ನಾಲತವಾಡ / ಮುದ್ದೇಬಿಹಾಳ : ಗ್ರಾಮೀಣ ಭಾಗದ ಜನರು ದೊಡ್ಡ ದೊಡ್ಡ ಪಟ್ಟಣಗಳಿಗೆ ತೆರಳಿ ತಮ್ಮ ಹಣಕಾಸು ಚಟುವಟಿಕೆಗಳನ್ನು ನಿರ್ವಹಿಸಿಕೊಳ್ಳಲು ಹೋಗುವ ತೊಂದರೆ ನಿವಾರಣೆಗೆ ನಾಲತವಾಡದಂತಹ ಸಣ್ಣ ಪಟ್ಟಣ ಪ್ರದೇಶದಲ್ಲಿ ರಾಷ್ಟ್ರಿಕೃತ ಬ್ಯಾಂಕ್‌ಗಳಿಗೆ ಸರಿಸಮಾನ ಎನ್ನುವ ಮಟ್ಟದಲ್ಲಿ ಬ್ಯಾಂಕ್ ಸ್ಥಾಪನೆ ಮಾಡಿ ಜನರಿಗೆ ಉತ್ತಮ ಸೇವೆ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಶ್ರೀ ಶರಣ ವೀರೇಶ್ವರ ಪಟ್ಟಣದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಪಾಟೀಲ್ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ರತ್ನ ಸಂಗಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ಯಾಂಕಿನ 28ನೇ ವಾರ್ಷಿಕ ಮಹಾಸಭೆ,ಸಾಧಕರಿಗೆ ಹಾಗೂ ಬ್ಯಾಂಕಿನ ಉತ್ತಮ ಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸನ್ 2023-24ನೇ ಸಾಲಿನಲ್ಲಿ ಸಾಲ ವಸೂಲಾತಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಬ್ಯಾಂಕು ವರ್ಷಾಂತ್ಯಕ್ಕೆ 1.05 ಕೋಟಿ ರೂ.ಲಾಭ ಗಳಿಸಿದೆ.ಬ್ಯಾಂಕಿನ ಗ್ರಾಹಕರಿಗೆ ಶೇ.12ರಷ್ಟು ಲಾಭಾಂಶ ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಬ್ಯಾಂಕಿನ ನಿರ್ದೇಶಕ ಬಿ.ಟಿ.ತಿರುಮುಖೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಡಿ.ಆರ್.ಮಳಖೇಡ ವರದಿ ವಾಚಿಸಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಅಂಗಡಿ, ನಿರ್ದೇಶಕರಾದ ಬಸಣ್ಣ ವಡಗೇರಿ, ನಂದಪ್ಪ ಗಂಗನಗೌಡರ, ಸಿದ್ರಾಮಪ್ಪ ಹಂಪನಗೌಡ್ರ, ಖಾಜಾಹುಸೇನ ಎತ್ತಿನಮನಿ, ಈಶ್ವರಪ್ಪ ಚಿನಿವಾಲರ, ಸುಭಾಷ ಡಿಗ್ಗಿ, ಉಮೇಶ ಇಲಕಲ್, ಬಾಲಪ್ಪ ಹಟ್ಟಿ, ಶ್ರೀದೇವಿ ಹುಮನಾಬಾದ, ಲಕ್ಷ್ಮೀ ಹಂಪನಗೌಡರ, ಪ್ರಧಾನ ವ್ಯವಸ್ಥಾಪಕ ನಾಗರಾಜ ಗಂಗನಗೌಡರ, ಉಪ ಪ್ರಧಾನ ವ್ಯವಸ್ಥಾಪಕ ಅಶೋಕ ಹಡಲಗೇರಿ, ವ್ಯವಸ್ಥಾಪಕ ಶರಣು ಕರಡಿ, ಸಲಹಾ ಸಮಿತಿ ಸದಸ್ಯರು, ನಾಲತವಾಡ, ಮುದ್ದೇಬಿಹಾಳ, ಲಿಂಗಸುಗೂರು, ಹುಣಸಗಿ, ತಾಳಿಕೋಟಿ ಶಾಖೆಗಳ ಸದಸ್ಯರು ಇದ್ದರು.
ಇದನ್ನೂ ಓದಿ: ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಾನೂನು ರೂಪಿಸಿ: ಕರ್ನಾಟಕ ಮುಸ್ಲಿಂ ಫೋರಂ ಆಗ್ರಹ (ವಿಡಿಯೋ ನೋಡಿ)
ರಾಜು ಹಾದಿಮನಿ ನಿರೂಪಿಸಿದರು. ವಿ.ಎಸ್.ಮಳಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಾಣಿಜ್ಯೋದ್ಯಮ ವಾಣಿಜ್ಯ ರತ್ನ ಪ್ರಶಸ್ತಿ ಪಡೆದ ಮುದ್ದೇಬಿಹಾಳದ ಉದ್ಯಮಿ ಶರಣು ಸಜ್ಜನ ಅವರನ್ನು ಹಾಗೂ ಶೇರು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.