ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ: ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ: ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ನಡೆಯುತ್ತಿರುವ ಹೋರಾಟದ ಮುಂದುವರೆದ ಭಾಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಂಘಟನೆ (ಚುನಪ್ಪ ಪೂಜೇರಿ ಬಣ) ವತಿಯಿಂದ ಮುದ್ದೇಬಿಹಾಳ ತಾಲೂಕಿನ ಬಾಲಾಜಿ ಶುಗರ‍್ಸ್ ಹಾಗೂ ನಾಯನೇಗಲಿ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಗೋದಾಮುಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಶುರ‍್ಸ್ ಆವರಣದಲ್ಲಿ ಸಕ್ಕರೆ ಗೋದಾಮಿಗೆ ಬೀಗ ಹಾಕಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ , ಕಬ್ಬು ಬೆಳೆಗಾರರಿಗೆ 5500 ರೂ.ದರ ನೀಡಬೇಕು.ರಾಜ್ಯ ಸರ್ಕಾರ ಎಸ್‌ಎಪಿ 1000 ರೂ.ನೀಡಬೇಕು.ಎಂ.ಎಸ್.ಪಿ 60 ರೂ.ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನು ಇರಿಸಿಕೊಂಡು ಹೋರಾಟ ಆರಂಭಿಸಲಾಗಿದೆ.ಯಾವುದೇ ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಒಂದು ಕೆಜಿಯೂ ಹೊರಗಡೆ ಹೋಗುವಂತಿಲ್ಲ.ದರ ಅಂತಿಮಗೊಳ್ಳುವವರೆಗೂ ಕಾರ್ಖಾನೆ ಆರಂಭಿಸುವoತಿಲ್ಲ ಎಂದು ಹೇಳಿದರು.

ಬಾಲಾಜಿ ಶುಗರ್ಸ್ನ ಎಜಿಎಂ ಗಿರೀಶ ಪಾಟೀಲ,ರೈತರಾದ ದೇವರಾಜ ಗುಂಡಕನಾಳ, ಶಶಿಕಾಂತ್ ಪಾಟೀಲ್. ಸೀತಪ್ಪ ಗಣಿ, ಚಂದ್ರು ಗುಬಚಿ, ನಿಂಗಣ್ಣ ಯಾಳಗಿ, ಅಮೋಘಸಿದ್ದ, ಗುರು ರಾಯಗೊಂಡ, ಶಿವನಗೌಡ ಜಲಪೂರ, ಚಂದ್ರು ಗುಬಚಿ, ಮುತ್ತು ಲಕ್ಕಣ್ಣವರ, ಮಾಳಿಂಗರಾಯ ಗುಬಚಿ, ರಮೇಶ್ ಲಕ್ಕಣ್ಣವರ ಇದ್ದರು. ಸಿಪಿಐ ಮೊಹ್ಮದಫಸಿವುದ್ದೀನ, ಪಿಎಸ್‌ಐ ವಿಜಯಕುಮಾರ ತಳವಾರ ಸೇರಿದಂತೆ ಪೊಲೀಸರು ಭದ್ರತೆ ಒದಗಿಸಿದ್ದರು.

50 ಸಾವಿರ ಕ್ವಿಂಟಾಲ್ ಸಕ್ಕರೆ ದಾಸ್ತಾನು:
ಮೂಲಗಳ ಪ್ರಕಾರ ಬಾಲಾಜಿ ಹಾಗೂ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಗೋದಾಮುಗಳಲ್ಲಿ ಒಟ್ಟು 50ಸಾವಿರ ಕ್ವಿಂಟಾಲ್ ಸಕ್ಕರೆ ದಾಸ್ತಾನು ಇದ್ದು ಇದೀಗ ಅದನ್ನು ಹೊರಗಡೆ ಹೋಗದಂತೆ ರೈತ ಸಂಘದಿoದ ಬೀಗ ಹಾಕಿ ಪ್ರತಿಭಟನೆ ಮುಂದುವರೆಸಲಾಗಿದೆ.

Latest News

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಜನರಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬುವುದು.ಇರುವAತಹ ವಾತಾವರವನ್ನು

ಸಿಜೆಪಿಯಿಂದ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ-ಎಸ್.ಕೆ.ಬೆಳ್ಳುಬ್ಬಿ

ಸಿಜೆಪಿಯಿಂದ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ-ಎಸ್.ಕೆ.ಬೆಳ್ಳುಬ್ಬಿ

ಮುದ್ದೇಬಿಹಾಳ : ಸರ್ವಾಧ್ಯಕ್ಷ ಆಡಳಿತವಿರುವ ದೇಶಗಳಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಕಾಕ್ರೋಚ ಜನತಾ ಪಾರ್ಟಿ

ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಕ್ಕೆ ಸಿದ್ಧತೆ:                            ಅ.26 ರಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಳ್ಳಿಕೇರಿ ಪ್ರವಾಸ

ಬಿಜೆಪಿ ಕಾರ್ಯಕರ್ತರಿಂದ ಸ್ವಾಗತಕ್ಕೆ ಸಿದ್ಧತೆ: ಅ.26 ರಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಳ್ಳಿಕೇರಿ ಪ್ರವಾಸ

ಮುದ್ದೇಬಿಹಾಳ : ರಾಜ್ಯ ಬಿಜೆಪಿ ಕಾರ್ಯದರ್ಶಿಯಾದ ನಂತರ ಮುದ್ದೇಬಿಹಾಳ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ಶರಣು

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ:                                                                                         ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ: ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಬರುವ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್ ಅಂಶವಿರುವ ನೀರು

ಯಲಗೂರ ಕ್ರಾಸ್‌ನ ಹೋರಾಟಕ್ಕೆ ಡಿಸಿ,ಎಸ್ಪಿ ಭೇಟಿ:                         ದರ ಘೋಷಿಸಿದ ನಂತರವೇ ಕಾರ್ಖಾನೆ ಆರಂಭ-ಡಿಸಿ ಡಾ.ಆನಂದ್

ಯಲಗೂರ ಕ್ರಾಸ್‌ನ ಹೋರಾಟಕ್ಕೆ ಡಿಸಿ,ಎಸ್ಪಿ ಭೇಟಿ: ದರ ಘೋಷಿಸಿದ ನಂತರವೇ ಕಾರ್ಖಾನೆ ಆರಂಭ-ಡಿಸಿ ಡಾ.ಆನಂದ್

ವಿಜಯಪುರ : ಯಾವುದೇ ಕಾರ್ಖಾನೆ ದರ ನಿಗದಿಪಡಿಸದೇ ಚಾಲನೆ ಮಾಡಬಾರದು ಎಂದು ಕಬ್ಬು ಬೆಳಗಾರರ ಬೇಡಿಕೆಯಂತೆ ದರ ಘೋಷಣೆ ಮಾಡಿದ ನಂತರವೇ ಕಾರ್ಖಾನೆ ಆರಂಭಿಸಲು ಸೂಚನೆ ನೀಡಿದ್ದೇವೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ತಿಳಿಸಿದ್ದಾರೆ. ಕಬ್ಬಿಗೆ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಯಲಗೂರ್ ಕ್ರಾಸ್ ಬಳಿ ಎನ್.ಎಚ್-50ನ್ನು ಬಂದ್ ಮಾಡಿ ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಅ. 18ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಹುಡ್ಕೋ ಕಾಲೋನಿಯ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕುಂಟೋಜಿ ಸುಕ್ಷೇತ್ರದ ಭಾವೈಕ್ಯತೆ ಹಿರೇಮಠದ ಪೂಜ್ಯ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಜಾಮಿಯಾತ್ ಉಲಮಾ ಎ ಹಿಂದ್‌ನ ತಾಲೂಕು ಘಟಕದ ಕಾರ್ಯದರ್ಶಿ ಮೌಲಾನಾ