ಮುದ್ದೇಬಿಹಾಳ : ಸರ್ವಾಧ್ಯಕ್ಷ ಆಡಳಿತವಿರುವ ದೇಶಗಳಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಕಾಕ್ರೋಚ ಜನತಾ ಪಾರ್ಟಿ ನಮ್ಮ ದೇಶದಲ್ಲೂ ಗೊಂದಲ ಸೃಷ್ಟಿಸಲು ಹುನ್ನಾರ ನಡೆಸುತ್ತಿದ್ದು ಅದಕ್ಕೆ ಎಂದಿಗೂ ಯಶಸ್ಸು ದೊರೆಯುವುದಿಲ್ಲ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ತಾಲ್ಲೂಕಿನ ಯರಝರಿ ಯಲ್ಲಾಲಿಂಗೇಶ್ವರ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಸಭೆ,ನವರಾತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಸಂಸ್ಕೃತಿ,ಸoಪತ್ತು ಲೂಟಿ ಮಾಡಿದವ ಅವನತಿ ತಾನಾಗಿಯೇ ಆಗಿದೆ.ಜಗತ್ತಿಗೆ ಗುರುವಾಗಿ ಹಿಂದೂ ಧರ್ಮ ನಿಲ್ಲಲಿದೆ.ಮುಸ್ಲಿಂರ ಪವಿತ್ರ ಕ್ಷೇತ್ರಗಳ ಮೇಲೆ ಇಂದು ಮುಸ್ಲಿಂ ಸಮುದಾಯದ ಹೌತಿ ಬಂಡುಕೋರರು ದಾಳಿ ಮಾಡುತ್ತಿದ್ದಾರೆ.ಅನೇಕ ಕ್ರಿಶ್ಚಿಯನ್ ದೇಶಗಳು ಪರಸ್ಪರ ಯುದ್ದ ಮಾಡುತ್ತಿವೆ. ಅನೇಕ ದೇಶಗಳಲ್ಲಿ ಅರಾಜಕತೆ ಸೃಷ್ಟಿಮಾಡುತ್ತಿದ್ದು ಅಂತಹ ಸಂಘಟಿತ ಕುತಂತ್ರವನ್ನು ಸಿಜೆಪಿ ನಮ್ಮ ದೇಶದಲ್ಲಿ ಮಾಡಲು ಹವಣಿಸುತ್ತಿದೆ. ಈ ಬಗ್ಗೆ ಯುವ ಪೀಳಿಗೆ ಎಚ್ಚರಿಕೆ ವಹಿಸಬೇಕು.ನಮ್ಮದು ಶರಣ ತತ್ವದ ರಾಷ್ಟ್ರ.
ಭೂಮಿಯ ಮೇಲೆ ಜನ್ಮಕೊಟ್ಟ ತಾಯಿ ಎಲ್ಲರಿಗಿಂತಲೂ ಶ್ರೇಷ್ಠ ಎಂದರು.
ಬಿಜೆಪಿ ರೈತ ಮೋರ್ಚಾ ರಾಜಾಧ್ಯಕ್ಷ್ಯ ಹಾಗೂ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಮಾತನಾಡಿ, ಈ ಬಾರಿ ಹಿಂಗಾರು_ ಮುಂಗಾರು ಬರೆದೆ ಬೆಳೆ ಇಲ್ಲ ರೈತರು ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಇಂದಿನ ರೈತರು ಆಧುನಿಕ ಕೃಷಿಗೆ ಬಲಿಯಾಗುತ್ತಿದ್ದಾರೆ.ಇಲ್ಲಿ ಭಾಗದಲ್ಲಿ ಆಣೆಕಟ್ಟಿಗಾಗಿ ಭೂಮಿ ಕಳೆದುಕೊಂಡವರ ಜಮೀನಿಗೆ ನೀರು ಕೊಡುವುದಕ್ಕೂ ಇವರಿಂದ ಆಗುತ್ತಿಲ್ಲ.ಪ್ರತಿ ಹಳ್ಳಿಗಳಲ್ಲಿ ಹೈನುಗಾರಿಕೆ ಇಲ್ಲ. ಒಂದು ಲೀಟರ್ ಹಾಲು ಸಿಗುವುದಿಲ್ಲ. ಆದರೆ ಅಲ್ಕೋಹಾಲ್ ಸಿಗುತ್ತದೆ. ಪ್ರತಿ ಹಳ್ಳಿಗೆ ಸಾರಾಯಿ ಅಂಗಡಿ ತರೆದು ಯುವಕರನ್ನು ಕುಡಕರನ್ನಾಗಿ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯರಝರಿ ಶ್ರೀ ಯಲ್ಲಾಲಿಂಗೇಶ್ವರಮಠದ ಪೀಠಾಧಿಪತಿ ಮಲ್ಲಾರಲಿಂಗ ಸ್ವಾಮೀಜಿ, ಜಾತ್ರಾ ಕಮೀಟಿ ಸ್ವಾಗತ ಸಮೀತಿ ಅಧ್ಯಕ್ಷ ಮಲಕೇಂದ್ರಗೌಡ ಪಾಟೀಲ ಮಾತನಾಡಿದರು.
ಸತ್ಯಭಾಮ ಪಾಂಡುರAಗ ಪೂಜಾರಿ ದಂಪತಿಗಳು ಶ್ರೀಗಳ ಪಾದಪೂಜೆ ಮಾಡಿದರು.ಅಮರಗೋಳದ ಎಂ.ಡಿ ನದಾಫ ಹಾಗೂ ಮಹೇಶ ರಶ್ಮಿ ಪಾಟೀಲ್ ದಂಪತಿಗಳು ಶ್ರೀಗಳ ತುಲಾಭಾರ ಸೇವೆ ಸಲ್ಲಿಸಿದರು.ನವ ಜೋಡಿ ವಿವಾಹ ಕಾರ್ಯ ನೆರವೇರಿಸಲಾಯಿತು.ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಹತ್ತು ಸಂಗೀತ ಗಾಯಕರಿಗೆ ಸಂಗೀತ ಸಿರಿ ಪ್ರಶಸ್ತಿ ಪ್ರದಾನ ಹಾಗೂ ಎರಡು ಭಜನಾ ಮಂಡಳಿಯ ಪದಾಧಿಕಾರಿಗಳಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ನಿಡಗುಂದಿ ತಾಲ್ಲೂಕು ಅಧ್ಯಕ್ಷ ಎಂ.ಕೆ.ಮುತ್ತಣ್ಣವರ, ಗಣ್ಯರಾದ ನಿಂಗಪ್ಪಗೌಡ ಬಪ್ಪರಗಿ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿ.ಎಸ್.ಚಿಮ್ಮನಕಟ್ಟಿ. ಬಿ.ಟಿ.ಗೌಡರ, ಬಿ.ಕೆ.ಮಸೂತಿ,ಪರಶುರಾಮ ಕಾನ್ನಾಳ,ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಮಲ್ಲು ಬಿದರಿ,ಶರಣಗೌಡ ಪಾಟೀಲ, ಸಿದ್ದು ಧನಗೊಂಡ,ಬಸವರಾಜ ಹೊನವಾಡ,ನಿವೃತ್ತ ಆರ್.ಟಿ.ಓ ಮುತ್ತತ್ತಿ, ಲಕ್ಷ್ಮಣ ಬಿಜ್ಜೂರ,ಸೋಮಯ್ಯ ಸಲೂಡಿ,ವೈದ್ಯ ಸಂತೋಷ ಚಿಮ್ಮನಕಟ್ಟಿ, ಮಲ್ಲಿಕಾರ್ಜುನ ಬಿರಾದಾರ,ವೈ.ಟಿ.ಗೌಡರ,ಅಶೋಕ ಚಳ್ಳಮರದ,ಶ್ರೀಶೈಲ್ ಹಡಲಗೇರಿ,
ಶ್ರೀಕಾಂತ ಹಿರೇಮಠ, ಕಾಶಿನಾಥ ಹುಗ್ಗಿ ಇದ್ದರು.ಯುವ ಮುಖಂಡ ಮಹಾಂತೇಶ ಪಟ್ಟಣದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







