ನವದೆಹಲಿ: ಮೂಡಾ ಹಗರಣದ ಆರೋಪದ ಕುರಿತು ಸಿಎಂ ಸಿದ್ದರಾಮಯ್ಯರ (CM Siddaramaiah) ಕುರಿತು ದೇಶಾದ್ಯಂತ ಚರ್ಚೆ ಜೋರಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಈ ಕುರಿತು ಖಾಸಗಿ ಸುದ್ದಿ ವಾಹಿನಿಗಳು ಡಿಬೆಟ್ ಮೇಲೆ ಡಿಬೆಟ್ ನಡೆಸುತ್ತಿವೆ. ಹೀಗೆ ಡಿಬೆಟ್ ನಡೆಸುತ್ತಿದ್ದ ಖ್ಯಾತ ಸುದ್ದಿ ವಾಹಿನಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿತು. ಆಗ ಡಿಬೆಟ್‌ನಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಮೂರ್ತಿ ಅವರಿಂದ ಛೀಮಾರಿ ಹಾಕಿದ್ದಾರೆ.
ಖ್ಯಾತ ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿಯಲ್ಲಿ ಮೂಡಾ ಹಗರಣದ ಡಿಬೆಟ್ ವೇಳೆ ಸುದ್ದಿ ವಾಹನಿ ಟ್ಯಾಗ್ಲೈನ್ ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಸಿದ್ದ ಎಂದು ನಮೂದಿಸಿದ್ದು, ಡಿಬೆಟ್ ನಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರನ್ನು ಕೆರಳಿಸಿದೆ.
ಡಿಬೆಟ್ ನಲ್ಲಿ ಮಾತನಾಡುವ ಸರದಿ ಬರುವವರೆಗೆ ತಾಳ್ಮೆಯಿಂದ ಕಾದ ಭವ್ಯ ನರಸಿಂಹಮೂರ್ತಿ, ನ್ಯೂಸ್ ಆ್ಯಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳನ್ನು ಸಿದ್ದ ಎಂದು ನಿಮ್ಮ ಸುದ್ದಿ ವಾಹಿನಿ ಅವಹೇಳನಕಾರಿಯಾಗಿ ಉಲ್ಲೇಖಿಸುವುದನ್ನು ಸಹಿಸಲು ಸಾಧ್ಯವಿಲ್ಲ, ಇದು ಗೌರವವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವೇಂದು ನರೇಂದ್ರ, ನರೇನ್ ಎಂದು ಹೆಸರನ್ನು ಬಳಸುವುದಿಲ್ಲ. ನರೇಂದ್ರ ಮೋದಿ ಅವರಿಗೆ ಕೊನೆಯ ಹೆಸರಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಕೊನೆಯ ಹೆಸರಿಲ್ಲ. ಈ ಕೂಡಲೇ ಸಿದ್ದರಾಮಯ್ಯ ಅವರನ್ನು ಗೌರವ ಪೂರ್ವಕವಾಗಿ ಪೂರ್ತಿಯಾಗಿ ಬಳಸಬೇಕು ಎಂದು ತಾಕೀತು ಮಾಡಿದರು.
ಸಿದ್ದರಾಮಯ್ಯ ಅವರು ಕರ್ನಾಟಕದ ಹಿರಿಯ ಮುಖಂಡರಾಗಿದ್ದಾರೆ. ಸಾಂವಿಧಾನಿಕವಾಗಿ ಉನ್ನತ ಹುದ್ದೆಯಲ್ಲಿದ್ದಾರೆ ಎಂಬುದನ್ನು ತಿಳಿಯಬೇಕೆಂದು ಆಗ್ರಹಿಸಿದರು.
ಕೂಡಲೇ ಆದ ತಪ್ಪಿಂದ ಹೆಚ್ಚೆತ್ತ ಸುದ್ದಿ ವಾಹಿನಿ ಆ್ಯಂಕರ್ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: ಸ್ಪರ್ಧೆ ಗೆದ್ದು ಬೈಕ್ ಏರಿದ ಟಗರು..!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಎಂ ಸಿದ್ದರಾಮಯ್ಯಗೆ ಖಾಸಗಿ ಸುದ್ದಿವಾಹಿನಿ ಅವಹೇಳನ..! ಗ್ರಹಚಾರ ಬಿಡಿಸಿದ ಭವ್ಯ ನರಸಿಂಹಮೂರ್ತಿ pic.twitter.com/EV1CPWqVCs
— dcgkannada (@dcgkannada) September 6, 2024