‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

ಮುದ್ದೇಬಿಹಾಳ : ಇಂದಿನ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ ಎಂಬುದನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಇಂಗ್ಲಿಷ್ ನಮ್ಮ ಮನೆಯ ಹಾಲ್‌ನವರೆಗೆ ಬರಲಿ, ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಮ್ಮ ಅಡುಗೆಮನೆಯಲ್ಲಿ ಮಾತ್ರ ಕನ್ನಡದ ಪರಿಮಳವೇ ಇರಬೇಕು ಎಂದು ಬದುಕಿನ ಪ್ರತಿ ಹಂತದಲ್ಲೂ ಕನ್ನಡದ ಅಸ್ಮೀತೆ ಉಳಿಯಬೇಕು ಎಂದು ಮಡಿಕೇಶ್ವರ ಬಿ.ಜಿ.ತುಂಬಗಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ 71ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಇಂದು ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ಗೋಡೆಗಳ ಮೇಲೆ ಕನ್ನಡದ ಘೋಷಣೆಗಳನ್ನು ಬರೆಯುತ್ತೇವೆ. ಫಲಕಗಳ ಮೇಲೆ ಕನ್ನಡದ ಘೋಷವಾಕ್ಯಗಳನ್ನು ಮೂಡಿಸುತ್ತೇವೆ. ಆದರೆ ಗೋಡೆಗಳು,ಫಲಕಗಳ ಮೇಲೆ ಕನ್ನಡ ಬರೆದ ಮಾತ್ರಕ್ಕೆ ಕನ್ನಡ ಉಳಿಯುವುದಿಲ್ಲ ನಮ್ಮ ಪ್ರತಿಯೊಬ್ಬರ ಹೃದಯದ ಅಂತರoಗದ ಗೋಡೆಯ ಮೇಲೆ ಕನ್ನಡ ಶಾಶ್ವತವಾಗಿ ನೆಲೆಸಬೇಕು. ಆಗ ಮಾತ್ರ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ ಮತ್ತು ಮುಂದಿನ ಪೀಳಿಗೆಗೂ ಹೆಮ್ಮೆಯಿಂದ ಸಾಗುತ್ತದೆ ಎಂದು ಹೇಳಿದರು.

ರಾಷ್ಟçಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಆನಂದ ಕೋಲಾರ ಅವರು, ನಮ್ಮ ಭಾಷೆ ಕನ್ನಡ.ಮೂರು ವರ್ಷಗಳಿಗೂ ಮಿಗಿಲಾದ ಸಾಹಿತ್ಯ ಪರಂಪರೆ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮ ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿದಂತೆ ಅನೇಕ ಮಹಾನ್ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯ ಕೇವಲ ರಾಜ್ಯೋತ್ಸವದ ಒಂದು ದಿನಕ್ಕೆ ಸೀಮಿತವಾಗಬಾರದು. ಕನ್ನಡ ನಾಡಿನ ಸೊಬಗು, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು.ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟ ಮೌಲ್ಯಗಳನ್ನು ಪಾಲಿಸಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡ ವಾಯ್.ಎಚ್.ವಿಜಯಕರ್,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎA.ಬೆಳಗಲ್,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ,ಸಿಪಿಐ ಮೊಹ್ಮದಫಸಿವುದ್ದೀನ,ಹಿರಿಯ ಸಾಹಿತಿ ಬಿ.ಎಂ.ಹಿರೇಮಠ , ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ,ಸರ್ಕಾರಿ ಪದವಿ ಕಾಲೇಜಿನ ಎಸ್‌ಸಿ,ಎಸ್ಟಿ ಪ್ರಾಚಾರ್ಯ ಎಸ್.ಎಲ್.ಪಾಟೀಲ್,ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಲೀಲಾ ಕೊಣ್ಣೂರ,ಹೆಸ್ಕಾಂ ಗ್ರಾಹಕರ ಸಲಹಾ ಸಮೀತಿ ನಾಮನಿರ್ದೇಶಿತ ಸದಸ್ಯ ಸಿಕಂದರ್ ಜಾನ್ವೇಕರ,ಕನ್ನಡಪರ ಸಂಘಟನೆಗಳ ಮುಖಂಡರಾದ ಎಂ.ಎಸ್.ಕೊಪ್ಪ, ರಾಜುಗೌಡ ತುಂಬಗಿ,ಮಲ್ಲು ಗಂಗನಗೌಡರ,ಕೆಯುಸಿ ಬ್ಯಾಂಕ್ ನಿರ್ದೇಶಕ ಶ್ರೀಕಾಂತ ಚಲವಾದಿ,ಸಾಹಿತಿ ಶಿವಪುತ್ರ ಅಜಮನಿ ಇದ್ದರು.

ವಿವಿಧ ಶಾಲೆಗಳ ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ ಗಂಗಾಮಾತಾ ಆಂಗ್ಲಮಾಧ್ಯಮ ಶಾಲೆಯವರು ಪ್ರಸ್ತುತಪಡಿಸಿದ್ದ ಕನಕನ ಕಿಂಡಿ ಮಾದರಿಗೆ ಪ್ರಥಮ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಂತಶಿಶುನಾಳ ಷರೀಫ ಮಾದರಿಗೆ ದ್ವಿತೀಯ, ಶಾರದಾ ಹಿರಿಯ ಪ್ರಾಥಮಿಕ ಶಾಲೆಯವರು ಪ್ರಸ್ತುತಪಡಿಸಿದ ಬಸವಣ್ಣನವರ ಮಾದರಿಗೆ ತೃತೀಯ ಸ್ಥಾನ ದೊರೆಯಿತು.ಸಾರಿಗೆ ಇಲಾಖೆಯಿಂದ ಕನ್ನಡದ ಧ್ವಜ,ವಿಶೇಷ ಅಲಂಕಾರ ಮಾಡಿದ್ದ ಬಸ್ ಗಮನ ಸೆಳೆಯಿತು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ಟಿ.ಡಿ.ಲಮಾಣಿ ಹಾಗೂ ಗುಂಡು ಚವ್ಹಾಣ ನಿರೂಪಿಸಿದರು.

Latest News

ಅಸೂಯೆ,ಮತ್ಸರ ಬಿಟ್ಟು ಸಕಲರಿಗೆ ಲೇಸು ಬಯಸಿ-ಅಂಕಲಿಮಠ ಶ್ರೀ

ಅಸೂಯೆ,ಮತ್ಸರ ಬಿಟ್ಟು ಸಕಲರಿಗೆ ಲೇಸು ಬಯಸಿ-ಅಂಕಲಿಮಠ ಶ್ರೀ

ಮುದ್ದೇಬಿಹಾಳ : ಮಾನವ ಜನ್ಮದಲ್ಲಿ ಹುಟ್ಟಿ ಬಂದಿರುವ ಎಲ್ಲರೂ ಅಸೂಯೆ,ಮತ್ಸರದ ಭಾವನೆ ಬಿಟ್ಟು ಸಕಲರಿಗೆ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ:   ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ: ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ನಡೆಯುತ್ತಿರುವ ಹೋರಾಟದ ಮುಂದುವರೆದ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಮುದ್ದೇಬಿಹಾಳ : ದಸರಾ  ನಿಮಿತ್ಯವಾಗಿ  ತಾಲ್ಲೂಕಿನ  ಗಂಗೂರ  ಗ್ರಾಮದಲ್ಲಿ ಅ.30  ರಂದು ಬೆಳಗ್ಗೆ 11.30ಕ್ಕೆ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ:                    ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ:                                                                                         ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ: ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಬರುವ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್ ಅಂಶವಿರುವ ನೀರು ಇದ್ದು ಸಮಸ್ಯೆಯಿಂದ ಬಳಲುತ್ತಿರುವ ನನ್ನ ಭಾಗದ ಜನರಿಗೆ ಸೇವೆ ಒದಗಿಸಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದು ರಾಣಿಬೆನ್ನೂರು ಭವಾನಿ ಹಾಸ್ಪಿಟಲ್ ಮುಖ್ಯಸ್ಥ ಡಾ.ತಿರುಪತಿ ನಾಯಕ ಹೇಳಿದರು. ತಾಲ್ಲೂಕಿನ ಯರಝರಿ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಶನಿವಾರ ಶ್ರೀದೇವಿ ನವರಾತ್ರೋತ್ಸವ ಅಂಗವಾಗಿ ರಾಣೆಬೆನ್ನೂರಿನ ಶ್ರೀಭವಾನಿ ಹಾಸ್ಪಿಟಲ್ ಹಾಗೂ ಕಾಳಜಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಏರ್ಪಡಿಸಿದ್ದ

ಅ.25 ರಂದು ಯರಝರಿಯಲ್ಲಿ ನವರಾತ್ರೋತ್ಸವ,ಸಾಮೂಹಿಕ ವಿವಾಹ

ಅ.25 ರಂದು ಯರಝರಿಯಲ್ಲಿ ನವರಾತ್ರೋತ್ಸವ,ಸಾಮೂಹಿಕ ವಿವಾಹ

ಮುದ್ದೇಬಿಹಾಳ : ನವರಾತ್ರೋತ್ಸವದ ಅಂಗವಾಗಿ ತಾಲ್ಲೂಕಿನ ಯರಝರಿಯ ಯಲ್ಲಾಲಿಂಗೇಶ್ವರ ಮಠದಲ್ಲಿ ಮಲ್ಲಾರಲಿಂಗ ಮಹಾರಾಜರ ನೇತೃತ್ವದಲ್ಲಿ ಅ,24 ಹಾಗೂ 25ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.24 ರಂದು ಬೆಳಗ್ಗೆ ಪರಮಾನಂದರ ಉತ್ಸವದೊಂದಿಗೆ ಖಾದರಲಿಂಗ ದರ್ಗಾಕ್ಕೆ ಗಂಧ ಹೊರಡುತ್ತದೆ.ನಂತರ ಬಸರಕೋಡ ಪವಾಡ ಬಸವೇಶ್ವರರು ಉಪಯೋಗಿಸಿದ ವಸ್ತುಗಳನ್ನು ಮಠಕ್ಕೆ ಮೆರವಣಿಗೆ ಮೂಲಕ ಕರೆತರುವುದು.ನಂತರ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ,ರಾತ್ರಿ 10ಕ್ಕೆ ಕಲಾ ಸಂಗಮ ಮೆಲೋಡಿಸ್‌ನಿಂದ ಹಾಸ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗುವುದು. ಅ.25 ರಂದು