ಅಸೂಯೆ,ಮತ್ಸರ ಬಿಟ್ಟು ಸಕಲರಿಗೆ ಲೇಸು ಬಯಸಿ-ಅಂಕಲಿಮಠ ಶ್ರೀ

ಅಸೂಯೆ,ಮತ್ಸರ ಬಿಟ್ಟು ಸಕಲರಿಗೆ ಲೇಸು ಬಯಸಿ-ಅಂಕಲಿಮಠ ಶ್ರೀ

ಮುದ್ದೇಬಿಹಾಳ : ಮಾನವ ಜನ್ಮದಲ್ಲಿ ಹುಟ್ಟಿ ಬಂದಿರುವ ಎಲ್ಲರೂ ಅಸೂಯೆ,ಮತ್ಸರದ ಭಾವನೆ ಬಿಟ್ಟು ಸಕಲರಿಗೆ ಲೇಸು ಬಯಸಿದಾಗ ಲೇಸು ಬಯಸಿದವರಿಗೆ ಒಳಿತಾಗುತ್ತದೆ ಎಂದು ಅಂಕಲಿಮಠ ನಿರುಪಾದೀಶ್ವರ ಮಠದ ವೀರಭದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗಂಗೂರ ಗ್ರಾಮದಲ್ಲಿ ಶುಕ್ರವಾರ ದಸರಾ ನವರಾತ್ರಿ ಹಬ್ಬದ ನಿಮಿತ್ತ ಸಾಮೂಹಿಕ ವಿವಾಹ ಮತ್ತು ಧರ್ಮ ಸಭೆ,ತುಲಾಭಾರ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಕೆಟ್ಟದ್ದನ್ನು ಮಾಡಿದವರಿಗೆ ಕೆಟ್ಟದ್ದೇ ಆಗುತ್ತದೆ.ಒಳ್ಳೆಯದನ್ನು ಮಾಡಿದವರಿಗೆ ಒಳಿತಾಗುತ್ತದೆ.ಬಸವಾದಿ ಶಿವಶರಣರು ಹೇಳಿದ ಕಾಯಕತತ್ವದಂತೆ ಜೀವನ ನಡೆಸಬೇಕು.ನೀವು ಹೇಗೆ ಇರುತ್ತಿರೋ ಹಾಗೆ ನಿಮ್ಮ ಮಕ್ಕಳು ನಿಮ್ಮನ್ನು ಕಾಣುತ್ತಾರೆ ಎಂದು ಹೇಳಿದರು.

ಹೊಸಮಠದ ಅಮರೇಶ್ವರ ದೇವರು ಮಾತನಾಡಿ, ಜೀವನದಲ್ಲಿ ಎರಡು ಮಾರ್ಗಗಳಿವೆ.ಸತ್ಯ ಹಾಗೂ ಸುಳ್ಳಿನ ಮಾರ್ಗ.ಸತ್ಯದ ಮಾರ್ಗದಲ್ಲಿ ನಡೆದವರಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ,ಜಿಪA ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಂಚಗ್ಯಾರoಟಿ ಸಮಿತಿಯ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ,ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ ಮಾತನಾಡಿ, ಗಂಗೂರ ಗ್ರಾಮದಲ್ಲಿ ಪ್ರತಿವರ್ಷವೂ ದಸರಾ ಹಬ್ಬದ ನಿಮಿತ್ತ ಸಾಮೂಹಿಕ ವಿವಾಹಗಳನ್ನು ಅಂಕಲಿಮಠ ಪೂಜ್ಯರ ಶಿಷ್ಯಂದಿರಾದ ನಾಗಪ್ಪ ಲಕ್ಕಣ್ಣವರ ನಡೆಸಿಕೊಂಡು ಬರುತ್ತಿರುವುದು ಮಾದರಿಯ ಕಾರ್ಯವಾಗಿದೆ ಎಂದರು.

ದಿವ್ಯ ಸಾನಿಧ್ಯವಹಿಸಿದ್ದ ತುರವಿಹಾಳ ಶ್ರೀ ಅಮರಗುಂಡ ಶಿವಾಚಾರ್ಯರು,ಉಪನ್ಯಾಸಕ ಉಮರ್‌ಶರೀಫ್ ಕುಂಟೋಜಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಂಕಲಿಮಠದ ವೀರಭದ್ರ ಸ್ವಾಮೀಜಿಗಳ ತುಲಾಭಾರ ಸೇವೆಯನ್ನು ವಿನೋದ ಶಿವಶಂಕರಗೌಡ ಹಿರೇಗೌಡರ ಪರಿವಾರದಿಂದ ಮಾಡಲಾಯಿತು.501 ಮುತ್ತೆದೆಯರಿಗೆ ಉಡಿ ತುಂಬವ ಕಾರ್ಯವನ್ನು ಈ ವೇಳೆ ಸಮಿತಿಯ ಪದಾಧಿಕಾರಿಗಳು ಮಾಡಿದರು. ನಾಲ್ಕು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮುಖಂಡರಾದ ನಿಂಗಪ್ಪಗೌಡ ಬಪ್ಪರಗಿ, ಎನ್.ಎಸ್.ದೇಶಮುಖ,ಬಾಲಾಜಿ ಶುರ‍್ಸ್ ನಿರ್ದೇಶಕ ಪ್ರಜ್ವಲ್ ಪಾಟೀಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಬಿಜೆಪಿ ಮಾಜಿ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ, ಮಹೇಶ ಪಾಟೀಲ್,ಸೋಮನಗೌಡ ಪಾಟೀಲ ನಡಹಳ್ಳಿ,ಲಕ್ಷö್ಮಣ ಬಿಜ್ಜೂರ,ಮಾರುತಿ ಗುರವ,ಶಿವಪ್ಪಗೌಡ ತಾತರೆಡ್ಡಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಗಣ್ಯರು ಭಾಗವಹಿಸಿದ್ದರು.ಪಂಚಾಕ್ಷರಿ ಗವಾಯಿಗಳು ಪ್ರಾರ್ಥಿಸಿದರು.ಕಾರ್ಯಕ್ರಮದ ರೂವಾರಿ ನಾಗಪ್ಪ ಲಕ್ಕಣ್ಣವರ ಸ್ವಾಗತಿಸಿದರು.ಎಲ್.ಬಿ.ಗುಬಚಿ ನಿರೂಪಿಸಿ ವಂದಿಸಿದರು.

Latest News

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ:                    ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ

ಶಾಸಕ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ:  ‘ನಿನ್ನ ಹಾಗೆ ಹವಾಯಿ ಚಪ್ಪಲಿ ಹಾಕಿಕೊಂಡು ನಾನು ನಾಟಕ ಮಾಡಿಲ್ಲ’-ನಡಹಳ್ಳಿ’

ಶಾಸಕ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ: ‘ನಿನ್ನ ಹಾಗೆ ಹವಾಯಿ ಚಪ್ಪಲಿ ಹಾಕಿಕೊಂಡು ನಾನು ನಾಟಕ ಮಾಡಿಲ್ಲ’-ನಡಹಳ್ಳಿ’

ಮುದ್ದೇಬಿಹಾಳ : ನಾನು ನಿಮ್ಮ ಹಾಗೆ ಹವಾಯಿ ಚಪ್ಪಲ ಹಾಕಿಕೊಂಡು ನಾಟಕ ಮಾಡಿಲ್ಲ.ಬೆಂಗಳೂರು ತುಂಬ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಜನರಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬುವುದು.ಇರುವAತಹ ವಾತಾವರವನ್ನು

ಸಿಜೆಪಿಯಿಂದ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ-ಎಸ್.ಕೆ.ಬೆಳ್ಳುಬ್ಬಿ

ಸಿಜೆಪಿಯಿಂದ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ-ಎಸ್.ಕೆ.ಬೆಳ್ಳುಬ್ಬಿ

ಮುದ್ದೇಬಿಹಾಳ : ಸರ್ವಾಧ್ಯಕ್ಷ ಆಡಳಿತವಿರುವ ದೇಶಗಳಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಕಾಕ್ರೋಚ ಜನತಾ ಪಾರ್ಟಿ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಪಿಂಜಾರ ಸಮುದಾಯ ಶ್ರಮಿಕ ಸಮಾಜವಾಗಿದ್ದು ಎಲ್ಲ ಸಮಾಜದವರೊಂದಿಗೆ ಬೆರೆಯುವ ಜನಾಂಗವಾಗಿದ್ದಾರೆ.ನೀವು ಯಾವ ಧರ್ಮದಲ್ಲಿದ್ದಿರೋ ಮಕ್ಕಳಿಗೆ ಆ ಧರ್ಮದ ಸಂಸ್ಕಾರ ಕೊಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಭವಿಷ್ಯದಲ್ಲಿ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳ : ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿ ವತಿಯಿಂದ ನವದುರ್ಗೆಯರ ಕಡೆಗೆ ನಮ್ಮ ನಡಿಗೆ (ದುರ್ಗಾ ದೌಡ) ಹಾಗೂ ನವರಾತ್ರಿ ನವಶಕ್ತಿ ವೈಭವ–ಧರ್ಮ ಜಾಗೃತಿ ಸಮಾರಂಭದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಮಹಿಳೆಯರ ಧಾರ್ಮಿಕ ಪಥಸಂಚಲನ ಗಮನ ಸೆಳೆಯಿತು. ಪಟ್ಟಣದ ಶ್ರೀ ಬನಶಂಕರಿ ದೇವಾಲಯದಿಂದ ಧಾರ್ಮಿಕ ಸಂಚಲನ ಆರಂಭಗೊAಡಿತು.ಅಲ್ಲಿOದ ಗ್ರಾಮದೇವತೆ ಕಟ್ಟೆ, ಸರಾಫ್ ಬಜಾರ್, ಕಿಲ್ಲಾಗಲ್ಲಿಯ ಕಾಳಿಕಾದೇವಿ ಮಂದಿರ, ಕುಂಬಾರ ಓಣಿಯ ಗ್ರಾಮದೇವತೆ ಮಂದಿರ, ದುರ್ಗಾದೇವಿ ಹಾಗೂ ನಾಡದೇವಿ ಮಂದಿರ,