ಮುದ್ದೇಬಿಹಾಳ : ಮಾನವ ಜನ್ಮದಲ್ಲಿ ಹುಟ್ಟಿ ಬಂದಿರುವ ಎಲ್ಲರೂ ಅಸೂಯೆ,ಮತ್ಸರದ ಭಾವನೆ ಬಿಟ್ಟು ಸಕಲರಿಗೆ ಲೇಸು ಬಯಸಿದಾಗ ಲೇಸು ಬಯಸಿದವರಿಗೆ ಒಳಿತಾಗುತ್ತದೆ ಎಂದು ಅಂಕಲಿಮಠ ನಿರುಪಾದೀಶ್ವರ ಮಠದ ವೀರಭದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗಂಗೂರ ಗ್ರಾಮದಲ್ಲಿ ಶುಕ್ರವಾರ ದಸರಾ ನವರಾತ್ರಿ ಹಬ್ಬದ ನಿಮಿತ್ತ ಸಾಮೂಹಿಕ ವಿವಾಹ ಮತ್ತು ಧರ್ಮ ಸಭೆ,ತುಲಾಭಾರ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಕೆಟ್ಟದ್ದನ್ನು ಮಾಡಿದವರಿಗೆ ಕೆಟ್ಟದ್ದೇ ಆಗುತ್ತದೆ.ಒಳ್ಳೆಯದನ್ನು ಮಾಡಿದವರಿಗೆ ಒಳಿತಾಗುತ್ತದೆ.ಬಸವಾದಿ ಶಿವಶರಣರು ಹೇಳಿದ ಕಾಯಕತತ್ವದಂತೆ ಜೀವನ ನಡೆಸಬೇಕು.ನೀವು ಹೇಗೆ ಇರುತ್ತಿರೋ ಹಾಗೆ ನಿಮ್ಮ ಮಕ್ಕಳು ನಿಮ್ಮನ್ನು ಕಾಣುತ್ತಾರೆ ಎಂದು ಹೇಳಿದರು.
ಹೊಸಮಠದ ಅಮರೇಶ್ವರ ದೇವರು ಮಾತನಾಡಿ, ಜೀವನದಲ್ಲಿ ಎರಡು ಮಾರ್ಗಗಳಿವೆ.ಸತ್ಯ ಹಾಗೂ ಸುಳ್ಳಿನ ಮಾರ್ಗ.ಸತ್ಯದ ಮಾರ್ಗದಲ್ಲಿ ನಡೆದವರಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ,ಜಿಪA ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಂಚಗ್ಯಾರoಟಿ ಸಮಿತಿಯ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ,ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ ಮಾತನಾಡಿ, ಗಂಗೂರ ಗ್ರಾಮದಲ್ಲಿ ಪ್ರತಿವರ್ಷವೂ ದಸರಾ ಹಬ್ಬದ ನಿಮಿತ್ತ ಸಾಮೂಹಿಕ ವಿವಾಹಗಳನ್ನು ಅಂಕಲಿಮಠ ಪೂಜ್ಯರ ಶಿಷ್ಯಂದಿರಾದ ನಾಗಪ್ಪ ಲಕ್ಕಣ್ಣವರ ನಡೆಸಿಕೊಂಡು ಬರುತ್ತಿರುವುದು ಮಾದರಿಯ ಕಾರ್ಯವಾಗಿದೆ ಎಂದರು.
ದಿವ್ಯ ಸಾನಿಧ್ಯವಹಿಸಿದ್ದ ತುರವಿಹಾಳ ಶ್ರೀ ಅಮರಗುಂಡ ಶಿವಾಚಾರ್ಯರು,ಉಪನ್ಯಾಸಕ ಉಮರ್ಶರೀಫ್ ಕುಂಟೋಜಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಂಕಲಿಮಠದ ವೀರಭದ್ರ ಸ್ವಾಮೀಜಿಗಳ ತುಲಾಭಾರ ಸೇವೆಯನ್ನು ವಿನೋದ ಶಿವಶಂಕರಗೌಡ ಹಿರೇಗೌಡರ ಪರಿವಾರದಿಂದ ಮಾಡಲಾಯಿತು.501 ಮುತ್ತೆದೆಯರಿಗೆ ಉಡಿ ತುಂಬವ ಕಾರ್ಯವನ್ನು ಈ ವೇಳೆ ಸಮಿತಿಯ ಪದಾಧಿಕಾರಿಗಳು ಮಾಡಿದರು. ನಾಲ್ಕು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮುಖಂಡರಾದ ನಿಂಗಪ್ಪಗೌಡ ಬಪ್ಪರಗಿ, ಎನ್.ಎಸ್.ದೇಶಮುಖ,ಬಾಲಾಜಿ ಶುರ್ಸ್ ನಿರ್ದೇಶಕ ಪ್ರಜ್ವಲ್ ಪಾಟೀಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಬಿಜೆಪಿ ಮಾಜಿ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ, ಮಹೇಶ ಪಾಟೀಲ್,ಸೋಮನಗೌಡ ಪಾಟೀಲ ನಡಹಳ್ಳಿ,ಲಕ್ಷö್ಮಣ ಬಿಜ್ಜೂರ,ಮಾರುತಿ ಗುರವ,ಶಿವಪ್ಪಗೌಡ ತಾತರೆಡ್ಡಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಗಣ್ಯರು ಭಾಗವಹಿಸಿದ್ದರು.ಪಂಚಾಕ್ಷರಿ ಗವಾಯಿಗಳು ಪ್ರಾರ್ಥಿಸಿದರು.ಕಾರ್ಯಕ್ರಮದ ರೂವಾರಿ ನಾಗಪ್ಪ ಲಕ್ಕಣ್ಣವರ ಸ್ವಾಗತಿಸಿದರು.ಎಲ್.ಬಿ.ಗುಬಚಿ ನಿರೂಪಿಸಿ ವಂದಿಸಿದರು.







