ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ ಕಾರ್ಖಾನೆಯು ನಡೆದುಕೊಳ್ಳಲಿದ್ದು ಜಿಲ್ಲಾಧಿಕಾರಿಗಳ ನಿರ್ದೇಶನದ ನಂತರವೇ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಣಮಂತಗೌಡ ಪಾಟೀಲ್ ಹೇಳಿದರು.

ತಾಲ್ಲೂಕಿನ ಯರಗಲ್ ಮದರಿಯಲ್ಲಿರುವ ಶ್ರೀ ಬಾಲಾಜಿ ಶುಗರ್ಸ್ ಅಂಡ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಕಾರ್ಖಾನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಯ್ಲರ್ ಪ್ರದೀಪನ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಔಪಚಾರಿಕವಾಗಿ ಮಾತನಾಡಿದರು.

ರಾಜ್ಯದಲ್ಲಿ ಕಬ್ಬಿನ ಎಂ.ಎಸ್.ಪಿ ದರ ಹೆಚ್ಚಳ ಮಾಡುವಂತೆ ಒತ್ತಾಯಿಸಿ ರೈತಪರ ಸಂಘಟನೆಗಳಿAದ ಹೋರಾಟ ನಡೆಯುತ್ತಿರುವುದು ನಮ್ಮ ಗಮನಕ್ಕಿದೆ.ಕೇಂದ್ರ ಸರ್ಕಾರ ನೀಡುವ ಸೂಚನೆಗೆ ನಾವು ಬದ್ಧರಾಗಿರಬೇಕಾಗುತ್ತದೆ.ಸದ್ಯಕ್ಕೆ ನಾವು ಒಳ್ಳೆಯ ಮಹೂರ್ತ ಇರುವುದರಿಂದ ಬಾಯ್ಲರ್ ಪೂಜೆ ಅಷ್ಟೇ ಮಾಡಿದ್ದೇವೆ ಎಂದು ತಿಳಿಸಿದರು.

ಕಾರ್ಖಾನೆಯ ನಿರ್ದೇಶಕರಾದ ಎಚ್.ಜಿ.ಪಾಟೀಲ್,ಡಾ.ಅಜಿತ್ ಕನಕರೆಡ್ಡಿ, ರಾಹುಲ್‌ಗೌಡ ಪಾಟೀಲ್, ಶ್ರೀನಿವಾಸ ಅರಕೇರಿ, ಅಧಿಕ್‌ಗೌಡ ಪಾಟೀಲ್, ಪ್ರಫುಲ್‌ಗೌಡ ಪಾಟೀಲ್,ಪ್ರಜ್ವಲ್‌ಗೌಡ ಎಚ್.ಪಾಟೀಲ್,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ,ಸೋಮನಗೌಡ ಪಾಟೀಲ ನಡಹಳ್ಳಿ,ಶಿವಪ್ಪಗೌಡ ತಾತರೆಡ್ಡಿ,ಎಂ.ಬಿ.ನಾವದಗಿ,ಲಕ್ಷö್ಮಣ ಬಿಜ್ಜೂರ,ಕಾಮರಾಜ ಬಿರಾದಾರ, ಶಾಸಕರ ಆಪ್ತ ಸಹಾಯಕ ಮಲ್ಲಿಕಾರ್ಜುನ ಬಾಗೇವಾಡಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ,ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾರುತಿ ಗುರವ ಸೇರಿದಂತೆ ಕಾರ್ಖಾನೆಗೆ ಕಬ್ಬು ಪೂರೈಸುವ ತಾಲ್ಲೂಕಿನ ಕಬ್ಬು ಬೆಳೆಗಾರರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.

Latest News

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

ಮುದ್ದೇಬಿಹಾಳ : ಕೆರೆಗಳನ್ನು ತುಂಬಿಸಲು,ಕುಡಿಯುವುದಕ್ಕೆAದು ನಾಲ್ಕು ಟಿಎಂಸಿ ನೀರು ಹರಿಸಬೇಕು ಎಂದು ಕಾನೂನು ಬದ್ಧವಾದ

ವಣಕಿಹಾಳ ಗ್ರಾಮದಲ್ಲಿ ಘಟನೆ :                                                   ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ವಣಕಿಹಾಳ ಗ್ರಾಮದಲ್ಲಿ ಘಟನೆ : ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ಮುದ್ದೇಬಿಹಾಳ : ವಿದ್ಯುತ್ ಶಾಟ್ ಸರ್ಕಿಟ್‌ನಿಂದಾಗಿ ಹನ್ನೆರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ

ಕೆರೆಗಳಿಗೆ ನೀರು ಹರಿಸಲು ಆಗ್ರಹ:                                                                                                ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಕೆರೆಗಳಿಗೆ ನೀರು ಹರಿಸಲು ಆಗ್ರಹ: ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಮುದ್ದೇಬಿಹಾಳ : ವಿಜಯಪುರ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳಲ್ಲಿ

ಸಜ್ಜನ ಗಾಣಿಗ ಸಮಾಜದಿಂದ ಸನ್ಮಾನ :                                     ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ-ದೇಸಾಯಿ

ಸಜ್ಜನ ಗಾಣಿಗ ಸಮಾಜದಿಂದ ಸನ್ಮಾನ : ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ-ದೇಸಾಯಿ

ಮುದ್ದೇಬಿಹಾಳ : ಐದು ಸಾವಿರ ರೂ.ಕೊಡುವ ಮುನ್ನ ಪತ್ರಕರ್ತರನ್ನು ಕರೆದು ಎಲ್ಲರಿಗೂ ತೋರಿಸುವಂತೆ ಪ್ರಚಾರಗಿಟ್ಟಿಸಿಕೊಳ್ಳುವ

ಬಿಜೆಪಿ ಕಾರ್ಯಕರ್ತರಿಂದ ಕೂಲಿ ಪ್ರಹಾರ :                             ಸರ್ಕಾರದ ಪ್ರತಿಕೃತಿಗೆ ಚಿಲ್ಲರೆ ನೋಟಿನ ಹಾರ ಹಾಕಿ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತರಿಂದ ಕೂಲಿ ಪ್ರಹಾರ : ಸರ್ಕಾರದ ಪ್ರತಿಕೃತಿಗೆ ಚಿಲ್ಲರೆ ನೋಟಿನ ಹಾರ ಹಾಕಿ ಪ್ರತಿಭಟನೆ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಬರ ಪರಿಹಾರದ ಹಣವಾಗಿ 2500 ರೂ.ನೀಡಲು ಮುಂದಾಗಿರುವ ಕ್ರಮವನ್ನು ಖಂಡಿಸಿದ ಇಲ್ಲಿನ ಬಿಜೆಪಿ ಕಾರ್ಯಕರ್ತರು,ಮುಖಂಡರು ಎಪಿಎಂಸಿಯ ವಿವಿಧ ಅಡತ್ ಅಂಗಡಿಗಳಲ್ಲಿ ಕೂಲಿ ಮಾಡಿ ಅದರಿಂದ ಬಂದ ಹಣವನ್ನು ಸರ್ಕಾರದ ಪ್ರತಿಕೃತಿಗೆ ಹಾರ ಮಾಡಿ ಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಪಟ್ಟಣದ ಏಪಿಎಂಸಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ(ಕವಡಿಮಟ್ಟಿ), ರೈತರು ಹಾಗೂ ಬಿಜೆಪಿ ಪಕ್ಷದ ಹೋರಾಟದ ಫಲವಾಗಿ

Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 20 ದಿನ ರಜೆ, ಯಾವಾಗಿಂದ?

Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 20 ದಿನ ರಜೆ, ಯಾವಾಗಿಂದ?

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಮುಂಬರುವ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 19 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಪ್ರತಿದಿನ ಓದು, ಬರಹ, ಪರೀಕ್ಷೆ ಎಂದು ಸುಸ್ತಾಗಿರುವ ಮಕ್ಕಳಿಗೆ ಈ ದೀರ್ಘಾವಧಿಯ ರಜೆಯು ಖಂಡಿತವಾಗಿಯೂ ಹೊಸ ಉಲ್ಲಾಸ ತರಲಿದೆ. ಈ ರಜೆಯು