ಬೆಳಗಾವಿ : ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಈಗಲೂ ಪ್ರಚಲಿತದಲ್ಲಿದೆ. ಸಾಕಷ್ಟು ಪ್ರಸಂಗಗಳಲ್ಲಿ ವೈದ್ಯರು ಅನೇಕರಿಗೆ ಪುನರ್ಜನ್ಮ ನೀಡಿದ್ದಾರೆ. ಎಷ್ಟೋ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.
Join Our telegram: https://t.me/dcgkannada
ಆದರೆ, ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಆಸ್ಪತ್ರೆಯಲ್ಲಿ ಇದಕ್ಕೆ ತದ್ವಿರುದ್ಧವಾಗಿ ವ್ಯವಸ್ಥೆ ಕಾಣುತ್ತಿದೆ. ಶಾಸಕರು ನೋಡ್ಲೆಬೇಕಾದ ಸ್ಟೋರಿ ಇದು ಉಚಿತ ಚಿಕಿತ್ಸೆಗೆ ಇಲ್ಲಿ ಹಣ ನೀಡುವುದು ಕಡ್ಡಾಯವಾಗಿದೆ.
ರಾಜ್ಯ ಸರ್ಕಾರ ಬಡವರ ಹಿತ ರಕ್ಷಣೆಗಾಗಿ ಉಚಿತ ಶಿಕ್ಷಣ, ಆರೋಗ್ಯ ಹಲವು ಯೋಜನೆಗಳನ್ನ ಜಾರಿಗೆ ತಂದರೂ ಕೆಲ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಬಡವರಿಗೆ ತಲುಪಲು ವಿಳಂಬವಾಗುತ್ತಿವೆ. ಅದರಲ್ಲೂ ಕೆಲ ಆಸ್ಪತ್ರೆಗಳು ಹಣ ಲೂಟಿ ಮಾಡುವುದನ್ನ ಉದ್ಯೋಗ ಮಾಡಿಕೊಂಡಿವೆ.
ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಸಾರ್ವಜನಿಕ ಅಸ್ಪತ್ರೆಯಲ್ಲಿ ಸಲಾಯನ್ ಹಾಗೂ ಔಷದೋಪಚಾರಕ್ಕೆ ಹಣ ಸಂದಾಯಮಾಡಬೇಕಾಗುತ್ತದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಪ್ರತಿ ಸಲಾಯಿನ್ ಗೆ ನೂರು ರೂಪಾಯಿ ಚಾರ್ಜ್ ಮಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Green gram: ಇಂದಿನಿಂದ ಹೆಸರು ಕಾಳು ಖರೀದಿ ಆರಂಭ
ಮೇಲಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.