ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ ಸಭೆಯಲ್ಲಿ ರೈತಪರವಾದ ನಿಲುವು ಪ್ರಕಟಗೊಳ್ಳದಿದ್ದರೆ ಅ.13ರಿಂದ ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ತಿಳಿಸಿದರು.

ಪಟ್ಟಣದ ಪಂಜುರ್ಲಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕಬ್ಬಿಗೆ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಮೆಟ್ರಿಕ್ ಟನ್‌ಗೆ ಕನಿಷ್ಠ 8500 ರೂ.ದೊರೆಯುವಂತೆ ಕೇಂದ್ರ ಸರ್ಕಾರವು ಬೆಲೆ ನಿಗದಿ ಮತ್ತು ಬೆಂಬಲ ವ್ಯವಸ್ಥೆ ಜಾರಿಗೊಳಿಸಬೇಕು.ಇದರ ಜೊತೆಗೆ ಕರ್ನಾಟಕ ಸರ್ಕಾರವು ರಾಜ್ಯ ಸಲಹಾ ಬೆಲೆ 1000 ರೂ.ಗಳನ್ನು ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ನೀಡಿ ಒಟ್ಟು ಪ್ರತಿ ಟನ್ ಕಬ್ಬಿಗೆ 9500 ರೂ. ನೀಡಬೇಕು.ಸ್ವಾಮೀನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ನ್ಯಾಯಯುತವಾದ ಬೆಲೆ ಸಿಗಬೇಕು.ಸಕ್ಕರೆ ಉಪ ಉತ್ಪನ್ನಗಳ ಆದಾಯದಲ್ಲಿ ರೈತರಿಗೆ ನ್ಯಾಯ ಸಮ್ಮತ ಪಾಲು ಸಿಗಬೇಕು.ಕಾರ್ಖಾನೆಗಳ ತೂಕ,ರಿಕವರಿ ಮತ್ತು ಕಟಾವು,ಸಾರಿಗೆ ವೆಚ್ಚಗಳ ಕಡಿತಗಳಲ್ಲಿ ಪಾರದರ್ಶಕತೆ ಇರಬೇಕು.ರೈತರಿಗೆ ಸಕಾಲದಲ್ಲಿ ಪೂರ್ಣ ಹಣ ಪಾವತಿಯಾಗಬೇಕು ಎಂಬ ಬೇಡಿಕೆಗಳನ್ನು ಇರಿಸಿಕೊಂಡು ಸಂಘಟನೆಯಿoದ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಕ್ಕರೆ ವಿಷಯದಲ್ಲಿ ಒಪ್ಪಂದದ ಲಾಬಿ ನಡೆಸಿವೆ.ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

2012ರ ರಂಗರಾಜ್ ಸಮಿತಿ ಮತ್ತು ನೀತಿ ಆಯೋಗದ ಶಿಫಾರಸ್ಸಿನಂತೆ ಶೇ.75ರಷ್ಟು ಕೇವಲ ಸಕ್ಕರೆ ಆದಾಯದಲ್ಲಿ ಕಬ್ಬಿನ ಬೆಲೆಗೆ ಆಧಾರವಾಗಿಡುವ ಆದಾಯ ಹಂಚಿಕೆಯನ್ನು ಮಾಡಿತ್ತು.ಪ್ರೊ.ರಮೇಶ ಚಂದ್ ಅವರ ನೀತಿ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು ಎಂಬ ಒತ್ತಾಯಿಸಲಾಗುತ್ತಿದೆ.ಕರ್ನಾಟಕದಲ್ಲಿ ಉತ್ಪಾದನೆಯಾಗುವ ಎಥೆನಾಲ್‌ನ್ನು ಶೇ.100ರಷ್ಟು ಕೇಂದ್ರ ಸರ್ಕಾರ ಖರೀದಿಸಬೇಕು.ಪ್ರತಿ ದಿನ ಸಕ್ಕರೆ ರಿಕವರಿ ಪರೀಕ್ಷೆ ಮತ್ತು ಲೆಕ್ಕ ಪರಿಶೀಲನೆ ಮಾಡಬೇಕು.ಸರ್ಕಾರಿ ಮೇಲ್ವಿಚಾರಣೆಯಲ್ಲಿ ಸ್ವತಂತ್ರö್ಯ ವ್ಹೇಬ್ರಿಡ್ಜ್ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಅ.12ರ ಹೋರಾಟಕ್ಕೆ ವಿಜಯಪುರ ಜಿಲ್ಲೆಯಿಂದ ಮೂವರು ದೆಹಲಿ ಉನ್ನತಮಟ್ಟದ ಸಭೆಗೆ ತೆರಳುತ್ತಿದ್ದೇವೆ.ಅಲ್ಲಿನ ಸಾಧಕ ಬಾಧಕಗಳನ್ನು ಗಮನಿಸಿ ರಾಜ್ಯದ ರೈತರಿಗೆ ತಿಳಿಸುತ್ತೇವೆ.ಸಭೆ ವಿಫಲವಾದರೆ ವಿಜಯಪುರದ ನಿಡಗುಂದಿ ಪಟ್ಟಣದಲ್ಲಿ ಹಾಯ್ದುಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಹೋರಾಟ ಆರಂಭಿಸುತ್ತೇವೆ ಎಂದು ತಿಳಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ನಿಡಗುಂದಿ ತಾಲ್ಲೂಕು ಅಧ್ಯಕ್ಷ ಸೀತಪ್ಪ ಗಣಿ ಮಾತನಾಡಿದರು.ಮುಖಂಡರಾದ ದೇವರಾಜ ಗುಂಡಕನಾಳ,ಶಶಿಕಾoತ ಬಿರಾದಾರ,ಹುಲಗಪ್ಪ ನಾಯ್ಕಮಕ್ಕಳ ಸೇರಿದಂತೆ ಹಲವರು ಇದ್ದರು.

ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಸಂಬoಧಿಸಿದoತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡುವವರೆಗೂ ಯಾರೂ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದೆAದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹುಬ್ಬಳ್ಳಿಯಲ್ಲಿ ನಡೆದ ಹೋರಾಟದ ಸಮಯದಲ್ಲಿ ತಮ್ಮ ಆಪ್ತ ಶಾಸಕರಿಬ್ಬರ ಕಡೆಯಿಂದ ಸೂಚನೆ ಕೊಡಿಸಿದ್ದಾರೆ.ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ದೊರೆಯುವವರೆಗೂ ಕಾರ್ಖಾನೆಗಳನ್ನು ಆರಂಭಿಸಬಾರದು.ಒAದು ವೇಳೆ ಇದನ್ನು ಮೀರಿ ಕಾರ್ಖಾನೆಗಳನ್ನು ಆರಂಭಿಸಿದ್ದೇ ಆದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತ ಸಂಘಟನೆಗಳಿoದ ಹೋರಾಟ ನಡೆಸುತ್ತೇವೆ.ಅಲ್ಲದೇ ಈ ಸಮಯದಲ್ಲಿ ಉಂಟಾಗುವ ಅನಾಹುತಗಳಿಗೆ ಜಿಲ್ಲಾಡಳಿತ,ಆಯಾ ಕಾರ್ಖಾನೆಗಳ ಮಾಲೀಕರೇ ಹೊಣೆಗಾರರಾಗುತ್ತಾರೆ ಎಂದು ಹೋರಾಟಗಾರ ಶಾಂತಗೌಡ ಪಾಟೀಲ ತಿಳಿಸಿದರು.

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಯಾವುದೇ ಕಾರ್ಮಿಕರ ಯೂನಿಯನ್ ರಚಿಸುವುದಕ್ಕೆ ಅಲ್ಲಿನ ಆಡಳಿತ ಮಂಡಳಿಯವರು ಅವಕಾಶ ಕೊಟ್ಟಿಲ್ಲ.ಅಲ್ಲಿ ದುಡಿಯುವ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನವೂ ದೊರೆಯುತ್ತಿಲ್ಲ.ಈ ಕುರಿತು ವರದಿ ನೀಡುವಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಮುಖಂಡ ಶಾಂತಗೌಡ ನಡಹಳ್ಳಿ ತಿಳಿಸಿದರು.

Latest News

ಕೆರೆಗಳಿಗೆ ನೀರು ಹರಿಸಲು ಆಗ್ರಹ:                                                                                                ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಕೆರೆಗಳಿಗೆ ನೀರು ಹರಿಸಲು ಆಗ್ರಹ: ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಮುದ್ದೇಬಿಹಾಳ : ವಿಜಯಪುರ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳಲ್ಲಿ

ಸಜ್ಜನ ಗಾಣಿಗ ಸಮಾಜದಿಂದ ಸನ್ಮಾನ :                                     ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ-ದೇಸಾಯಿ

ಸಜ್ಜನ ಗಾಣಿಗ ಸಮಾಜದಿಂದ ಸನ್ಮಾನ : ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ-ದೇಸಾಯಿ

ಮುದ್ದೇಬಿಹಾಳ : ಐದು ಸಾವಿರ ರೂ.ಕೊಡುವ ಮುನ್ನ ಪತ್ರಕರ್ತರನ್ನು ಕರೆದು ಎಲ್ಲರಿಗೂ ತೋರಿಸುವಂತೆ ಪ್ರಚಾರಗಿಟ್ಟಿಸಿಕೊಳ್ಳುವ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ತಾಲ್ಲೂಕಿನ ರೈತರನ್ನು ಅಡ್ಡ ಹಾದಿಗೆಳೆಯುವ ಕುತಂತ್ರ ನಡೆದಿವೆ. ಕುತಂತ್ರಿಗಳ ಪ್ರಚೋದನೆಗೆ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ:                                          ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ: ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ವಿಜಯಪುರ : ಗ್ರಾಮೀಣ ಭಾಗದ ಜನರು, ರೈತರು ಹಾಗೂ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಮುದ್ದೇಬಿಹಾಳ : ಔಷಧ ತಜ್ಞರು ವೈದ್ಯರ ಬೆನ್ನೆಲುಬಾಗಿದ್ದು ಜೀವ ಉಳಿಸುವ ಮಾರ್ಗದರ್ಶಕರಂತೆ ಕೆಲಸ ಮಾಡುತ್ತಿದ್ದಾರೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು. ಪಟ್ಟಣದ ಏಪಿಎಂಸಿ ಸಭಾಂಗಣದಲ್ಲಿ ತಾಲ್ಲೂಕು ಔಷಧ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈದ್ಯರು ರೋಗ ಪತ್ತೆ ಹಚ್ಚಿದರೆ, ಔಷಧ ತಜ್ಞರು ಅದಕ್ಕೆ ಸರಿಯಾದ ಪರಿಹಾರ ನೀಡುತ್ತಾರೆ. ಗ್ರಾಮೀಣ ಭಾಗದಲ್ಲಿ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಬರಗಾಲದ ಕುರಿತು ಕರೆದಿದ್ದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ರಾಜ್ಯದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಸ್ಪಷ್ಟವಾದ ತೀರ್ಮಾನ,ಗಂಭೀರ ಚರ್ಚೆ ನಡೆಸದೇ ಇರುವುದು ರಾಜ್ಯದ ರೈತ ಕುಲಕ್ಕೆ ಸರ್ಕಾರ ಮಾಡಿರುವ ಅಪಮಾನ.ಸಿಎಂ ಡಿ.ಕೆ.ಶಿವಕುಮಾರ ಈ ವಿಷಯದಲ್ಲಿ ರಾಜ್ಯದ ರೈತರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬರಗಾಲ ಕುರಿತು ನಡೆದ