ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ

ಬಂಜಾರ ಸಮಾಜದಲ್ಲಿ ಮತಾಂತರ ಪಿಡುಗಿನ ಜಾಗೃತಿ-ರವಿ ನಾಯಕ

ಮುದ್ದೇಬಿಹಾಳ : ನಮ್ಮ ತಾಂಡಾಗಳಲ್ಲಿರುವ ಬಂಜಾರಾ ಜನಾಂಗದವರಲ್ಲಿ ಕೆಲವರು ಮತಾಂತರದ ಪಿಡುಗಿಗೆ ಬಲಿಯಾಗುತ್ತಿದ್ದಾರೆ.ಅಂತಹ ಪ್ರಕರಣಗಳು ಹೆಚ್ಚಬಾರದೆಂಬ ಉದ್ದೇಶದಿಂದ ನಮ್ಮ ಧರ್ಮ,ಜನಾಂಗದ ಜಾತ್ರೆ ಉತ್ಸವಗಳಲ್ಲಿ ಮತಾಂತರ ಪಿಡುಗಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಆಡಳಿತಾಧಿಕಾರಿ,ಬಂಜಾರಾ ಸಮಾಜದ ಮುಖಂಡ ರವಿ ಎನ್.ನಾಯಕ ಹೇಳಿದರು.

ತಾಲೂಕಿನ ಕೋಳೂರು ತಾಂಡಾದಲ್ಲಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ಶ್ರೀ ದುರ್ಗಾದೇವಿ ಹಾಗೂ ಶ್ರೀ ಸಂತಸೇವಾಲಾಲ ಮಹಾರಾಜರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ದೇವಿಯ ಪಲ್ಲಕ್ಕಿ ಮೆರವಣಿಗೆಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ದುರ್ಗಾದೇವಿಯ ಮೂಲ ಪೀಠ ಬಾಗಲಕೋಟೆ ಶಿರೂರು ತಾಂಡಾದ ನೀಲಾನಗರದಲ್ಲಿದೆ. ನಮ್ಮ ತಾಂಡಾದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಗ್ರಾಮದೇವತೆ ದುರ್ಗಾದೇವಿ ಹಾಗೂ ಬಂಜಾರ ಸಮಾಜದ ಸಿದ್ದಿಪುರುಷ ಸಂತಸೇವಾಲಾಲ ಮಹಾರಾಜರ ಜಾತ್ರೆ ಆಚರಿಸುತ್ತೇವೆ. ಆಧುನಿಕ ಭರಾಟೆಯಲ್ಲಿ ನಮ್ಮ ಸಮಾಜದ ಮೂಲ ಸಂಪ್ರದಾಯಗಳು ಆಚರಣೆಗಳು ನಶಿಸುತ್ತಿದ್ದು ಅದನ್ನು ಉಳಿಸಲು ಇಂತಹ ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ನಮ್ಮ ಆಚರಣೆ ಮಾಡುವ ಮೂಲಕ ಮುಂದಿನ ತಲೆ ಮಾರಿಗೆ ಪರಿಚಯಿಸುವ ಕಾರ್ಯ ಮಾಡಿದ್ದೇವೆ ಎಂದರು.

ನಮ್ಮ ಪೂರ್ವಜರು ದೇವಿಯ ಮೇಲೆ ಇಟ್ಟಿರುವ ನಂಬಿಕೆಯಿAದ ಒಳ್ಳೆಯದಾಗಿದೆ.ನಮ್ಮ ಮನೆಯಿಂದಲೇ ಪಲ್ಲಕ್ಕಿ ಮೆರವಣಿಗೆ ಸಾಗುತ್ತದೆ.ಜಿಪಂ ಮಾಜಿ ಸದಸ್ಯ ಚಿದಾನಂದ ಸೀತಿಮನಿ ಅವರ ಮನೆಯಿಂದ ದೇವಿಯ ಚಿನ್ನಾಭರಣಗಳ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುತ್ತದೆ ಎಂದರು.

ಸೋಮದೇವರಹಟ್ಟಿ ತಾಂಡಾದ ಜಗನು ಮಹಾರಾಜ ಮಾತನಾಡಿ, ಬಂಜಾರ ಸಮಾಜದಲ್ಲಿ ವಿಶೇಷವಾಗಿ ನವರಾತ್ರಿ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತದೆ.ನಮ್ಮ ಸಮಾಜದ ಬಾಂಧವರು ಮದುವೆ,ಹಬ್ಬಗಳ ಆಚರಣೆಯ ನೆಪದಲ್ಲಿ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು.ಮತಾಂತರ ಪಿಡುಗು ಹಾಗೂ ವರದಕ್ಷಿಣೆ, ಮದ್ಯಪಾನ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇವೆ.ಕೋಳೂರು ತಾಂಡಾದ ನಿವಾಸಿಗಳು ಎಲ್ಲರೂ ಒಗ್ಗಟ್ಟಾಗಿ ಸಹೋದರರಂತೆ ಜೀವನ ನಡೆಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ,ಟಿಎಪಿಸಿಎಂಎಸ್ ಉಪಾಧ್ಯಕ್ಷರಾದ ಚಿದಾನಂದ ಎಂ.ಸೀತಿಮನಿ,ಮುಖAಡರಾದ ತುಳಜಾರಾಮ್ ದಿಂಡವಾರ,ಚAದ್ರಶೇಖರ ಸೀತಿಮನಿ,ಶಾಂತಾರಾಮ ಮೇಲ್ಮನಿ,ಸಂತೋಷ ದಿಂಡವಾರ, ಶಶಿಲ್ ಜಾಧವ,ಮೋತಿಲಾಲ್ ಲಮಾಣಿ,ಹರೀಶ ಜಾಧವ, ಚಂದ್ರಶೇಖರ ನಾಯಕ,ಜಯರಾಮ್ ನಾಯಕ, ಸಂತೋಷ ನಾಯಕ,ಲಕ್ಷ್ಮಣ ಲಮಾಣಿ,ಶಿವಾನಂದ ಲಮಾಣಿ, ಸೋಮಸಿಂಗ್ ಸೀತಿಮನಿ,ಸುಜಾತಾ ಜಾಧವ,ಪ್ರಹ್ಲಾದ ರಾಠೋಡ,ಮಾನಸಿಂಗ್ ರಾಠೋಡ, ಆನಂದ ಚವ್ಹಾಣ, ಕೇಶಪ್ಪ ಸೀತಿಮನಿ,ಆರ್.ವಿ. ತೋಟದ, ಶಾಂತಪ್ಪ ರಾಠೋಡ ಸೇರಿದಂತೆ ತಾಂಡಾದ ನಿವಾಸಿಗಳು ಗಣ್ಯರು ಮಹಿಳೆಯರು ಮಕ್ಕಳು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Latest News

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಅ.

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ :                                               ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ : ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ವಿಜಯಪುರ : ಕಬ್ಬಿನ ಎಂ.ಎಸ್.ಪಿ ದರ ಹೆಚ್ಚಳ,ಕೇಂದ್ರ ಸರ್ಕಾರ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೇನಾಲ್‌ನ್ನು ಖರೀದಿಸುವುದು

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ:              ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ಕಬ್ಬು ಬೆಳೆಗಾರರ ಜೊತೆ ಕೇಂದ್ರದ ಚರ್ಚೆ ವಿಫಲ: ಅ.13 ರಿಂದ ನಿಡಗುಂದಿ-ಆಲಮಟ್ಟಿ ಹೈವೆಯಲ್ಲಿ ರಸ್ತೆ ತಡೆ

ವಿಜಯಪುರ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.13ರಿಂದ ನಿಡಗುಂದಿ-ಆಲಮಟ್ಟಿ ರಾಷ್ಟ್ರೀಯ

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ

ವಣಕಿಹಾಳ ಗ್ರಾಮದಲ್ಲಿ ಘಟನೆ :                                                   ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ವಣಕಿಹಾಳ ಗ್ರಾಮದಲ್ಲಿ ಘಟನೆ : ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ಮುದ್ದೇಬಿಹಾಳ : ವಿದ್ಯುತ್ ಶಾಟ್ ಸರ್ಕಿಟ್‌ನಿಂದಾಗಿ ಹನ್ನೆರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ತಾಲ್ಲೂಕಿನ ವಣಕಿಹಾಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ವಣಕಿಹಾಳ ಗ್ರಾಮದ ಶಾಂತಗೌಡ ಬಿರಾದಾರಗೆ ಸೇರಿದ 3.32 ಎಕರೆ,ಗೀತಾ ಬಿರಾದಾರಗೆ ಸೇರಿದ 2.02 ಎಕರೆ , ಶಿವನಗೌಡ ಬಿರಾದಾರಗೆ ಸೇರಿದ 4 ಎಕರೆ,ನಾಗಪ್ಪ ಹುಮನಾಬಾದ ಅವರಿಗೆ ಸೇರಿದ 5.10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ.

ಕೆರೆಗಳಿಗೆ ನೀರು ಹರಿಸಲು ಆಗ್ರಹ:                                                                                                ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಕೆರೆಗಳಿಗೆ ನೀರು ಹರಿಸಲು ಆಗ್ರಹ: ಶಾಸಕ ನಾಡಗೌಡರಿಂದ ಸಚಿವ ಕಾಶಪ್ಪನವರಿಗೆ ಪತ್ರ

ಮುದ್ದೇಬಿಹಾಳ : ವಿಜಯಪುರ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳಲ್ಲಿ ಬರದ ಛಾಯೆ ಗಾಢವಾಗಿದೆ. ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದ್ದು ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಪತ್ರ ಬರೆದಿದ್ದಾರೆ. ಬರದ ಪರಿಸ್ಥಿತಿಯನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ