ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ: ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ: ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಬರುವ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್ ಅಂಶವಿರುವ ನೀರು ಇದ್ದು ಸಮಸ್ಯೆಯಿಂದ ಬಳಲುತ್ತಿರುವ ನನ್ನ ಭಾಗದ ಜನರಿಗೆ ಸೇವೆ ಒದಗಿಸಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದು ರಾಣಿಬೆನ್ನೂರು ಭವಾನಿ ಹಾಸ್ಪಿಟಲ್ ಮುಖ್ಯಸ್ಥ ಡಾ.ತಿರುಪತಿ ನಾಯಕ ಹೇಳಿದರು.

ತಾಲ್ಲೂಕಿನ ಯರಝರಿ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಶನಿವಾರ ಶ್ರೀದೇವಿ ನವರಾತ್ರೋತ್ಸವ ಅಂಗವಾಗಿ ರಾಣೆಬೆನ್ನೂರಿನ ಶ್ರೀಭವಾನಿ ಹಾಸ್ಪಿಟಲ್ ಹಾಗೂ ಕಾಳಜಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂಳೆ ,ಕೀಲು, ಖನಿಜ ಸಾಂದ್ರತೆ ಪರೀಕ್ಷೆ ಹಾಗೂ ಉಚಿತ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು ಹುಟ್ಟಿದ್ದು ಹುಲ್ಲೂರ ತಾಂಡಾದಲ್ಲಿ. ನಮ್ಮ ಅಜ್ಜ ಶೆಟ್ಟೆಪ್ಪ ನಾಯಕರು ಹಾಗೂ ನಮ್ಮ ತಂದೆ ನಿವೃತ್ತ ಪೊಲೀಸ ಅಧಿಕಾರಿಯಾದ ಶಿವಾನಂದ ನಾಯಕರ ಸಮಾಜ ಸೇವೆ,ಮಾರ್ಗದರ್ಶನದಲ್ಲಿ ನಾನು ಮುನ್ನಡೆದಿದ್ದೇನೆ. ಎಲಬು ಮತ್ತು ಕೀಲು ತಜ್ಞನಾಗಿ ಈ ಭಾಗದ ಜನರಲ್ಲಿ ಮೂಳೆ, ಕೀಲು ಖನಿಜ ಸಾಂದ್ರತೆ ಬಗ್ಗೆ ಜಾಗೃತಿ ಮತ್ತು ಅದರಿಂದ ಬಳಲುತ್ತಿರುವ ಜನರಿಗೆ ಆರೋಗ್ಯ ಸೇವೆ ಸಲ್ಲಿಸಲು ಈ ಯರಝರಿ ಜಾತ್ರೆಯ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರ ಮಾಡಿದ್ದೇವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ, ನಮ್ಮ ಮಠದ ಭಕ್ತರು,ಯುವ ವೈದ್ಯರಾಗಿರುವ ಡಾ.ತಿರುಪತಿ ನಾಯಕ ಅವರು ತಮ್ಮ ತಂಡದೊAದಿಗೆ ಮಠಕ್ಕೆ ಆಗಮಿಸಿ ಗ್ರಾಮೀಣ ಜನರಿಗೆ ಉಚಿತವಾಗಿ ಮೂಳೆ, ಕೀಲು ಸಾಂದ್ರತೆ ಪರೀಕ್ಷೆಯ ಜೊತೆಗೆ ಅನೇಕ ಕಾಯಿಲೆಗಳ ಪರೀಕ್ಷೆ ಮತ್ತು ಉಚಿತ ಔಷಧ ಮಾತ್ರೆಗಳನ್ನು ನೀಡುತ್ತಿರುವುದು ಪ್ರಶಂಸನೀಯ ಕಾರ್ಯ ಎಂದರು.

ನಿವೃತ್ತ ಪೂಲೀಸ್ ಅಧಿಕಾರಿ ಶಿವಾನಂದ ನಾಯಕ,ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ,ಯುವ ಮುಖಂಡ ಮಹಾಂತೇಶ ಪಟ್ಟಣದ ಮಾತನಾಡಿ, ಆರೋಗ್ಯ ಶಿಬಿರಗಳು ಬಡ ಜನರಿಗೆ ಆಸರೆಯಾಗಿವೆ ಎಂದರು.


ಆರೋಗ್ಯ ಶಿಬಿರದಲ್ಲಿ ಡಾ.ಪ್ರದೀಪ ಹೆರಕಲ್,ಡಾ.ಸುನಿಲ್ ನಾಯಕ,ಡಾ.ಹರೀಶ್, ಡಾ.ಸಾಯಿನಾಥ್, ಡಾ.ಗೌತಮ್ ಮತ್ತು ಕಾಳಗಿ ಸರಕಾರಿ ಸಮುದಾಯ ಆಸ್ಪತ್ರೆಯ ವೈದ್ಯ ಡಾ.ಅಬ್ದುಲ್‌ಜಬ್ಬಾರ ರಂಜಣಗಿ,ಸಿಬ್ಬoದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿದರು.ಗ್ರಾಪಂ ಮಾಜಿ ಸದಸ್ಯ ಶಿವಾನಂದ ಲಮಾಣಿ,ಮುಖಂಡರಾದ ಮಲ್ಲು ನಾಯಕ,ಶೇಖರ ನಾಯಕ,ಹಣಮಂತ ದೊಡಮನಿ ಸೇರಿದಂತೆ ಅನೇಕರು ಇದ್ದರು.

Latest News

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಪಿಂಜಾರ ಸಮುದಾಯ ಶ್ರಮಿಕ ಸಮಾಜವಾಗಿದ್ದು ಎಲ್ಲ ಸಮಾಜದವರೊಂದಿಗೆ ಬೆರೆಯುವ ಜನಾಂಗವಾಗಿದ್ದಾರೆ.ನೀವು ಯಾವ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳ : ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿ ವತಿಯಿಂದ ನವದುರ್ಗೆಯರ ಕಡೆಗೆ ನಮ್ಮ

ಯಲಗೂರ ಕ್ರಾಸ್‌ನ ಹೋರಾಟಕ್ಕೆ ಡಿಸಿ,ಎಸ್ಪಿ ಭೇಟಿ:                         ದರ ಘೋಷಿಸಿದ ನಂತರವೇ ಕಾರ್ಖಾನೆ ಆರಂಭ-ಡಿಸಿ ಡಾ.ಆನಂದ್

ಯಲಗೂರ ಕ್ರಾಸ್‌ನ ಹೋರಾಟಕ್ಕೆ ಡಿಸಿ,ಎಸ್ಪಿ ಭೇಟಿ: ದರ ಘೋಷಿಸಿದ ನಂತರವೇ ಕಾರ್ಖಾನೆ ಆರಂಭ-ಡಿಸಿ ಡಾ.ಆನಂದ್

ವಿಜಯಪುರ : ಯಾವುದೇ ಕಾರ್ಖಾನೆ ದರ ನಿಗದಿಪಡಿಸದೇ ಚಾಲನೆ ಮಾಡಬಾರದು ಎಂದು ಕಬ್ಬು ಬೆಳಗಾರರ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಅ.

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ:                           ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ ಸಭೆಯಲ್ಲಿ ರೈತಪರವಾದ ನಿಲುವು ಪ್ರಕಟಗೊಳ್ಳದಿದ್ದರೆ ಅ.13ರಿಂದ ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ತಿಳಿಸಿದರು. ಪಟ್ಟಣದ ಪಂಜುರ್ಲಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕಬ್ಬಿಗೆ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ :                    ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ : ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವು ಮೂಡಿಸಲು ಯುವ ಸಂಸತ್ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಸರ್ಕಾರದಿಂದ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ ಹೇಳಿದರು. ಪಟ್ಟಣದ ಶಾ ಎಸ್.ಪಿ.ಓಸ್ವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಯುವ ಸಂಸತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಸಕಾಂಗ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿಕೊಡುವುದು ಈ ಕಾರ್ಯಕ್ರಮ ಉದ್ದೇಶವಾಗಿದ್ದು ಮುಂದಿನ ಪೀಳಿಗೆ ಪ್ರಜಾಪ್ರಭುತ್ವದ ಸೌಂದರ್ಯವನ್ನು