ಗಂಗಾವತಿ : ನಗರದ ಅಂಗನವಾಡಿ ಕೇಂದ್ರದ ಚಾವಣಿ ಕುಸಿದು ಬಿದ್ದ ಕಾರಣ ಹಲವು ಮಕ್ಕಳ ಗಾಯಗೊಂಡಿರುವ ಘಟನೆ ಮೆಹಬೂಬನಗರದ ಏಳನೆಯ ಕೇಂದ್ರದಲ್ಲಿ ಇಂದು ಮುಂಜಾನೆ ಹನ್ನೊಂದು ಗಂಟೆಗೆ ಜರುಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಶನಿವಾರ ಸಂಜೆ ನಗರದಲ್ಲಿ ಸುರಿದ ಮಳೆಗೆ ಹೆಚ್ಚಿನ ತಂಪಾಗಿ ಈ ಘಟನೆ ನಡೆದಿರಬಹುದು ಎಂದು ತಿಳಿದುಬಂದಿದೆ. ಈ ಅವಘಡ ದಲ್ಲಿ ಅಮಾನ್ ಸೈಯದ್, ಮರ್ದಾನ ದೌವಲ್ ಮೊಹಮ್ಮದ್, ಮತ್ತು ಮನ್ವಿತಾ, ಸುರಕ್ಷಾ ಗಾಯಗೊಂಡ ಮಕ್ಕಳು ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅವಘಡ ಜರುಗಿಲ್ಲ. ಗಾಯಗೊಂಡ ಮಕ್ಕಳನ್ನು ತಕ್ಷಣ ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಈ ವಿಷಯ ತಿಳಿಸ ನಗರಸಭೆ ಅಧ್ಯಕ್ಷ ಮೌಲಸಾಬ್
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮೆಹಬೂಬ್ ವಾರ್ಡ್ ಸದಸ್ಯ ಮನೋಹರ ಸ್ವಾಮಿ, ಸಿಡಿಪಿಒ ಜಯಶ್ರೀ ಇನ್ನುಳಿದ ನಗರಸಭೆ ಸದಸ್ಯರು ಭೇಟಿ ನೀಡಿ ಪರಿಶೀಲನೆ ಕೂಡ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮೌಲಸಾಬ್ ನಗರದ ಎಲ್ಲಾ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಪರಿಶೀಲಿಸಿಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಸೆ.26 ರಿಂದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ