ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ತಾಲ್ಲೂಕಿನ ರೈತರನ್ನು ಅಡ್ಡ ಹಾದಿಗೆಳೆಯುವ ಕುತಂತ್ರ ನಡೆದಿವೆ. ಕುತಂತ್ರಿಗಳ ಪ್ರಚೋದನೆಗೆ ಒಳಗಾಗಬೇಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾನೂ ಸಹ ರೈತನೇ, ವೇದಿಕೆಯಲ್ಲಿರುವ ಇವರೆಲ್ಲ ಅಧಿಕಾರಿಗಳು ರೈತರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಅಪಪ್ರಚಾರ ನಡೆದಿದೆ. ಸರಕಾರ ನಿಮ್ಮ ಪರವಾಗಿಯೇ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಶಾಸಕ ನಾಡಗೌಡರಿಗೆ ರೈತರೆಂದರೆ ಏಕೆ ಸಿಟ್ಟು ಎಂದು ಶಬ್ದ ಬಳಸಿ ನನ್ನ ಹೆಸರನ್ನು ಬಳಸುತ್ತಿದ್ದಾರೆ. ನಾನು ಎಂದಿಗೂ ರೈತರೊಂದಿಗೆ ಇದ್ದೇನೆ ಎಂದ ಶಾಸಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದರು.

ಪ್ರಜಾಸೇವೆ ಕಾರ್ಯಕ್ರಮ ಜನರೊಂದಿಗೆ ಬೆರೆಯುವ ಮಹತ್ತರ ಆಂದೋಲನವಾಗಿದೆ.ಕೋರ್ಟ್ ವ್ಯಾಜ್ಯಗಳನ್ನು ಹೊರತುಪಡಿಸಿ ಎಲ್ಲಾ ಇಲಾಖೆಗಳಿಂದ ಬಂದ ಸಮಸ್ಯೆಗಳಿಗೆ ಸಂಬAಧಿಸಿದ ಅಧಿಕಾರಿಗಳಿಂದ ಪರಿಹಾರ ನೀಡುವ ಒಂದು ಮಹತ್ತರ ಸಭೆ ಇದಾಗಿದೆ ಎಂದರು.

ಬರಲಿರುವ ದಿನಗಳಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ಬೃಹತ್ ಪ್ರಜಾಸೇವೆ ಹಮ್ಮಿಕೊಳ್ಳುತ್ತೇವೆ. ಅಲ್ಲಿಯೂ ಸಹ ತಾವು ಸಮಸ್ಯೆಗಳನ್ನು ಗಮನಕ್ಕೆ ತರಬಹುದು ಎಂದರು.

ಅರ್ಜಿಗಳ ಮಹಾಪೂರ: ನಾಲತವಾಡ ಪಟ್ಟಣಕ್ಕೆ ಪರಿಶಿಷ್ಟ ಜಾತಿ ಮೀಸಲಾತಿಯಡಿ ನೀಲಪ್ಪ ಸಿದ್ದಾಪೂರ ಅವರಿಗೆ ಕೆಂಚಮ್ಮ ದೇವಿ ಅನ್ನಭಾಗ್ಯ ಕೇಂದ್ರ ಮಂಜೂರಾದರೂ ಆರಂಭಕ್ಕೆ ಅನುಮೋದನೆ ನೀಡಿಲ್ಲ, ನಾಗಬೇನಾಳದಲ್ಲಿ ಕುಡಿಯವ ನೀರಿನ ಸಮಸ್ಯೆ, ಅಡವಿ ಹುಲಗಬಾಳ, ಡೊಂಕಮಡು ರಸ್ತೆ ದುರಸ್ತಿ, ಚಿಮ್ಮಲಗಿ ಏತ ನೀರಾವರಿ ಕಾಲುವೆ ದುರಸ್ತಿ, ನಾಲತವಾಡ ಪಟ್ಟಣಕ್ಕೆ ಮಿನಿ ಸಾರಿಗೆ ಘಟಕ, ಪಿಂಚಣಿ ಸಮಸ್ಯೆ, ಖಾನಿಕೇರಿಯಲ್ಲಿ ಅಂಗನವಾಡಿ ನಿರ್ಮಾಣ, ಪಟ್ಟಣದಲ್ಲಿ ಗ್ರಂಥಾಲಯ ನಿರ್ಮಾಣ, ಸವಿತಾ ಸಮಾಜಕ್ಕೆ ಸ್ಮಶಾನ ಸ್ಥಳ ಬೇಡಿಕೆ,ಬಿಜ್ಜೂರ ಗ್ರಾ.ಪಂಯಲ್ಲಿ ನೋಂದಣಿಯಾಗದ 25 ಆಸರೆ ಮನೆಗಳ ಸಮಸ್ಯೆ, ಟ್ಯಾಕ್ಸಿ ಮಾಲೀಕರಿಗೆ ಪಾಕಿಂಗ್ ವ್ಯವಸ್ಥೆ ಸಮಸ್ಯೆ, ಪಂಚಾಯತಿಗಳಲ್ಲಿ ಆಸ್ತಿಗಳ ದಾಖಲೆ ಗೋಲ್‌ಮಾಲ್, ಮಲಗದಿನ್ನಿ ಕುಡಿಯುವ ನೀರಿನ ಸಮಸ್ಯೆ, ನಾಗರಬೆಟ್ಟ ಬಹು ಹಳ್ಳಿ ಕುಡಿಯುವ ನೀರಿನ ಘಟಕದ ಶುಚಿತ್ವದ ಕೊರತೆ, ಜಗದೇವ ನಗರದಲ್ಲಿ ರಸ್ತೆ, ಚರಂಡಿ ನಿರ್ಮಾಣ, ನಾಲತವಾಡ ಮೂಲಕ ವಡಗೇರಿ ಗ್ರಾಮಕ್ಕೆ ಬಸ್ ಸಂಚಾರ, ಅರಣ್ಯ ಇಲಾಖೆಯಿಂದ ಮರಗಳ ತೆರವು ಬೇಡಿಕೆ ಹಾಗೂ ನೀರು ಹರಿಸುವಿಕೆ ಸೇರಿ ಹಲವಾರು ಸಮಸ್ಯೆಗಳನ್ನು ಶಾಸಕರು ಸ್ವೀಕರಿಸಿದರು.
ಇಲಾಖೆಯಿಂದ ಸಭೆಯಲ್ಲಿ ಕೆಬಿಜೆಎನ್‌ಎಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಶಿಕ್ಷಣ, ಅಬಕಾರಿ, ಪಶು ಸಂಗೋಪನಾ, ಹೆಸ್ಕಾಂ, ಕಂದಾಯ, ಪ.ಪಂ, ಆಹಾರ, ಅರಣ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾ.ಪಂ, ತಾ.ಪಂ, ಪೋಲೀಸ್, ಕಾರ್ಮಿಕ, ಕೃಷಿ, ಸರ್ವೆಯರ್ ಸೇರಿ ಸುಮಾರು 31 ಇಲಾಖೆಯಿಂದ ಅಧಿಕಾರಿಗಳು ಸೇರಿ 150 ಕ್ಕೂ ಹೆಚ್ಚು ಅರ್ಜಿಗಳ ಅಹವಾಲುಗಳನ್ನು ಸ್ವೀಕರಿಸಿದ ನಂತರ ಹಂತ ಹಂತವಾಗಿ ಶೀಗ್ರವೇ ಪರಿಹರಿಸುವ ಭರವಸೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್ ಎ.ಡಿ.ಅಮರಾವದಗಿ, ಉಪ ವಿಭಾಗಾಧಿಕಾರಿ ಜುಪಿಶಾನ್ ಹಕ್, ಪ.ಪಂ ಅಧ್ಯಕ್ಷೆ ಲಲಿತಾ ಗೊರಬಾಳ,ಉಪಾಧ್ಯಕ್ಷರಾದ ಬಸವರಾಜ ಗಂಗನಗೌಡ್ರ, ಪ.ಪಂ ಸಿಓ ಪ್ರಶಾಂತ ಸಿ., ತಾ.ಪಂ ಇಓ ಸಂಗನಗೌಡ ಬಿರಾದಾರ, ಅಕ್ಷರ ದಾಸೋಹ ನಿರ್ದೇಶಕರಾದ ಎಂ.ಎo.ಬೆಳಗಲ್, ಸಿಪಿಐ ಮಹ್ಮದ್‌ಫಸಿವುದ್ದೀನ್, ಶಂಕರರಾವ್ ದೇಶಮುಖ, ಗುರು ದೇಶಮುಖ, ಶಂಕರಗೌಡ್ರ ಹಿರೇಗೌಡ್ರ, ನಾನಾಸಾಹೇಬ ದೇಶಮುಖ, ಬಾಪುರಾವ್ ದೇಸಾಯಿ, ಗುರು ತಾರನಾಳ, ಡಾ.ಎಸ್.ಬಿ.ಗಂಗನಗೌಡ್ರ, ರಮೇಶ ಆಲಕೊಪ್ಪರ, ಇಇ ಜ್ಞಾನೇಶ ಮುರಾಳ, ಎಸ್.ಬಿ.ಹಿರೇಗೌಡ್ರ, ಶಿವಪ್ಪ ತಾತರಡ್ಡಿ, ಅಮರಪ್ಪ ಗಂಗನಗೌಡ್ರ, ವಿ.ವಿ.ಅಂಬಿಗೇರ, ಎನ್.ಬಿ.ಮಾವಿನಮಟ್ಟಿ, ಗ್ರಾ.ಪಂ ಪಿಡಿಓಗಳು ಹಾಗೂ ಪ.ಪಂ ಸದಸ್ಯರು ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.

Latest News

ಬಿಜೆಪಿ ಕಾರ್ಯಕರ್ತರಿಂದ ಕೂಲಿ ಪ್ರಹಾರ :                             ಸರ್ಕಾರದ ಪ್ರತಿಕೃತಿಗೆ ಚಿಲ್ಲರೆ ನೋಟಿನ ಹಾರ ಹಾಕಿ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತರಿಂದ ಕೂಲಿ ಪ್ರಹಾರ : ಸರ್ಕಾರದ ಪ್ರತಿಕೃತಿಗೆ ಚಿಲ್ಲರೆ ನೋಟಿನ ಹಾರ ಹಾಕಿ ಪ್ರತಿಭಟನೆ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಬರ ಪರಿಹಾರದ ಹಣವಾಗಿ 2500 ರೂ.ನೀಡಲು ಮುಂದಾಗಿರುವ ಕ್ರಮವನ್ನು

Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 20 ದಿನ ರಜೆ, ಯಾವಾಗಿಂದ?

Dasara Vacation 2026: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಈ ಬಾರಿ ಬರೋಬ್ಬರಿ 20 ದಿನ ರಜೆ, ಯಾವಾಗಿಂದ?

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ಶಾಲಾ

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಮುದ್ದೇಬಿಹಾಳ : ಔಷಧ ತಜ್ಞರು ವೈದ್ಯರ ಬೆನ್ನೆಲುಬಾಗಿದ್ದು ಜೀವ ಉಳಿಸುವ ಮಾರ್ಗದರ್ಶಕರಂತೆ ಕೆಲಸ ಮಾಡುತ್ತಿದ್ದಾರೆ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಬರಗಾಲದ ಕುರಿತು ಕರೆದಿದ್ದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ರಾಜ್ಯದ ರೈತರಿಗೆ

ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಹೊಸ ಇತಿಹಾಸ:   ಟೀಕೆಗಳಿಗೆ ಸಾಧನೆಯೇ ಉತ್ತರ : ಒಂದೇ ಶಾಖೆಯಿಂದ 225 ಮೆಡಿಕಲ್ ಸೀಟು..!

ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಹೊಸ ಇತಿಹಾಸ: ಟೀಕೆಗಳಿಗೆ ಸಾಧನೆಯೇ ಉತ್ತರ : ಒಂದೇ ಶಾಖೆಯಿಂದ 225 ಮೆಡಿಕಲ್ ಸೀಟು..!

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯೊoದು ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಇತಿಹಾಸ ನಿರ್ಮಿಸಿದೆ. ತಾಲ್ಲೂಕಿನ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯು ಸನ್ 2025-26ನೇ ಸಾಲಿನಲ್ಲಿ ಒಂದೇ ಶಾಖೆಯಿಂದ ಬರೊಬ್ಬರಿ 225 ವೈದ್ಯಕೀಯ (ಮೆಡಿಕಲ್) ಸೀಟುಗಳು ಪಡೆದುಕೊಳ್ಳುವ ಮೂಲಕ ಇಡೀ ರಾಜ್ಯಕ್ಕೆ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸoಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ್ ಹೇಳಿದರು. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ಕರೆದಿದ್ದ

ಪೌರಕಾರ್ಮಿಕರಿಗೆ 3.50 ಲಕ್ಷ ರೂ.ವಿಶೇಷ ಭತ್ಯೆ: ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರು-ಬಿರಾದಾರ

ಪೌರಕಾರ್ಮಿಕರಿಗೆ 3.50 ಲಕ್ಷ ರೂ.ವಿಶೇಷ ಭತ್ಯೆ: ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರು-ಬಿರಾದಾರ

ಮುದ್ದೇಬಿಹಾಳ : ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದು ಅವರ ಸೇವೆ ಅನನ್ಯವಾದದ್ದು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು. ಪಟ್ಟಣದ ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಪುರಸಭೆಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರದಿಂದ ಪ್ರತಿ ವರ್ಷ ಪೌರಕಾರ್ಮಿಕರಿಗೆ ವಿಶೇಷ ಭತ್ಯೆಯಾಗಿ 7500 ರೂ.ಅವರ ಖಾತೆಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು. ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ರಾಮಣ್ಣ ಚಲವಾದಿ ಮಾತನಾಡಿ, ಪುರಸಭೆಯಿಂದ ನಮ್ಮ ಪೌರಕಾರ್ಮಿಕರಿಗೆ ವಿವಿಧ ಕ್ರೀಡಾಕೂಟಗಳನ್ನು