ ಮಧ್ಯೆ ಬೆಂಕಿ ಹಚ್ಚಿ, ಟೈರ್‌ ಸುಡಲು ಯತ್ನಿಸಿದರು. ಪೊಲೀಸರು ಟೈರ್‌ ಅನ್ನು ಕುಸಿದುಕೊಂಡಾಗ ನೂಕಾಟ ಉಂಟಾಯಿತು. ಕಾರ್ಯಕರ್ತರು ಒಮ್ಮೆಲೆ ನುಗ್ಗಿದ್ದರಿಂದ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಅಲ್ಪ ಪ್ರಮಾಣದಲ್ಲಿ