ಕಲಾಂ ಮೈನಾರಿಟಿ ಪತ್ತಿನ ಸಹಕಾರಿ ಸಂಘದಿoದ 3ಕೋಟಿ ಗೂ ಅಧಿಕ ರೂ.ಸಾಲ ಹಂಚಿಕೆ

ಕಲಾಂ ಮೈನಾರಿಟಿ ಪತ್ತಿನ ಸಹಕಾರಿ ಸಂಘದಿoದ 3ಕೋಟಿ ಗೂ ಅಧಿಕ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳದ ಕಲಾಂ ಅಲ್ಪಸಂಖ್ಯಾತ ಪತ್ತಿನ ಸಹಕಾರ ಸಂಘ ನಿಯಮಿತ 9 ನೇ ವಾರ್ಷಿಕ ಮಹಾಸಭೆ ಮಂಗಳವಾರ ಸಂಘದ ಸಭಾ ಭವನದಲ್ಲಿ ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಾಬುಸಾಬ ಮುಲ್ಲಾ, ನಿರ್ದೇಶಕ ಹುಸೇನ್ ಮುಲ್ಲಾ , ಸಂಘವು 2025_26 ನೇ ಸಾಲಿನಲ್ಲಿ 4.50 ಲಕ್ಷ ರೂ ನಿವ್ವಳ ಲಾಭವನ್ನು ಗಳಿಸಿದೆ 8 ಲಕ್ಷ ರೂ ನೀರಿಕ್ಷೆ ಹೊಂದಿದ್ದೇವು. ಸಂಘವು ವಿವಿಧ ಸಾಲ ಸೌಲಭ್ಯಕ್ಕಾಗಿ 3 ಕೋಟಿ ಸಾಲವನ್ನು ನೀಡಿದೆ. ಸರ್ವರು ಸ್ವಾವಲಂಬಿ ಜೀವನ ನಡೆಸುವಂತಾಗಲು ಸಂಘದ ಪ್ರಮುಖ ಉದ್ದೇಶವಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಗಣಕೀಕೃತ ಸೌಲಭ್ಯ ಇದೆ. ಸಹಕಾರ ಸಂಘ ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ್‌ರ ಪ್ರೋತ್ಸಾಹ ಮತ್ತು ಶಾಸಕ ಸಿ.ಎಸ್ ನಾಡಗೌಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಅಕ್ಸ್ಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ಪರ್ಧಾತ್ಮಕವಾಗಿ ಕಲಾಂ ಅಲ್ಪಸಂಖ್ಯಾತರ ಸಹಕಾರ ಸಂಘ ಬೆಳೆಯಬೇಕು. ಸರ್ವ ಸದಸ್ಯರ ಸಹಕಾರ ವಿಶ್ವಾಸಾರ್ಹತೆ ಮತ್ತು ಸದಸ್ಯರು ಹೆಚ್ಚಿನ ಡಿಪಾಜಿಟ್ ಸಂಘದಲ್ಲಿ ಮಾಡಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಸಹ ಸಂಘದ ಏಳ್ಗೆಗೆ ಪ್ರಾಮುಖ್ಯತೆ ಪಡೆಯುತ್ತದೆ ಎಂದರು.

ಮುದ್ದೇಬಿಹಾಳ ಅಂಜುಮನ್ ನೂತನ ಕಮಿಟಿಯ ಸರ್ವ ಸದಸ್ಯರಿಗೆ ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದ ಹಾಗೂ ಉತ್ತಮ ಪಿಗ್ಮಿ ಹಾಗೂ ಡಿಪಾಜಿಟ್ ಮಾಡಿದ ಗ್ರಾಹಕರಿಗೆ ಉತ್ತಮ ಗ್ರಾಹಕರು ಎಂದು ಗೌರವಿಸಿ ಸನ್ಮಾನಿಸಿದರು.

ಸನ್ಮಾನಿತರ ಪರವಾಗಿ ಅಂಜುಮನ್ ಕಮಿಟಿಯ ಅಧ್ಯಕ್ಷ ಅಲ್ಲಾಭಕ್ಷ ದೇಸಾಯಿ ಮಾತನಾಡಿದರು.ಮುಖ್ಯ ಕಾರ್ಯನಿರ್ವಾಹಕ ಮಹಮ್ಮದ್‌ರಫಿಕ್ ಅವಟಿ ವಾರ್ಷಿಕ ವರದಿ ವಾಚಿಸಿ ಸಂಘದಲ್ಲಿ ಆಸ್ತಿ ಭದ್ರತೆ ಸಾಲ,ವಾಹನ ಸಾಲ ,ಚಿನ್ನದ ಮೇಲೆ ಸಾಲ ಹಾಗೂ ವ್ಯಾಪಾರ ವಹಿವಾಟು ಗೆ ವಿಶೇಷ ಸಾಲ ಸೌಲಭ್ಯ ಇದೆ ಎಂದು ಮಾಹಿತಿ ನೀಡಿದರು.

ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಜಾವೀದ ಇನಾಮದಾರ, ಪೀರಸಾಬ ಮುಲ್ಲಾ, ಮಹೆಬೂಬ ಧನ್ನೂರ, ಮುರ್ತುಜ ಮುದ್ದೇಬಿಹಾಳ, ಇಮಾಮಸಾಬ ಮಲಗಲದಿನ್ನಿ, ಅಲ್ಲಾಭಕ್ಷ ಟಕ್ಕಳಕಿ, ಹುಸೇನಬಾಷಾ ತಾಳಿಕೋಟಿ, ಶ್ರೀಮತಿ ಅಮಿನಾಬೇಗಂ ಸುರಪುರ, ಶಮಶಾದಬೇಗಂ ಮಕಾನದಾರ, ಸುಲ್ತಾನಬೇಗಂ ಮುಲ್ಲಾ ಸಿಬ್ಬಂದಿ ಪ್ರವೀಣ ನಾಗರಬೆಟ್ಟ, ಯಮನೂರ ಬೈಲಪತ್ತಾರ,ಮಲ್ಲಿಕಾರ್ಜುನ ಕೆಂಭಾವಿ, ಪ್ರಜ್ವಲ ನಾಗರಬೆಟ್ಟ, ಕುತಬುದ್ದಿನ್ ಕವಡಿಮಟ್ಟಿ ಸೇರಿದಂತೆ ಸಂಘದ ಸದಸ್ಯರು ಶೇರುದಾರರು ಭಾಗವಹಿಸಿದ್ದರು.

Latest News

9.49 ಲಕ್ಷ ರೂ.ಲಾಭ :                                                           ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

9.49 ಲಕ್ಷ ರೂ.ಲಾಭ : ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ಈ ಆರ್ಥಿಕ ವರ್ಷದಲ್ಲಿ ಒಟ್ಟು 4.47 ಕೋಟಿ ರೂ.ಸಾಲ ರೈತರಿಗೆ ಹಂಚಿಕೆ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ : ಪ್ರಸಕ್ತ ವರ್ಷ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಭೀಕರ ಬರಗಾಲವಿದ್ದು ರೈತರು ಸಂಕಷ್ಟದಲ್ಲಿದ್ದು ಶಾಸಕ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ:                       ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ: ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಮುದ್ದೇಬಿಹಾಳ : ನಮ್ಮ ಸಂಘದ ಹಿಂದಿನ ಕಾರ್ಯದರ್ಶಿ ಮಾಡಿದ ಅವ್ಯವಹಾರದಿಂದ ಸಂಘಕ್ಕೆ ಲಾಭಾಂಶ ಕಡಿಮೆಯಾಗಿದೆ.ಅವರ

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ತಾಲ್ಲೂಕು ಬರಪೀಡಿತ ಎಂದು ಘೋಷಣೆಗೆ ಸ್ಥಳ ಪರಿಶೀಲನೆಗೆ ಆದೇಶ ಮಾಡಿದ್ದಾರೆ.ಅಧಿಕೃತವಾಗಿ ಬರಪೀಡಿತ ತಾಲ್ಲೂಕು ಇನ್ನೂವರೆಗೂ ಘೋಷಣೆಯಾಗಿಲ್ಲ.ಎರಡು ದಿನಗಳ ಕಾಲ ಮಣ್ಣಿನ ತೇವಾಂಶ,ಬೆಳೆಯ ಗುಣಮಟ್ಟ,ವಾತಾವರಣದಲ್ಲಿ ತೇವಾಂಶ ಎಷ್ಟಿದೆ ಎಂದು ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕು.ಈಗ ಸಾಧಾರಣ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ದಾಸೋಹ ನಿಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ದಿನವೂ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ : ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ನಾಡಗೌಡರ ಅಭಿಮಾನಿಗಳು ಗುರುವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿ ಬಿಡುಗಡೆಯಾಗುತ್ತಲೇ ಅದರಲ್ಲಿ ಮುದ್ದೇಬಿಹಾಳ ತಾಲ್ಲೂಕು ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ,ಸಿಎಂ,ಕoದಾಯ ಮಂತ್ರಿ ಹಾಗೂ ಶಾಸಕ ಸಿ.ಎಸ್.ನಾಡಗೌಡರಿಗೆ ಜಯಘೋಷಗಳನ್ನು ಹಾಕಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ