‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

ಮುದ್ದೇಬಿಹಾಳ : ಕೆರೆಗಳನ್ನು ತುಂಬಿಸಲು,ಕುಡಿಯುವುದಕ್ಕೆAದು ನಾಲ್ಕು ಟಿಎಂಸಿ ನೀರು ಹರಿಸಬೇಕು ಎಂದು ಕಾನೂನು ಬದ್ಧವಾದ ಆದೇಶ ಇದೆ.ಆದರೆ ಇವರು ಅರ್ಧ ಟಿಎಂಸಿ ಮಾತ್ರ ನೀರು ಹರಿಸುತ್ತಿದ್ದಾರೆ.ಶಾಸಕ ನಾಡಗೌಡರು ಎಲ್ಲ ಕೆರೆಗಳನ್ನು ತುಂಬಿಸುವ ಕುರಿತು ಐಸಿಸಿ ಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.

ಪಟ್ಟಣದ ತಮ್ಮ ದಾಸೋಹ ನಿಲಯದ ಆವರಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೆರೆಗಳಿಗೆ ನೀರು ತುಂಬಿಸಲು ನನ್ನ ಸವಾಲು ಆಗಿದೆ.ರೈತರೆಂದರೆ ಯಾಕೆ ಸಿಟ್ಟು ಎಂದು ಈಚೇಗೆ ಪ್ರಶ್ನಿಸಿದ್ದಕ್ಕೆ ಅವರು ಉತ್ತರ ಕೊಡಬೇಕಿತ್ತು.ನನ್ನಲ್ಲಿ ಅವರ ಬಗ್ಗೆ ಹಲವಾರು ಸಾಕ್ಷಿಗಳಿವೆ.ನಾನು ಕುತಂತ್ರಿ, ರೈತರನ್ನು ಎತ್ತಿಕಟ್ಟುವಂತಹ ಕುತಂತ್ರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.ಅತ್ಯಂತ ಕುತಂತ್ರದ ರಾಜಕಾರಣ ಮಾಡುವುದರಲ್ಲಿ ಅಪ್ಪಾಜಿ ನಾಡಗೌಡರು ಮುಂದೆ ಇದ್ದಾರೆ.ಕೆರೆ ತುಂಬುವ ಬಗ್ಗೆ ಅಪ್ಪಾಜಿ ನಾಡಗೌಡರು ಪತ್ರ ಬರೆದಿದ್ದಕ್ಕೆ ಸಭೆ ಕರೆದಿದ್ದಾರಾ ? ಅವರ ಪಿಎ ಬರೆದುಕೊಟ್ಟಿದ್ದಕ್ಕೆ ಸಹಿ ಮಾಡಿಕೊಟ್ಟಿದ್ದಾರೆ. ನೀರಾವರಿ ಮಂತ್ರಿ ಯಾರು ? ರಾಮಲಿಂಗರೆಡ್ಡಿನಾ ? ಎಂತಹ ಮೂರ್ಖರಿದ್ದೀರಬೇಕು ಇವರು ಎಂದು ನಡಹಳ್ಳಿ ಟೀಕಿಸಿದರು.

ತಾಲ್ಲೂಕಿನಲ್ಲಿ ನೀವು ಯಾವ ಕೆರೆ ತುಂಬಿಸುವ ಕೆಲಸ ಮಾಡಿದ್ದೀರಿ.ಕಾಲುವೆಗೆ ನೀರು ಬಿಡಿಸಿ ಎಂದರೆ ನಿಮಗ್ಯಾರು ಕಬ್ಬು ಹಾಕು ಎಂದವರು ಎಂದು ರೈತರನ್ನು ಅಣಕಿಸಿದವರು ನೀವು.ಈ ಬಗ್ಗೆ ಅಸೆಂಬ್ಲಿಯಲ್ಲೂ ಮಾತನಾಡಿದ್ದೀರಿ.ಕೆನಾಲ್ ಮೇಲೆ ಮೋಟರ್ ಹಾಕೊಂಡು ರೈತರು ನೀರು ತಗೆಯುತ್ತಿದ್ದಾರೆ ಎಂದು ಮಾತನಾಡಿದವರು ನೀವು. ಕುತಂತ್ರಿ ನೀನಾ ನಾನಾ ಎಂದು ಏಕವಚನದಲ್ಲಿ ನಡಹಳ್ಳಿ ಪ್ರಶ್ನಿಸಿದರು.

ಕಲ್ಲದೇವನಹಳ್ಳಿಯಲ್ಲಿ ಇರುವ ಬಿಜೆಪಿ ಮುಖಂಡ ಪ್ರಭು ಕಡಿ ಅವರ ಹೊಲಕ್ಕೆ ದೋಣಿ ನದಿ ನೀರು ಹರಿಸಿಕೊಳ್ಳಬೇಕಾದರೆ ಅಲ್ಲಿ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಅಧಿಕಾರಿಗಳಿಂದ ಕಟ್ ಮಾಡಿಸಿದ್ದಾರೆ. ಹೊಕ್ರಾಣಿ ಕೆರೆ ತುಂಬಿಸಲು ಹೋದಾಗ ಪೊಲೀಸರನ್ನು ಮುಂದೆ ಕಳಿಸಿದ್ದೀರಿ.ನಿಮ್ದು ಸರ್ಕಾರ ಇತ್ತು.ಆಗ ನಾನು ವಿರೋಧ ಪಕ್ಷದ ಶಾಸಕನಾಗಿದ್ದೆ.ಸಮ್ಮಿಶ್ರ ಸರ್ಕಾರ ಹೋಗುವವರೆಗೂ ಅಲ್ಲಿ ಕೆಲಸ ಮಾಡಿದ ಗುತ್ತಿಗೆದಾರನ ಬಿಲ್ ಮಾಡಿಸಲು ತಡೆ ಹಿಡಿದಿದ್ದೀರಿ.ಕುಂಚಗನೂರಲ್ಲಿ ಸಾಬಣ್ಣ ಕಂಬಳಿ ಎಂಬ ರೈತ ಮೊಸಳೆ ದಾಳಿಯಿಂದ ಮೃತಪಟ್ಟರೆ ಅವರು ಮೊಸಳೆ ದಾಳಿಯಿಂದ ಮೃತಪಟ್ಟಿಲ್ಲ ಎಂದು ವಾದ ಮಾಡಿದವರು ನೀವು. ನಾನು ವಿರೋಧ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ಕೊಟ್ಟಾಗ ರಾತ್ರೋರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಸಂತ್ರಸ್ಥ ರೈತನ ಕುಟುಂಬದ ಚೆಕ್ ಕೊಟ್ಟಿದ್ದೀರಿ.ನಾನು ಶಾಸಕನಿದ್ದ ಸಮಯದಲ್ಲಿ ಹಳ್ಳ,ಕೊಳ್ಳಗಳಿಗೆ,ಕಾಲುವೆಗಳಿಗೆ ನೀರು ಹರಿಸಿದ್ದೇವೆ ಎಂದು ಹೇಳಿದರು.

ಪಡೇಕನೂರ,ಮಡಿಕೇಶ್ವರ,ನಡಹಳ್ಳಿ,ಬಾವೂರ,ಕೂಚಬಾಳ,ಲಿಂಗದಳ್ಳಿ ಊರಿನಲ್ಲಿರುವ ಬೋರವೆಲ್‌ನ ಅಂತರ್ಜಲಮಟ್ಟ ಹೆಚ್ಚುತ್ತಿತ್ತು.ನೀವು ತಾರನಾಳ ಕೆರೆ ಯಾಕೆ ತುಂಬಿಸಲಿಲ್ಲ.ನಿಮ್ಮ ಡ್ರಾಮಾ ಎಕ್ಸಪೋಸ್ ಮಾಡದೇ ಸುಮ್ಮನೆ ಬಿಡುವುದಿಲ್ಲ.ನಾಟಕ ಮಾಡುವುದನ್ನು ಬಿಡಿ.ಸಂಕನಾಳ ಕೆನಾಲ್‌ಗೆ ನೀರು ಬರುತ್ತಿಲ್ಲ.ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ.ಬಾಯಿ ಮುಚ್ಕೊಂಡು ಕೂತುಕೊಳ್ಳಬೇಡಿ.ತಾರನಾಳ ಕೆರೆಗೆ ಒಂದು ವರ್ಷದಿಂದ ನೀರು ಬಿಟ್ಟಿಲ್ಲ.ಬಸರಕೋಡಕ್ಕೆ ನೀರು ಬಿಟ್ಟಿಲ್ಲ.ಚಿಮ್ಮಲಗಿ ಪೂರ್ವ ಕಾಲುವೆಯಲ್ಲಿ ರೆಗ್ಯೂಲರ್ ಆಗಿ ನೀರು ಹೋಗುತ್ತಿದ್ದು ಇದರಲ್ಲಿ ನಿಮ್ಮ ಪಾತ್ರ ಏನಿದೆ.ಕೆನಾಲ್ ಮೇಲಿರುವ ಮೋಟರ್‌ಗಳನ್ನು ಮುಟ್ಟೋದಕ್ಕೆ ಬಂದರೆ ನೆಟ್ಟಗೆ ಇರುವುದಿಲ್ಲ.ಅವನು ಯಾವನೇ ಅಧಿಕಾರಿ ಇರಲಿ ಎಂದು ನಡಹಳ್ಳಿ ಎಚ್ಚರಿಕೆ ನೀಡಿದರು.

ರೈತರು ದ್ರಾಕ್ಷಿ,ಕಬ್ಬು,ದಾಳಿಂಬೆ ಇತರೆ ಬೆಳೆಗಳನ್ನು ಹಾಕಿಕೊಂಡಿದ್ದಾರೆ.ಅನಧಿಕೃತವಾಗಿ ಪಂಪಸೆಟ್ ಇದ್ದರೆ ಕಟ್ ಮಾಡಿ.ಆರ್.ಆರ್.ನಂಬರ್ ಇದ್ದರೂ ವಿದ್ಯುತ್ ಕಡಿತಗೊಳಿಸುವುದೆಂದರೆ ಹೇಗೆ ? ಹಳ್ಳದಿಂದ ನೀರು ಹೊಡೆದರೆ ನಿಮ್ಮಪ್ಪನ ಗಂಟು ಹೋಗುತ್ತದಾ ? ಎಂದ ನಡಹಳ್ಳಿ, ನಿಮ್ಮ ಯೋಗ್ಯತೆಗೆ 5-6 ತಾಸು ಕರೆಂಟ್ ಕೊಡುವುದಕ್ಕೆ ಆಗುತ್ತಿಲ್ಲ.ನೀವು ಎಷ್ಟು ಕುತಂತ್ರಿ ಎನ್ನುವುದಕ್ಕೆ ಸಾಕ್ಷಿ ಕೊಟ್ಟದ್ದೀನಿ,ನಾನು ಕುತಂತ್ರಿ ಎನ್ನುವುದಕ್ಕೆ ಸಾಕ್ಷಿ ಕೊಡಿ ಎಂದರು.
ಎಲ್ಲ ಹಳ್ಳಗಳಿಗೆ ನೀರು ಹರಿಸಬೇಕು.ಕವಡಿಮಟ್ಟಿ,ಇಂಗಳಗೇರಿ,ಪಡೆಕನೂರ,ತಾರನಾಳ ಕೆರೆಗಳನ್ನು ತುಂಬಿಸಬೇಕು.ನಾಟಕ ಮಾಡುವುದನ್ನು ಬಿಟ್ಟು ಮೊದಲು ಸಲಹಾ ಸಮೀತಿ ಸಭೆಯಲ್ಲಿ ಮಾತನಾಡಿ.ಬಿಸನಾಳ ಜಾಕವೆಲ್ ಚಾಲನೆ ಮಾಡಿ ನೀರು ಹರಿಸಬೇಕು.ಅ.11 ರಂದು ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳುತ್ತೇವೆ.ಯಾವ ಕಾರಣಕ್ಕೂ ನೀರು ತರದೇ ಬಿಡುವುದಿಲ್ಲ.ಎಂ.ಎಲ್.ಎ ಎಂದು ಫೋಸ ಕೊಟ್ಟರೆ ಆಯ್ತಾ ? ನೀರು ತುಂಬಿಸದಿದ್ದರೆ ಕೆಬಿಜೆಎನ್‌ಎಲ್ ಕಚೇರಿಗೆ,ಶಾಸಕರ ಮನೆಗೆ ಮುತ್ತಿಗೆ ಹಾಕಲು ಜನರು ಸಿದ್ಧರಿದ್ದಾರೆ ಎಂದು ನಡಹಳ್ಳಿ ಹೇಳಿದರು. ಮುಖಂಡರಾದ ಗಂಗಾಧರ ನಾಡಗೌಡರ,ಮಲಕೇಂದ್ರಗೌಡ ಪಾಟೀಲ್,ಸೋಮನಗೌಡ ಬಿರಾದಾರ,ಪ್ರಭು ಕಡಿ, ಕೆಂಚಪ್ಪ ಬಿರಾದಾರ,ಗುರುನಾಥಗೌಡ ಬಿರಾದಾರ,ಅಶೋಕ ವನಹಳ್ಳಿ,ಬಸಪ್ಪ ತಟ್ಟಿ,ಹಣಮಂತ ನಾಯ್ಕಮಕ್ಕಳ,ಸಿದ್ದರಾಜ ಹೊಳಿ,ರಾಜಶೇಖರ ಹೊಳಿ,ಗೌರಮ್ಮ ಹುನಗುಂದ,ಪರಶುರಾಮ ನಾಲತವಾಡ ಇದ್ದರು.

ನಾಗೂರಲ್ಲಿ ದೋಣಿ ನದಿಗೆ ನೀರು ಹರಿಸಿಕೊಳ್ಳಲು ಆರ್.ಆರ್.ನಂಬರ ಪಡೆದುಕೊಂಡಿರುವ 23 ರೈತರ ಕರೆಂಟ್ ಕಟ್ ಮಾಡಿದ್ದಾರೆ.ಸಣ್ಣ ನೀರಾವರಿ ಲೈಸನ್ಸ್ ತಗೆದುಕೊಳ್ಳಬೇಕು ಎಂದು ಅಲ್ಲಿನ ಅಧಿಕಾರಿಯೊಬ್ಬ ಹೇಳುತ್ತಾನಂತೆ . ಅವನು ಯಾವನೋ ನಾಲಾಯಕ ಅಧಿಕಾರಿ ಇರಬೇಕು. ಅಪ್ಪಾಜಿ ನಾಡಗೌಡರೆ ನಿಮಗೆ ಮಾನ ಮರ್ಯಾದೆ ಇದೆಯಾ ? ಮೊದಲು ಹೋಗಿ ನಾಗೂರಕ್ಕೆ . ಜನ ನಿಮಗೆ ನಿದ್ದೆ ಮಾಡೋಕೆ ಅದಿಕಾರ ಕೊಟ್ಟಿದ್ದಾರೆಯೇ ? ಎಂದು ಖಾರವಾಗಿ ಪ್ರಶ್ನಿಸಿದರು.

Latest News

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ತಾಲ್ಲೂಕಿನ ರೈತರನ್ನು ಅಡ್ಡ ಹಾದಿಗೆಳೆಯುವ ಕುತಂತ್ರ ನಡೆದಿವೆ. ಕುತಂತ್ರಿಗಳ ಪ್ರಚೋದನೆಗೆ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ:                                          ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ: ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ವಿಜಯಪುರ : ಗ್ರಾಮೀಣ ಭಾಗದ ಜನರು, ರೈತರು ಹಾಗೂ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು

ಗಾಂಧೀಜಿಯವರ ಸಂದೇಶಗಳು ಗಾಳಿಪಾಲು-ಆರ್.ಜಿ.ಹಳ್ಳಿ ನಾಗರಾಜ

ಗಾಂಧೀಜಿಯವರ ಸಂದೇಶಗಳು ಗಾಳಿಪಾಲು-ಆರ್.ಜಿ.ಹಳ್ಳಿ ನಾಗರಾಜ

ಮುದ್ದೇಬಿಹಾಳ : ಒಂದೆಡೆ ಮಸೀದಿ,ಇನ್ನೊಂದೆಡೆ ದೇವಸ್ಥಾನ.ಇಂತಹ ಭಾವೈಕ್ಯತೆಯ ನೆಲದಲ್ಲಿ ತಂದೆ-ತಾಯಿಯ ಸ್ಮರಣೆಯೊಂದಿಗೆ ಗಾಂಧೀಜಿ-ಶಾಸ್ತಿçಜಿ ಜಯಂತಿ

ಪ್ರಧಾನಿ ಮೋದಿ ಹೆಸರು ಕೆಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಇಂಚಗೇರಿ ಮಠದ ಶಶಿಕಾಂತ ಗುರೂಜಿ ವಾಗ್ದಾಳಿ

ಪ್ರಧಾನಿ ಮೋದಿ ಹೆಸರು ಕೆಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಇಂಚಗೇರಿ ಮಠದ ಶಶಿಕಾಂತ ಗುರೂಜಿ ವಾಗ್ದಾಳಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ:                                            ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ: ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಮುದ್ದೇಬಿಹಾಳ : ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು 60 ರೂ.ಗಳಿಗೆ ಹೆಚ್ಚಿಸಬೇಕು.ಸಬ್ 2026-27ನೇ ಸಾಲಿನಲ್ಲಿ ಟನ್ ಕಬ್ಬಿಗೆ 5500 ರೂ. ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆ.29 ರಂದು ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ತಮ್ಮ ಸಂಘದ ಕಚೇರಿಯಲ್ಲಿ

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಮುದ್ದೇಬಿಹಾಳ : ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಔಷಧ ತಜ್ಞರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಂಗನಾಥ್ ವೈದ್ಯ ಹೇಳಿದರು. ವಿಶ್ವ ಔಷಧ ತಜ್ಞರ ದಿನಾಚರಣೆ ಅಂಗವಾಗಿ ಮುದ್ದೇಬಿಹಾಳ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಶುಕ್ರವಾರ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ಹಾಗೂ ಬಿಸ್ಕತ್ ವಿತರಿಸಿ ಅವರು ಮಾತನಾಡಿದರು. ವೈದ್ಯರು ರೋಗಿಗಳಿಗೆ