ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳದ ಕಲಾಂ ಅಲ್ಪಸಂಖ್ಯಾತ ಪತ್ತಿನ ಸಹಕಾರ ಸಂಘ ನಿಯಮಿತ 9 ನೇ ವಾರ್ಷಿಕ ಮಹಾಸಭೆ ಮಂಗಳವಾರ ಸಂಘದ ಸಭಾ ಭವನದಲ್ಲಿ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಾಬುಸಾಬ ಮುಲ್ಲಾ, ನಿರ್ದೇಶಕ ಹುಸೇನ್ ಮುಲ್ಲಾ , ಸಂಘವು 2025_26 ನೇ ಸಾಲಿನಲ್ಲಿ 4.50 ಲಕ್ಷ ರೂ ನಿವ್ವಳ ಲಾಭವನ್ನು ಗಳಿಸಿದೆ 8 ಲಕ್ಷ ರೂ ನೀರಿಕ್ಷೆ ಹೊಂದಿದ್ದೇವು. ಸಂಘವು ವಿವಿಧ ಸಾಲ ಸೌಲಭ್ಯಕ್ಕಾಗಿ 3 ಕೋಟಿ ಸಾಲವನ್ನು ನೀಡಿದೆ. ಸರ್ವರು ಸ್ವಾವಲಂಬಿ ಜೀವನ ನಡೆಸುವಂತಾಗಲು ಸಂಘದ ಪ್ರಮುಖ ಉದ್ದೇಶವಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಗಣಕೀಕೃತ ಸೌಲಭ್ಯ ಇದೆ. ಸಹಕಾರ ಸಂಘ ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ್ರ ಪ್ರೋತ್ಸಾಹ ಮತ್ತು ಶಾಸಕ ಸಿ.ಎಸ್ ನಾಡಗೌಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಅಕ್ಸ್ಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸ್ಪರ್ಧಾತ್ಮಕವಾಗಿ ಕಲಾಂ ಅಲ್ಪಸಂಖ್ಯಾತರ ಸಹಕಾರ ಸಂಘ ಬೆಳೆಯಬೇಕು. ಸರ್ವ ಸದಸ್ಯರ ಸಹಕಾರ ವಿಶ್ವಾಸಾರ್ಹತೆ ಮತ್ತು ಸದಸ್ಯರು ಹೆಚ್ಚಿನ ಡಿಪಾಜಿಟ್ ಸಂಘದಲ್ಲಿ ಮಾಡಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಸಹ ಸಂಘದ ಏಳ್ಗೆಗೆ ಪ್ರಾಮುಖ್ಯತೆ ಪಡೆಯುತ್ತದೆ ಎಂದರು.
ಮುದ್ದೇಬಿಹಾಳ ಅಂಜುಮನ್ ನೂತನ ಕಮಿಟಿಯ ಸರ್ವ ಸದಸ್ಯರಿಗೆ ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದ ಹಾಗೂ ಉತ್ತಮ ಪಿಗ್ಮಿ ಹಾಗೂ ಡಿಪಾಜಿಟ್ ಮಾಡಿದ ಗ್ರಾಹಕರಿಗೆ ಉತ್ತಮ ಗ್ರಾಹಕರು ಎಂದು ಗೌರವಿಸಿ ಸನ್ಮಾನಿಸಿದರು.
ಸನ್ಮಾನಿತರ ಪರವಾಗಿ ಅಂಜುಮನ್ ಕಮಿಟಿಯ ಅಧ್ಯಕ್ಷ ಅಲ್ಲಾಭಕ್ಷ ದೇಸಾಯಿ ಮಾತನಾಡಿದರು.ಮುಖ್ಯ ಕಾರ್ಯನಿರ್ವಾಹಕ ಮಹಮ್ಮದ್ರಫಿಕ್ ಅವಟಿ ವಾರ್ಷಿಕ ವರದಿ ವಾಚಿಸಿ ಸಂಘದಲ್ಲಿ ಆಸ್ತಿ ಭದ್ರತೆ ಸಾಲ,ವಾಹನ ಸಾಲ ,ಚಿನ್ನದ ಮೇಲೆ ಸಾಲ ಹಾಗೂ ವ್ಯಾಪಾರ ವಹಿವಾಟು ಗೆ ವಿಶೇಷ ಸಾಲ ಸೌಲಭ್ಯ ಇದೆ ಎಂದು ಮಾಹಿತಿ ನೀಡಿದರು.
ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಜಾವೀದ ಇನಾಮದಾರ, ಪೀರಸಾಬ ಮುಲ್ಲಾ, ಮಹೆಬೂಬ ಧನ್ನೂರ, ಮುರ್ತುಜ ಮುದ್ದೇಬಿಹಾಳ, ಇಮಾಮಸಾಬ ಮಲಗಲದಿನ್ನಿ, ಅಲ್ಲಾಭಕ್ಷ ಟಕ್ಕಳಕಿ, ಹುಸೇನಬಾಷಾ ತಾಳಿಕೋಟಿ, ಶ್ರೀಮತಿ ಅಮಿನಾಬೇಗಂ ಸುರಪುರ, ಶಮಶಾದಬೇಗಂ ಮಕಾನದಾರ, ಸುಲ್ತಾನಬೇಗಂ ಮುಲ್ಲಾ ಸಿಬ್ಬಂದಿ ಪ್ರವೀಣ ನಾಗರಬೆಟ್ಟ, ಯಮನೂರ ಬೈಲಪತ್ತಾರ,ಮಲ್ಲಿಕಾರ್ಜುನ ಕೆಂಭಾವಿ, ಪ್ರಜ್ವಲ ನಾಗರಬೆಟ್ಟ, ಕುತಬುದ್ದಿನ್ ಕವಡಿಮಟ್ಟಿ ಸೇರಿದಂತೆ ಸಂಘದ ಸದಸ್ಯರು ಶೇರುದಾರರು ಭಾಗವಹಿಸಿದ್ದರು.







