ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿರುವ ವಿಚಾರ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಮುದ್ದೇಬಿಹಾಳ ನಗರಕ್ಕೆ ಸೋಮವಾರ ಆಗಮಿಸಿದ್ದ ಅವರಿಗೆ ಮುದ್ದೇಬಿಹಾಳ ಬಿಜೆಪಿ ಮಂಡಲದ ವತಿಯಿಂದ ನೀಡಲಾದ ಅದ್ದೂರಿ ಸ್ವಾಗತದ ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಸಕ ಯತ್ನಾಳ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಜೈನಮುನಿಗಳ ಕಾರ್ಯಕ್ರಮದಲ್ಲಿ ಆಕಸ್ಮಿಕವಾದ ಭೇಟಿಯಾಗಿದ್ದಿದೆ.ನಾನು ಅಲ್ಲಿಯೇ ಇದ್ದೆ. ಯಾವದೇ ಚರ್ಚೆಯಾಗಿಲ್ಲ. ಅವರು ಪಕ್ಷಕ್ಕೆ ಸೇರಿದರೆ ಆಗುವ ಲಾಭ-ಹಾನಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಳ್ಳಿಕೇರಿ ಅವರು, ಯತ್ನಾಳ ಅವರ ಬಗ್ಗೆ ನನ್ನ ನಿಲವು ತಟಸ್ಥವಾಗಿದೆ. ಅವರು ಬಿಜೆಪಿಯಲ್ಲಿದ್ದಾಗ ನಮ್ಮ ನಾಯಕರು, ಪಕ್ಷದ ಆಚೆ ಇದ್ದಾಗ ಅಲ್ಲವೆಂದ ಅವರು ಹಿಂದುಳಿದ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡಿರುವ ರೀತಿ ಹಿಂದುಳಿದ ವರ್ಗಕ್ಕೆ ಮಾಡಿದ ಅಪಮಾನವಾಗಿದೆ. ಅದನ್ನು ಜನರು ಬರಲಿರುವ ಚುನಾವಣೆಯಲ್ಲಿ ತೋರಿಸುತ್ತಾರೆ.ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಎನ್ನುವುದು ತಲೆ ತಗ್ಗಿಸುವ ವಿಚಾರವಾಗಿದ್ದು ಅದು ವಾಮಾಚಾರ ಮತ್ತು ಕಗ್ಗೊಲೆಗಿಂತ ಪಾಪದ ಕೆಲಸ ಎಂದು ಹೇಳಿದರು.
ಬಿಜೆಪಿ ಮಂಡಲ ಕಾರ್ಯದರ್ಶಿ ಸಂಗಮೇಶ ಗುಂಡಕನಾಳ ಮಾತನಾಡಿ,ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರ ಮಾರ್ಗದರ್ಶನದಲ್ಲಿ ಪಕ್ಷದ ನಾಯಕರಾದ ಶರಣು ತಳ್ಳಿಕೇರಿ ಅವರ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.ಬಿಜೆಪಿ ಪಕ್ಷ ಉನ್ನತ ಸ್ಥಾನಮಾನವನ್ನು ತಳ್ಳಿಕೇರಿ ಅವರಿಗೆ ನೀಡಿದೆ.ಅವರು ತಮ್ಮ ಕ್ಷೇತ್ರದಲ್ಲಿ ಶಾಸಕರನ್ನಾಗಿ ಮಾಡಲು ಕಾರ್ಯಕರ್ತರು ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.
ಪಟ್ಟಣದ ಪಿಲೇಕೆಮ್ಮ ದೇವಸ್ಥಾನದಿಂದ ತಳ್ಳಿಕೇರಿ ಅವರನ್ನು ಸ್ವಾಗತಿಸಲಾಯಿತು. ಬಸವೇಶ್ವರ ವೃತ್ತದಲ್ಲಿ ಶರಣು ತಳ್ಳಿಕೇರಿ ಅವರಿಗೆ ಬೃಹತ್ ಹೂ ಮಾಲೆ ಹಾಕಿ ಸನ್ಮಾನಿಸಿದರು. ಈ ವೇಳೆ ಜೆಸಿಬಿಯಲ್ಲಿ ಅಭಿಮಾನಿಗಳು ನಿಂತು ತಳ್ಳಿಕೇರಿ ಅವರ ಮೇಲೆ ಪುಷ್ಪಾರ್ಚನೆ ಮಾಡಿದರು.
ಪಟ್ಟಣದ ಎಲ್ಲ ವೃತ್ತಗಳಿಗೆ ತಳ್ಳಿಕೇರಿ ಅವರು ಪುಷ್ಪನಮನ ಸಲ್ಲಿಸಿದರು.ಬಳಿಕ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರ ತೋಟದ ಮನೆಗೆ ತೆರಳಿ ಅಲ್ಲಿ ಸನ್ಮಾನ ಸ್ವೀಕರಿಸಿದರು.
ಶರಣು ತಳ್ಳಿಕೇರಿ ಅವರ ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ,ಮಲಕೇoದ್ರಗೌಡ ಪಾಟೀಲ್,ಸಂಗಮೇಶ ಕರಬಂಟನಾಳ,ಗಿರೀಶಗೌಡ ಪಾಟೀಲ್, ಲಕ್ಷ್ಮಣ ಬಿಜ್ಜೂರ, ಬಸವರಾಜ ಮುರಾಳ, ವಿಜಯಕುಮಾರ್ ಬಡಿಗೇರ,ವೈ.ಟಿ ಗೌಡರ,ಅಶೋಕ ರಾಠೋಡ, ಅಶೋಕ ಚಿನಿವಾರ, ರಾಜು ಬಳ್ಳೊಳ್ಳಿ,ಸೋಮನಗೌಡ ಬಿರಾದಾರ,ಸಂಗಣ್ಣ ಹತ್ತಿ, ನಾಗೇಶ ಕವಡಿಮಟ್ಟಿ, ಅನಿಲ್ ನಾಯಕ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ನರಸಮ್ಮ ಗುಬಚಿ, ನಿರ್ಮಲಾ ಪುರಾಣಿಕಮಠ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.







