ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಪಿಂಜಾರ ಸಮುದಾಯ ಶ್ರಮಿಕ ಸಮಾಜವಾಗಿದ್ದು ಎಲ್ಲ ಸಮಾಜದವರೊಂದಿಗೆ ಬೆರೆಯುವ ಜನಾಂಗವಾಗಿದ್ದಾರೆ.ನೀವು ಯಾವ ಧರ್ಮದಲ್ಲಿದ್ದಿರೋ ಮಕ್ಕಳಿಗೆ ಆ ಧರ್ಮದ ಸಂಸ್ಕಾರ ಕೊಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಭವಿಷ್ಯದಲ್ಲಿ ನಿಮಗೆ ಆಸ್ತಿಯಾಗುತ್ತಾರೆ.ಅಮರಗೋಳದ ಹಿರಿಯರಾಗಿದ್ದ ದಿ.ಮಲೀಕಸಾಬ ನದಾಫ ಅವರನ್ನು ಪ್ರೀತಿಯಿಂದ ಎಲ್ಲರೂ ಮಲಕಣ್ಣ ಎಂದು ಕರೆಯುತ್ತಿದ್ದರು.ಅವರು ಹಿಂದೂ ಮುಸ್ಲಿಂರ ಮಧ್ಯೆ ಹಳ್ಳಿಗಳಲ್ಲಿರುವ ಜಗಳಗಳನ್ನು ಪರಿಹರಿಸುವ ಶಕ್ತಿ ಹೊಂದಿದ್ದರು ಎಂದು ಶಾಸಕರು ಹೇಳಿದರು.

ಪಿಂಜಾರ ಸಮಾಜದವರು ಕಾಯಕಕ್ಕೆ ಮಹತ್ವ ಕೊಟ್ಟ ವರ್ಗದವರು.ಪ್ರತಿಭಾ ಪುರಸ್ಕಾರದ ಉದ್ದೇಶ ಸಮಾಜದಲ್ಲಿ ಗುರುತಿಸುವ ಸ್ಥಾನಮಾನಗಳಲ್ಲಿ ಮಕ್ಕಳು ಬೆಳೆಯಬೇಕು ಎಂಬುದಾಗಿದೆ.ದೊಡ್ಡವ,ಸಣ್ಣವ ಎನ್ನದೇ ಸಮಾಜದ ಮಕ್ಕಳನ್ನು ಮೇಲೆತ್ತುವ ಕೆಲಸ ಮಾಡಿ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎ. ಕಟಗೂರ , ಪಿಂಜಾರ ಸಮಾಜ ಕರ್ನಾಟಕ ಏಕೀಕಿಕರಣದಲ್ಲಿ ಪಿಂಜಾರ ಸಮಾಜದ ವ್ಯಕ್ತಿ ಬಳ್ಳಾರಿಯ ಪೈಲ್ವಾನ್ ರಂಜಾನಸಾಬ್ ಅವರು ಪ್ರಾಣ ಕೊಟ್ಟವರು.ಹತ್ತಿ ಬೆಳೆಯುವ ಪ್ರದೇಶ ಕಂಡು ಬರುವಲ್ಲಿ ಪಿಂಜಾರ್/ನದಾಫ್ ಜನಾಂಗ ಹೆಚ್ಚು ಜನಸಂಖ್ಯೆಯಲ್ಲಿ ನೆಲೆಗೊಂಡಿದೆ.ಆದರೆ ಆಧುನೀಕರಣಕ್ಕೆ ಪಿಂಚಾರ ಸಮಾಜದ ಕುಲಕಸುಬು ಅಳಿವಿನಂಚಿಗೆ ಬಂದಿದೆ ಎಂದರು.

ಕುಂಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ದೇಶದ ಐಕ್ಯತೆಗೆ ಧಕ್ಕೆ ತರುವುದನ್ಜು ವಿರೋಧಿಸುವ ಕೆಲಸ ಆಗಬೇಕು.ರಾಮನನ್ನು ಹಿಡಿದುಕೊಂಡು ಹಿಂದೆ ರಾಜಕಾರಣ ಮಾಡಿದ್ದಾರೆ.ಈಗ ಹಸಿರು ಶಾಲು ಹಿಡಿದು ರಾಜಕಾರಣ ಮಾಡುತ್ತಾ ಕೆಲವರು ಹೊರಟಿದ್ದಾರೆ.ರೈತರಪರ ಇರುವ ಹೋರಾಟಗಳನ್ನು ನಾವು ಬೆಂಬಲಿಸುತ್ತೇವೆ.ಆದರೆ ಅಂತರAಗದಲ್ಲಿ ಬೇರೊಂದು ಲೆಕ್ಕಾಚಾರ ಮಾಡಿಕೊಂಡು ಹೋರಾಟ ಮಾಡಿದಲ್ಲಿ ಅದಕ್ಕೆ ಫಲ ಸಿಗದು.ಸರಕಾರ ನಮ್ಮ ಬದುಕನ್ನು ರೂಪಿಸುವುದಿಲ್ಲ. ನಾವು ಇನ್ನೊಬ್ಬರ ಮೇಲೆ ಅವಲಂಬನೆ ಆಗಬಾರದು ಎಂದರು.

ಜಮಾತೆ ಉಲಮಾ ಎ ಹಿಂದ್‌ನ ತಾಲೂಕು ಘಟಕದ ಕಾರ್ಯದರ್ಶಿ ಮೌಲಾನಾ ಮಹಮ್ಮದ ರಫೀಕ್ ನದಾಫ್ ಸಾನ್ನಿಧ್ಯ ವಹಿಸಿದ್ದರು.ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಲಿಕಸಾಬ ದಾ. ನದಾಫ್ (ಅಮರಗೋಳ) ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಲ್ಲಾಭಕ್ಷ ಎನ್. ದೇಸಾಯಿ, ಉದ್ಯಮಿ ಮಹೆಬೂಬ ಮುಲ್ಲಾ,ಕರ್ನಾಟಕ ಮುಸ್ಲಿಂ ಸಂಘದ ಅಧ್ಯಕ್ಷ ಲಾಳೇಸಾ ಕೆ. ನದಾಫ ಇದ್ದರು.

ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸಮಾಜದ ಗಣ್ಯರು ಹಾಗೂ ಅಂಜುಮನ್ ಇಸ್ಲಾಂ ಕಮೀಟಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಂಘದ ನೂತನ ಉಪಾಧ್ಯಕ್ಷ ಹಸನಸಾ ಎಸ್. ನದಾಫ್,ಶೇಖ ಲಾಡ್ಲೇಮಶಾಕ್ ಅಬ್ದುಲಗನಿ ಸೇರಿದಂತೆ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಪದಗ್ರಹಣ ನೆರವೇರಿಸಲಾಯಿತು.ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.ಎನ್.ಬಿ.ಪಿಂಜಾರ ನಿರೂಪಿಸಿದರು.ಬಾಬು ದಿಡ್ಡಿಮನಿ ಸ್ವಾಗತಿಸಿದರು.ಟಿ.ಎನ್.ರೂಢಗಿ ವಂದಿಸಿದರು.

Latest News

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಅ.

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ :                                               ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ : ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ವಿಜಯಪುರ : ಕಬ್ಬಿನ ಎಂ.ಎಸ್.ಪಿ ದರ ಹೆಚ್ಚಳ,ಕೇಂದ್ರ ಸರ್ಕಾರ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೇನಾಲ್‌ನ್ನು ಖರೀದಿಸುವುದು

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ:              ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ: ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ವಿಜಯಪುರ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.13ರಿಂದ ನಿಡಗುಂದಿ-ಆಲಮಟ್ಟಿ ರಾಷ್ಟ್ರೀಯ

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ

ವಣಕಿಹಾಳ ಗ್ರಾಮದಲ್ಲಿ ಘಟನೆ :                                                   ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ವಣಕಿಹಾಳ ಗ್ರಾಮದಲ್ಲಿ ಘಟನೆ : ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ಮುದ್ದೇಬಿಹಾಳ : ವಿದ್ಯುತ್ ಶಾಟ್ ಸರ್ಕಿಟ್‌ನಿಂದಾಗಿ ಹನ್ನೆರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ತಾಲ್ಲೂಕಿನ ವಣಕಿಹಾಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವಣಕಿಹಾಳ ಗ್ರಾಮದ ಶಾಂತಗೌಡ ಬಿರಾದಾರಗೆ ಸೇರಿದ 3.32 ಎಕರೆ,ಗೀತಾ ಬಿರಾದಾರಗೆ ಸೇರಿದ 2.02 ಎಕರೆ , ಶಿವನಗೌಡ ಬಿರಾದಾರಗೆ ಸೇರಿದ 4 ಎಕರೆ,ನಾಗಪ್ಪ ಹುಮನಾಬಾದ ಅವರಿಗೆ ಸೇರಿದ 5.10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ.

ಕೆರೆಗಳಿಗೆ ನೀರು ಹರಿಸಲು ಆಗ್ರಹ:                                                                                                ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಕೆರೆಗಳಿಗೆ ನೀರು ಹರಿಸಲು ಆಗ್ರಹ: ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಮುದ್ದೇಬಿಹಾಳ : ವಿಜಯಪುರ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳಲ್ಲಿ ಬರದ ಛಾಯೆ ಗಾಢವಾಗಿದೆ. ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದ್ದು ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಪತ್ರ ಬರೆದಿದ್ದಾರೆ. ಬರದ ಪರಿಸ್ಥಿತಿಯನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ