ಮುದ್ದೇಬಿಹಾಳ : ಹೂಗಾರರ ಕುಲಕಸುಬು ಹೂವಿನ ವ್ಯಾಪಾರ ಮಾಡಲು ಪುರಸಭೆಯಿಂದ ಮಳಿಗೆಗಳನ್ನು ಸ್ಥಾಪಿಸಿ ಅನುಕೂಲ ಒದಗಿಸಿಕೊಡಬೇಕು ಎಂದು ಹೂಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರದೀಪ ಹೂಗಾರ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಪೊಲೀಸ್ ಸ್ಟೇಷನ್ ಹತ್ತಿರ ಇರುವ ಶಿವಶರಣ ಹೂಗಾರ ಮಾದಯ್ಯನವರ ವೃತ್ತದಲ್ಲಿ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಶರಣ ಹೂಗಾರ ಮಾದಯ್ಯನವರ ಬಗ್ಗೆ ಬೆಳಕು ಚೆಲ್ಲುವ ಅಗತ್ಯವಿದೆ. ಅವರ ಬಗ್ಗೆ ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ಮಾಡಲು ವಿಪುಲ ಅವಕಾಶಗಳಿವೆ. ವಿಶ್ವವಿದ್ಯಾಲಯಗಳಲ್ಲಿ ಹೂಗಾರ ಮಾದಯ್ಯ ಅವರ ಬಗ್ಗೆ ಅಧ್ಯಯನ ಕೇಂದ್ರ ಆರಂಭಿಸಬೇಕು ಎಂದರು.
ಪ್ರೋ.ಎಸ್.ಎಸ್.ಹೂಗಾರ ಮಾತನಾಡಿ, ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬುದಕ್ಕೆ ಮಾದಯ್ಯ ಉತ್ತಮ ನಿದರ್ಶನವಾಗಿದ್ದರು. ಅವರು ರಚಿಸಿದ ಕೆಲವೇ ವಚನಗಳು ಲಭ್ಯವಾಗಿವೆ. ಆ ವಚನಗಳಲ್ಲಿ ಅವರು ಸಾಮಾಜಿಕ ಸಮಾನತೆ, ಮೂಢನಂಬಿಕೆ, ಅಂಧಶ್ರದ್ಧೆಯ ಬಗ್ಗೆ ಉಲ್ಲೇಖಿಸಿದ್ದಾರೆ’ ಎಂದರು.
ಮುಖಂಡರಾದ ಬಸವರಾಜ್ ಹೂಗಾರ, ಚಂದ್ರಶೇಖರ ಹೂಗಾರ, ಎಚ್ ಕೆ ಪೂಜಾರಿ, ಮಾಂತೇಶ ವಡವಡಗಿ, ಬಸವರಾಜ ವಡವಡಗಿ, ವಿಜಯಕುಮಾರ ವಡವಡಗಿ, ಸಂತೋಷ ಹೂಗಾರ, ಸಂತೋಷ ಹೂಗಾರ,ಶಿವರಾಜ ಹೂಗಾರ, ಶರಣು ಹೂಗಾರ, ಪ್ರಕಾಶ ಹೂಗಾರ ,ಮುತ್ತಣ್ಣ ಹೂಗಾರ,ಡಾ.ಚಂದ್ರಶೇಖರ ಹೂಗಾರ, ಅಜಿತ ಹೂಗಾರ ಇದ್ದರು.
ಇದನ್ನೂ ಓದಿ: Ration card : ಪಡಿತರ ಚೀಟಿಯಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೇ? ಪರಿಶೀಲಿಸಿ..