ಮುದ್ದೇಬಿಹಾಳ : ಕಳೆದ ಬಾರಿ ರೈತರಿಗೆ ಬೆಳೆ ವಿಮೆ ನೀಡುವ ಸಮಯದಲ್ಲಿ ಸಮೀಕ್ಷೆ ಸರಿಯಾಗಿ ಮಾಡಿಲ್ಲ.ಮೂಕಿಹಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಹಾರವೇ ಬಂದಿಲ್ಲ.ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಮತ್ತೆ ರೈತರಿಗೆ ಮೋಸ ಮಾಡುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ತಂಗಡಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ,ಸಿಬ್ಬಂದಿ ನಮ್ಮ ಹೊಲದ ಪಕ್ಕದಲ್ಲಿ ನೀರಾವರಿ ಆಶ್ರಿತ ಮೆಕ್ಕೆಜೋಳದ ಜಮೀನಿನಲ್ಲಿ ಎಫ್-2 ಮಾಡುತ್ತಿದ್ದರು.ಗೈಡಲೈನ್ಸ್ ಪ್ರಕಾರ ಹೇಗೆ ಸಮೀಕ್ಷೆ ಮಾಡಬೇಕು ಎಂದು ಪ್ರಶ್ನಿಸಿದಾಗ ನನಗೆ ಗೊತ್ತಿಲ್ಲ.ಪಿಡಿಒ ಬಂದಿಲ್ಲ ಅದಕ್ಕೆ ನಾನು ಬಂದಿದ್ದೇನೆ.ಇನ್ಸೂö್ಯರೆನ್ಸ್ ಕಂಪನಿಯವರು ಎಷ್ಟು ಅಳತೆಯಲ್ಲಿ ಸರ್ವೆ ಮಾಡು ಎಂದರೆ ಅಷ್ಟು ಹಿಡಿಯುತ್ತೇನೆ ಎಂದು ಉತ್ತರಿಸಿದರು.ವಿಮಾ ಕಂಪನಿಗಳು,ಕೃಷಿ ಇಲಾಖೆ ಅಧಿಕಾರಿಗಳು,ಜಿಲ್ಲಾ ಅಧಿಕಾರಿಗಳು ಆಡಳಿತವೇ ಕೈ ಜೋಡಿಸಿದೆ.ದುಡ್ಡಿನ ಆಸೆಗೆ ಬಿದ್ದು ರೈತರ ಕತ್ತು ಕೊಯ್ಯುವ ಕೆಲಸ ಮಾಡುತ್ತಿದ್ದಾರೆ.
ಶಾಸಕರು ಸಮೀಕ್ಷೆ ಮಾಡುವ ಸಮಯದಲ್ಲಾದರೂ ರೈತರೊಂದಿಗೆ ಹೊಲಗಳಿಗೆ ತೆರಳಿ ಪರಿಶೀಲನೆ ಮಾಡಿ.ಅಧಿಕಾರಿಗಳನ್ನು ಕರೆದು ಕೇಳಿ.ಒಂದು ದಿನವಾದರೂ ಶಾಸಕರು ಹಳ್ಳಿಯೊಳಗೆ ಹೋಗಿ ಯಾವ ಬೆಳೆ ಹಂಚಿಕೆ,ಬೆಳೆದಿದ್ದೀರಿ,ನಷ್ಟವಾಗಿದೆ ಎಂಬುದನ್ನು ಕೇಳಿಲ್ಲ.ರೈತರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೀರಿ.ಪ್ರಮಾಣಿಕವಾಗಿ ಕೆಲಸ ಮಾಡುವುದನ್ನು ಕಲಿತುಕೊಳ್ಳಿ ಎಂದು ಶಾಂತಗೌಡ ಹೇಳಿದರು.
ಸಭೆ ಮಾಡುವ ಜವಾಬ್ದಾರಿ ಶಾಸಕರದ್ದಾಗಿದೆ.ರೈತರು ಕಷ್ಟದಲ್ಲಿದ್ದಾರೆ.ಈ ಸಮಯದಲ್ಲಿ ಹೆಚ್ಚು ಗಮನ ಹರಿಸಬೇಕು.ಎಸ್ಬಿಐ ಇನ್ಸೂö್ಯರೆನ್ಸ್ ಕಂಪನಿಯವರಿದ್ದು ಸಮೀಕ್ಷೆ ಸರಿಯಾಗಿ ಆಗದಿದ್ದರೆ ಪರಿಹಾರ ದೊರೆಯುವುದಿಲ್ಲ ಎಂದು ಹೇಳಿದರು.
ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ದೇವರಾಜ ಗುಂಡಕನಾಳ, ಮುಖಂಡ ಹುಲಗಪ್ಪ ನಾಯಕಮಕ್ಕಳ,ಗುರು ರಾಯಗೊಂಡ ಸೇರಿದಂತೆ ಹಲವರು ಇದ್ದರು.







