ಮುದ್ದೇಬಿಹಾಳ : ಸಾಮಾಜಿಕ ಸಹಬಾಳ್ವೆ ಸಾಧ್ಯವಾಗಬೇಕಾದರೆ ಅದು ಕಾನೂನಿಂದ ಮಾತ್ರ ಸಾಧ್ಯವಾಗುತ್ತದೆ. ವಕೀಲರು ಸಮಾಜವನ್ನು ಸರಿದಾರಿಯಲ್ಲಿ ಕರೆದೊಯ್ಯುವ ಮಹತ್ವದ ಪಾತ್ರ ನಿಭಾಯಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ವಿಜಯಪುರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಆಯ್.ಅರುಣ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ನ್ಯಾಯಾಲಯಕ್ಕೆ ಭಾನುವಾರ ಔಪಚಾರಿಕವಾಗಿ ಭೇಟಿ ನೀಡಿ ಅವರು ಇಲ್ಲಿನ ವಕೀಲರ ಸಂಘದಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಕೀಲರು ನ್ಯಾಯಾಲಯದಲ್ಲಿ ಕೇಸ್ ಒಂದನ್ನು ನಡೆಸುತ್ತಿರುವಾಗ ಆ ಕಕ್ಷಿದಾರರು ತಮ್ಮ ಕುಟುಂಬದ ಸದಸ್ಯರಂತೆ ವಕೀಲರನ್ನು ಕಾಣುತ್ತಾರೆ. ಅವರಿಗೆ ಸರಿಯಾದ ದಾರಿ ತೋರುವುದು ವಕೀಲರ ಕರ್ತವ್ಯವಾಗಿದೆ ಎಂದರು.
ಕೇವಲ ವಕೀಲ ವೃತ್ತಿಯ ಜೊತೆಗೆ ಬೇರೆ ಬೇರೆ ವೃತ್ತಿಯನ್ನು ಕೈಗೊಳ್ಳುವ ಅವಶ್ಯಕತೆ ಗ್ರಾಮೀಣ ಭಾಗದಲ್ಲಿರುವ ಕೋರ್ಟ್ಗಳಲ್ಲಿ ಕಾರ್ಯನಿರ್ವಹಿಸುವ ವಕೀಲರಿಗೆ ಇದೆ. ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು ಮುದ್ದೇಬಿಹಾಳದಲ್ಲಿಯೇ ಕೂತು ಕಲಬುರಗಿ, ಬೆಂಗಳೂರು ಕೋರ್ಟ್ನಲ್ಲಿ ಕೇಸ್ ನಡೆಸಬಹುದಾಗಿದೆ. ಅಂತಹ ತಂತ್ರಜ್ಞಾನದ ಬಳಕೆಯನ್ನು ನುರಿತ ತಜ್ಞರಿಂದ ತಿಳಿದು ಅದನ್ನು ಅನುಷ್ಠಾನಕ್ಕೆ ತಂದರೆ ವಕೀಲರ ವೃತ್ತಿಪರತೆಯಲ್ಲಿ ಸುಧಾರಣೆ ಕಾಣಲು ಸಾಧ್ಯವಿದೆ. ಪೇಪರ್‌ಲೆಸ್ ಕೋರ್ಟ್ ನಡೆಸುವ ಕಾರ್ಯಕ್ಕೆ ವಕೀಲರು ಒತ್ತು ನೀಡಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ನಮ್ಮ ಭಾಗದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಈ ಕಟ್ಟಡ ಈಗಿನ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಅವಧಿಯಲ್ಲಿ ಸದ್ಯದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ಶ್ರಮದಿಂದ ನಿರ್ಮಾಣವಾಗಿದೆ.ಲಾಯರ್ ಚೇಂರ‍್ಸ್ ಹಾಗೂ ಎಪಿಪಿ ಕಚೇರಿ ಕಟ್ಟಡ ನಿರ್ಮಾಣವಾಗಿದ್ದು ಅದರ ಲೋಕಾರ್ಪಣೆಗೆ ಶೀಘ್ರ ಆಗಲಿದೆ.ಜಿಲ್ಲಾ ನ್ಯಾಯಾಲಯದ ಬೇಡಿಕೆ, ತಾಳಿಕೋಟಿಯಲ್ಲಿ ಕಾಯಂ ಕೋರ್ಟ್ ಸ್ಥಾಪನೆ ಬಗ್ಗೆ ಆದಷ್ಟು ಬೇಗ ಕಾರ್ಯಗತಗೊಳಿಸುವ ಕಾರ್ಯ ಆಗಬೇಕು ಎಂದರು.
ಜಿಲ್ಲಾ ನ್ಯಾಯಾಧೀಶರಾದ ಶಿವಾಜಿ ನಲವಡೆ, ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ, ಸಂಪತ್ತಕುಮಾರ ಬಳೂಲಗಿಡದ, ಮಲ್ಲಿಕಾರ್ಜುನ ಅಂಬಲಿ, ಅರವಿಂದ ಹಾಗರಗಿ ಇದ್ದರು.
ಇದನ್ನೂ ಓದಿ: ಸೆ.29 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ
ವಕೀಲರಾದ ಎಚ್.ಜಿ.ನಾಗೋಡ ಸ್ವಾಗತಿಸಿದರು. ಎನ್.ಆರ್.ಮೊಕಾಶಿ ನಿರೂಪಿಸಿದರು. ಎಸ್.ಜಿ.ಕುಲಕರ್ಣಿ ಪರಿಚಯಿಸಿದರು.
ಇದಕ್ಕೂ ಮುನ್ನ ಮುದ್ದೇಬಿಹಾಳದ ನ್ಯಾಯಾಲಯದ ಕಟ್ಟಡ ಹಾಗೂ ಲಾರ‍್ಸ್ ಚೇಂರ‍್ಸ್,ಎಪಿಪಿ ನೂತನ ಕಟ್ಟಡವನ್ನು ನ್ಯಾಯಮೂರ್ತಿ ಅರುಣ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುದ್ದೇಬಿಹಾಳಕ್ಕೆ ಪ್ರಥಮ ಬಾರಿ ಭೇಟಿ ನೀಡಿದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ವಕೀಲರ ಸಂಘದವರು ಸನ್ಮಾನಿಸಿದರು.

ಕಾರ್ಯಕ್ರಮ ನಿಗದಿಯಾಗಿದ್ದು ಬೆಳಗ್ಗೆ 11 ಗಂಟೆಗೆ ಇದ್ದರೂ ಬ.ಬಾಗೇವಾಡಿ ಕಾರ್ಯಕ್ರಮ ಮುಗಿಸಿಕೊಂಡು ಬರುವಷ್ಟರಲ್ಲೇ ಮದ್ಯಾಹ್ನ 3.20ರ ಹೊತ್ತಾಗಿತ್ತು. ನ್ಯಾಯಾಲಯದ ಕಟ್ಟಡ ವೀಕ್ಷಣೆ ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ ನ್ಯಾಯಮೂರ್ತಿಗಳು ತಮ್ಮ ಭಾಷಣದಲ್ಲಿ ತಡವಾಗಿ ಆಗಮಿಸಿದ್ದಕ್ಕೆ ವಕೀಲ ವೃಂದದವರಲ್ಲಿ ಕ್ಷಮೆ ಕೋರಿದರು.