ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಮುದ್ದೇಬಿಹಾಳ : ತಾಲೂಕಿನ ಯರಗಲ್‌ನಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯು 2026–27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ್ದು ಅದರಂತೆ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರೂ.3,800 ಮೊದಲ ಕಂತಿನಲ್ಲಿಯೇ ಪಾವತಿಸುವುದಾಗಿ ತಿಳಿಸಿದೆ.ಇದರಿಂದ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ.

ಕಾರ್ಖಾನೆಯ ಶೇ.11.62 ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ರೂ.4,138 ಎಫ್‌ಆರ್‌ಪಿ ದರ ನಿಗದಿಯಾಗಿದ್ದು, ರೈತರು ಮತ್ತು ಕಾರ್ಖಾನೆ ನಡುವಿನ ಒಡಂಬಡಿಕೆಯOತೆ ಮೊದಲ ಕಂತಿನಲ್ಲಿ ರೂ.3,800 ಹಾಗೂ ಎರಡನೇ ಕಂತಿನಲ್ಲಿ ಸಕ್ಕರೆ ದರ ಆಧರಿಸಿ ರೂ.200 ಪಾವತಿಸುವುದಾಗಿ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ದರಪಟ್ಟಿಯಲ್ಲಿ ಬಾಲಾಜಿ ಶುಗರ್ಸ್ ಘೋಷಿಸಿರುವ ರೂ.3,800 ದರ ಗಮನ ಸೆಳೆದಿದ್ದು ಕಬ್ಬು ಬೆಳೆಗಾರರಿಗೆ ಉತ್ತಮ ದರ ದೊರೆಯುವ ನಿರೀಕ್ಷೆ ಕಬ್ಬು ಬೆಳೆಗಾರರಲ್ಲಿ ಮೂಡಿದೆ.ಜಿಲ್ಲೆಯಲ್ಲಿಯೇ ಅತೀ ಹೆಚ್ಚು ದರ ಕೊಡುವ ಘೋಷಣೆ ಪ್ರಕಟಿಸಿರುವುದು ಬಾಲಾಜಿ ಸಕ್ಕರೆ ಕಾರ್ಖಾನೆ ಎಂಬುದು ವಿಶೇಷವಾಗಿದೆ.

ಮೊದಲ ಕಂತಿನಲ್ಲಿಯೇ 3800 ರೂ.ದರ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮೊದಲ ಕಂತಿನಲ್ಲಿಯೇ 3800 ರೂ.ಪಾವತಿಸುವಂತೆ ಒತ್ತಡ ಹೇರಿದ್ದರು.ಇದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಂದಿಸಿರುವುದಕ್ಕೆ ಕಬ್ಬು ಬೆಳೆಗಾರರು, ಹೋರಾಟಗಾರರು ಸ್ವಾಗತಿಸಿದ್ದಾರೆ.

Latest News

ಕಬ್ಬು ಪೂರೈಸಲು ರೈತರಿಗೆ ಮನವಿ:                                                                 ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಕಬ್ಬು ಪೂರೈಸಲು ರೈತರಿಗೆ ಮನವಿ: ನ.20 ಕ್ಕೆ ಸುಣಕಲ್ ಆರ್.ಬಿ.ಶುಗರ‍್ಸ್ ಕಾರ್ಯಾರಂಭ

ಮುದ್ದೇಬಿಹಾಳ : ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಒಡೆತನದ ಆರ್.ಬಿ.ಶುಗರ‍್ಸ್ನಲ್ಲಿ ನ.20 ರಂದು ಕಬ್ಬು

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಮುದ್ದೇಬಿಹಾಳ : ಹಾಲಿ,ಮಾಜಿ ಶಾಸಕರು,ಸರ್ಕಾರಗಳಿಂದ ಬೀರಪ್ಪನ ಬೆಟ್ಟದ ದೇವಸ್ಥಾನ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಪಡಿಸಲು

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಉಪ ನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ನಗರ ಮತ್ತು ಗ್ರಾಮಾಂತರ

ಸಮಾಜ ಸೇವಕ ಎಂ.ಎನ್.ಮದರಿ ಹೇಳಿಕೆ :                                    ನ.10 ರಂದು ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ,ಧರ್ಮಸಭೆ

ಸಮಾಜ ಸೇವಕ ಎಂ.ಎನ್.ಮದರಿ ಹೇಳಿಕೆ : ನ.10 ರಂದು ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ,ಧರ್ಮಸಭೆ

ಮುದ್ದೇಬಿಹಾಳ : ತಾಲ್ಲೂಕಿನ ಅಡವಿ ಹುಲಗಬಾಳದ ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ಮತ್ತು ಸಿಡಿಯಾನ ದ್ಯಾಮವ್ವ

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ:                                 ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುದ್ದೇಬಿಹಾಳ : ಕಬ್ಬು ಬೆಳೆಗಾರರಿಗೆ ಮಂಗಳವಾರ ಸಿಹಿ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಇನ್ನೂ ಈಡೇರಿಲ್ಲ.ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ ಹೆದ್ದಾರಿ ಬಂದ್ ಮಾಡಿ ನಡೆದಿರುವ ರೈತರ ಹೋರಾಟದ ಸ್ಥಳದಲ್ಲಿ ರಾತ್ರಿ 9 ಗಂಟೆಯವರೆಗೂ ಖಚಿತ ತೀರ್ಮಾನ ಹೊರಬಿದ್ದಿಲ್ಲ. ಹೋರಾಟದ ಸ್ಥಳದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ, ಕಬ್ಬು ಬೆಳೆಗಾರರ ಹಿತ ಕಾಯಬೇಕಾದ ಜನಪ್ರತಿನಿಧಿಗಳು,ಸಕ್ಕರೆ ಕಾರ್ಖಾನೆ ಮಾಲೀಕರು ಬೆಳೆಗಾರರ ಬದುಕಿನ

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್:                      ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್: ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಮುದ್ದೇಬಿಹಾಳ ಟೆನ್ನಿಸ್ ಕ್ರಿಕೇಟ್ ಪ್ರಿಮಿಯರ್ ಲೀಗ್-2026ರ ಫೈನಲ್ ಪಂದ್ಯದಲ್ಲಿ ಆರ್.ಎಂ.ಸಿ.ಸಿ ತಂಡ ಗೆಲುವು ಸಾಧಿಸಿದ್ದು ವಿಜೇತ ತಂಡಕ್ಕೆ ಒಂದು ಲಕ್ಷ ರೂ.ಬಹುಮಾನ ವಿತರಿಸಲಾಯಿತು. ಮುಲ್ಲಾ ಟೈಗರ್ಸ್ ಹಾಗೂ ಆರ್‌ಎಸಿಸಿ ತಂಡದ ಮಧ್ಯೆ ನಡೆದ ಫೈನಲ್ ಪಂದ್ಯದಲ್ಲಿ ಆರ್.ಎ.ಸಿ.ಸಿ ತಂಡ ಜಯಭೇರಿ ಸಾಧಿಸಿತು. ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ,ಗೆಳೆಯರ ಬಳಗದ ಮುಖಂಡ ಕಾಮರಾಜ ಬಿರಾದಾರ,ಅಂಜುಮನ ಸಮೀತಿ ಸದಸ್ಯ ಮಹಿಬೂಬ್ ಮುಲ್ಲಾ,ಹಮೀದ್