ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ ಒಟ್ಟು ರೈತರಿಗೆ 8.18 ಕೋಟಿ ರೂ.ಸಾಲ ಹಂಚಿಕೆ ಮಾಡಲಾಗಿದೆ ಎಂದು ಮುದ್ದೇಬಿಹಾಳ ಪಿಕೆಪಿಎಸ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವೀರೇಶ ಅಗ್ಗಿಮಠ ಹೇಳಿದರು.
ತಾಲ್ಲೂಕಿನ ಕುಂಟೋಜಿಯಲ್ಲಿರುವ ಪಿಕೆಪಿಎಸ್‌ನ ಕಟ್ಟಡದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 51ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.2026ರ ಮಾರ್ಚ್ ಅಂತ್ಯಕ್ಕೆ 2353 ಶೇರು ಸದಸ್ಯರುಗಳಿದ್ದು 110.3 ಕೋಟಿ ರೂ.ಹೂಡಿಕೆ ಇದೆ ಎಂದು ತಿಳಿಸಿದರು.ಸ್ಥಾನಿಕ ಬ್ಯಾಂಕುಗಳ ಪೈಪೋಟಿ ಮಧ್ಯೆಯೂ ಸಂಘವು ಪ್ರಗತಿಯಲ್ಲಿ ಸಾಗಿದ್ದು ಸಂಘವು ಈ ಸಾಲಿನಲ್ಲಿ ಒಟ್ಟು 16.17 ಲಕ್ಷ ರೂ.ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಸಂಘದ ನಿರ್ದೇಶಕ ಎಂ.ಎಸ್.ಬಿರಾದಾರ ಮಾತನಾಡಿ,ಸಂಘದ ದೀರ್ಘಕಾಲಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿಯಾಗಿ ಠೇವಣಿಗಳ ಸಂಗ್ರಹಕ್ಕೆ ಪ್ರೋತ್ಸಾಹ ನೀಡಬೇಕು.ಸದಸ್ಯರು ರೋಖ ಪತ್ತಿನ ಬೆಳೆ ಸಾಲ ಪಡೆದುಕೊಂಡರೆ ಕೃಷಿ ಅಭಿವೃದ್ಧಿಗೆ ಅನುಕೂಲವಾಗಲಿದ್ದು ಹಣ ತೆಗೆದುಕೊಳ್ಳುವುದು ಹಾಗೂ ಠೇವಣಿ ಇಡುವುದು ಸುಲಭವಾಗಿದೆ.ಇದರಿಂದ ಹೆಚ್ಚಿನ ಬಡ್ಡಿ ಹೊರೆ ಇರುವುದಿಲ್ಲ ಎಂದು ಸದಸ್ಯರಲ್ಲಿ ಹೇಳಿದರು.
ಸಂಘದ ಅಧ್ಯಕ್ಷ ಶಿವಾನಂದ ಹುಲಗಣ್ಣಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಈರಪ್ಪ ಬಿರಾದಾರ,ನಿರ್ದೇಶಕರಾದ ಚರಮೂರ್ತಿ ಅಬ್ಯಾಳಮಠ,ಪರಶುರಾಮ ಮಡಿವಾಳರ,ಅಪ್ಪಾಜಯ್ಯ ಕೊಡೆಕಲ್ಲಮಠ,ನಂದಾ ಬಾಗೇವಾಡಿ,ಗಂಗಾಬಾಯಿ ಬಿರಾದಾರ,ಈರಣ್ಣ ಪಣೇದಕಟ್ಟಿ,ಪ್ರದೀಪ ಸುಧಾಕರ,ಶರಣಬಸ್ಸು ಪಲ್ಲೇದ,ಕ್ಷೇತ್ರಾಧಿಕಾರಿ ಎನ್.ಸಿ.ಸಾಸನೂರ,ಎ.ಎಸ್.ಬಿರಾದಾರ,ಪ್ರಮುಖರಾದ ಸಂಗನಗೌಡ ಪಾಟೀಲ,ಶಿವಲಿಂಗಪ್ಪ ಗಸ್ತಿಗಾರ,ಗುರುಲಿಂಗಪ್ಪ ಸುಲ್ಲಳ್ಳಿ, ನಾಗಲಿಂಗಯ್ಯ ಮಠ,ರವಿ ಜಗಲಿ,ಬಸಲಿಂಗಪ್ಪಗೌಡ ಬಿರಾದಾರ,ಮಲ್ಲಿಕಾರ್ಜುನ ನಾಟೇಕಾರ,ರಾಮಣ್ಣ ಹುಲಗಣ್ಣಿ,ಡಿಸಿಸಿ ಬ್ಯಾಂಕ್ ನೋಡಲ್ ಅಧಿಕಾರಿ ಎಸ್.ಎಸ್.ಉಣ್ಣಿಬಾವಿ, ಸಿಬ್ಬಂದಿ ಆನಂದ ಕಾಟಿ,ನಿಂಗಪ್ಪ ಮಡಿವಾಳರ ಇದ್ದರು.ಭಾರತಿ ನಾಟೀಕಾರ ನಿರೂಪಿಸಿದರು.ಸಂಘದ ನಿರ್ದೇಶಕಿ ನಂದಾ ಬಾಗೇವಾಡಿ ಅವರು ಸಂಘಕ್ಕೆ ಟೇಬಲ್ ಖುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದು ಅವರನ್ನು ಅಭಿನಂದಿಸಲಾಯಿತು.







