ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ಕರೆ ನೀಡಲಾಗಿದ್ದ ಮುದ್ದೇಬಿಹಾಳ ತಾಲ್ಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ರೈತರ ಹೋರಾಟಕ್ಕೆ ಸಾರ್ವಜನಿಕವಾಗಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ,ಮುಖಂಡರಾದ ಹುಲಗಪ್ಪ ನಾಯಕಮಕ್ಕಳ ಮತ್ತಿತರರ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಹೊಟೇಲ್ ಮಾಲೀಕರುಗಳಿಗೆ ಅಂಗಡಿಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ವಿನಂತಿಸಿದರು.ಇದಕ್ಕೆ ಸ್ಪಂದಿಸಿದ ವ್ಯಾಪಾರಸ್ಥರು ರೈತರ ಮನವಿಗೆ ಓಗೊಟ್ಟು ಎಲ್ಲ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬೆಂಬಲ ನೀಡಿದರು.
ಬಸ್ ಸಂಚಾರ ಆರಂಭದಲ್ಲಿ ಬಂದ್ ಮಾಡುವಂತೆ ಮನವಿ ಮಾಡಲಾಗಿದ್ದು ಸಾರಿಗೆ ಘಟಕದ ವ್ಯವಸ್ಥಾಪಕರು ಗಂಭೀರವಾಗಿ ಪರಿಗಣಿಸದೇ ಬಸ್ಗಳ ಸಂಚಾರ ಯಥಾಸ್ಥಿತಿ ಮುಂದುವರೆಸಿದಾಗ ಘಟಕಕ್ಕೆ ಆಗಮಿಸಿದ ರೈತಪರ ಸಂಘಟನೆಗಳ ಮುಖಂಡರು ಘಟಕ ವ್ಯವಸ್ಥಾಪಕರೊಂದಿಗೆ ತೀವ್ರ ವಾಗ್ವಾದ ನಡೆಸಿದರು.ಯಾರಿಗೋ ಸಚಿವ ಸ್ಥಾನ ದೊರೆಯುವುದಕ್ಕೆ ಬಸ್ ಬಂದ್ ಮಾಡುತ್ತೀರಿ.ರೈತರ ಕಷ್ಟಕ್ಕೆ ಬಸ್ ಬಂದ್ ಮಾಡಲು ನಿಮಗೆ ಏನು ತೊಂದರೆ.ಬಸ್ ಸಂಚಾರ ಆರಂಭಿಸಿದ್ದೇ ಆದಲ್ಲಿ ಮುಂದಾಗುವ ಅನಾಹುತಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಬಳಿಕ ಎಲ್ಲ ಬಸ್ಗಳನ್ನು ಪೊಲೀಸರ ರಕ್ಷಣೆಯಲ್ಲಿ ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ ಅವರು ಡಿಪೋದೊಳಕ್ಕೆ ಕಳಿಸಿ ಬಸ್ ಸಂಚಾರ ಸ್ಥಗಿತಗೊಳಿಸಿದರು.
ಬೆಳಗ್ಗೆ 10 ಗಂಟೆ ವೇಳೆಗೆ ಎಲ್ಲ ಅಂಗಡಿ ಮುಗ್ಗಟ್ಟು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.ಹೋರಾಟಗಾರರು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಅಂಬ್ಯುಲೆನ್ಸ್,ವೈದ್ಯಕೀಯ ಚಿಕಿತ್ಸೆಗೆಂದು ತೆರಳುತ್ತಿದ್ದವರ ವಾಹನಗಳು ಹಾಗೂ ಶಾಲಾ ಮಕ್ಕಳ ವಾಹನಗಳಿಗೆ ಹೋಗಲು ಅನುವು ಮಾಡಿಕೊಟ್ಟರು.ಬಸ್ ಸಂಚಾರ ಸ್ಥಗಿತಗೊಂಡಿದ್ದರಿoದ ಗ್ರಾಮೀಣ ಭಾಗಕ್ಕೆ ತೆರಳಬೇಕಿದ್ದ ಶಾಲೆ,ಕಾಲೇಜು ವಿದ್ಯಾರ್ಥಿಗಳು ದಿನವೀಡಿ ಬಸ್ ನಿಲ್ದಾಣದಲ್ಲಿಯೇ ಕೂರುವಂತಾಯಿತು.ಪ್ರಯಾಣಿಕರು ಪರದಾಡಿದರು.
ರೈತರನ್ನು ಬೀದಿಯಲ್ಲಿ ನಿಲ್ಲಿಸಿದ್ದು ಕೇಂದ್ರ,ರಾಜ್ಯ ಸರ್ಕಾರ-ಶಾಂತಗೌಡ ಕಿಡಿ
ಹುಲ್ಲೂರು ಗ್ರಾಮದಲ್ಲಿ ರಸ್ತೆ ತಡೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರನ್ನು ಬೀದಿಯಲ್ಲಿ ತಂದು ನಿಲ್ಲಿಸಿವೆ.ಕಬ್ಬು ಬೆಳೆಗಾರರು ಒಂದು ತಿಂಗಳಿನಿAದ ತಮ್ಮ ಮನೆ,ಮಠ,ಕುಟುಂಬವನ್ನು ತೊರೆದು ಹೋರಾಟ ನಡೆಸಿದ್ದರೂ ಯಾವುದೇ ಸ್ಪಂದನೆ ನೀಡದೇ ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ, ಕೇಂದ್ರದ ಮೇಲೆ ರಾಜ್ಯ ಸರ್ಕಾರ ಬೆರಳು ಮಾಡುತ್ತಾ ಕಾಲಹರಣ ನಡೆಸಿದ್ದಾರೆ.ರಾಜ್ಯ ಸರ್ಕಾರ ತನ್ನ ಪಾಲಿನ ಎಸ್ಎಪಿ ದರವನ್ನಾದರೂ ಘೋಷಣೆ ಮಾಡಬಹುದಿತ್ತು.ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕಬ್ಬು ಬೆಳೆಗಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಗೋಲಿಬಾರ್ ಮಾಡಿಸಿದ್ರೂ ಹೆದರುವುದಿಲ್ಲ.ಕಬ್ಬು ಒಣಗುತ್ತಿದ್ದು ಏನು ಘೋಷಣೆ ಮಾಡುತ್ತೇವೆ ಎಂಬುದನ್ನು ಸರ್ಕಾರ ಹೇಳುತ್ತಿಲ್ಲ.ಕಾರ್ಖಾನೆಯವರು 4000 ರೂ.ಕೊಡುವುದಕ್ಕೆ ಮೊದಲು ಒಪ್ಪಿ ಈಗ ತಿರುಗಿ ಬಿದ್ದಿದ್ದಾರೆ.ಎಂಎಸ್ಪಿ ಹೆಚ್ಚಿಸಿ ನಾವು ದರ ಹೆಚ್ಚಳ ಪ್ರಕಟ ಮಾಡುತ್ತೇವೆ ಎಂದು ನಾಟಕ ಮಾಡುತ್ತಿದ್ದಾರೆ.ಸರ್ಕಾರದವರೇ ಕಾರ್ಖಾನೆಯವರನ್ನು ಹಾಳು ಮಾಡುತ್ತಿದ್ದಾರೆ.ರಾಜಕಾರಣಿಗಳು,ಸರ್ಕಾರ ರೈತರನ್ನು ರೈತರ ವಿರುದ್ಧವೇ ಎತ್ತಿಕಟ್ಟಿ ಹೋರಾಟ ಹತ್ತಿಕ್ಕುವ ತಂತ್ರ ಅನುಸರಿಸುತ್ತಿದ್ದಾರೆ.ಇದು ಹೋರಾಟ ಪಕ್ಷಾತೀತವಾಗಿ ರೈತರು ಬೆಂಬಲ ನೀಡುತ್ತಿದ್ದಾರೆ.ಒಂದು ವರ್ಷ ಗ್ಯಾರಂಟಿ ಬಂದ್ ಮಾಡಿ ಎಂದು ಹೇಳಿದರು.
ಮುಖಂಡ ಸೋಮನಗೌಡ ಕೋಳೂರ ಪಡೇಕನೂರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕುಲಕಸುಬನ್ನು ಅವಮಾನಿಸುವ ಕೆಲಸ ಮಾಡುತ್ತಿವೆ.ಒಕ್ಕಲುತನ ಮಾಡುವವನಿಗೆ ಹೆಣ್ಣು ಸಿಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ.ಸರ್ಕಾರ ಈ ವೃತ್ತಿಯ ಬಗ್ಗೆ ಹಗುರವಾಗಿ ಕಾಣುತ್ತಿರುವುದರಿಂದ ರೈತರಿಗೆ ನ್ಯಾಯ ಸಿಗುತ್ತಿಲ್ಲ.ರೈತರು ಸಂಘಟಿತರಾಗಿದ್ದು ಸರ್ಕಾರ ಕಣ್ತೆರೆದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಲಕ್ಷö್ಮಣ ಬಿಜ್ಜೂರ, ಸಂಗಮೇಶ ಮೇಟಿ,ಗುರುಸಂಗಪ್ಪ ಹಂಡರಗಲ್,ಗುರು ರಾಯಗೊಂಡ,ಸoಗಣ್ಣ ಬೀಸಲದಿನ್ನಿ ಹಲವರು ಮಾತನಾಡಿದರು.ತಾಲ್ಲೂಕಿನ ಸಾವಿರಾರರು ರೈತರು ಮುದ್ದೇಬಿಹಾಳದಲ್ಲಿ ನಡೆದ ಹೋರಾಟಕ್ಕೆ ಬೆಂಬಲ ನೀಡಿದರು.ಅಲ್ಲದೇ ರಾಜ್ಯ,ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳಿಗಳಲ್ಲೂ ಬೀದಿಗಿಳಿದ ರೈತರು: ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಕರೆಗೆ ಮುದ್ದೇಬಿಹಾಳ ತಾಲ್ಲೂಕು ವ್ಯಾಪ್ತಿಯ ಹಲವಾರು ಹಳ್ಳಿಗಳಲ್ಲಿ ಬೆಂಬಲ ವ್ಯಕ್ತವಾಯಿತು.ತಾಲ್ಲೂಕಿನ ನಾಲತವಾಡದಲ್ಲಿ ಮುಖಂಡರಾದ ಎಂ.ಬಿ.ಅoಗಡಿ,ಶಶಿಧರ ಬಂಗಾರಿ,ಮಹಾoತೇಶ ಗಂಗನಗೌಡರ,ಹಿರೇಮುರಾಳದಲ್ಲಿ ಗಿರೀಶಗೌಡ ಪಾಟೀಲ,ವೀರೇಶನಗರ,ನಾಗಬೇನಾಳ,ಅಗಸಬಾಳ ಕ್ರಾಸ್,ಕವಡಿಮಟ್ಟಿ, ಹುಲ್ಲೂರ ಭಾಗದಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಅಲ್ಲದೇ ರಸ್ತೆ ತಡೆ ನಡೆಸಿದ್ದರಿಂದ ಕಿಮೀಗಟ್ಟಲೇ ದೂರದವರೆಗೆ ವಾಹನಗಳು ನಿಂತಿದ್ದವು.ಸಿಪಿಐ ಮೊಹ್ಮದಫಸಿವುದ್ದೀನ,ಪಿಎಸ್ಐ ವಿಜಯಕುಮಾರ ತಳವಾರ,ತಾಳಿಕೋಟಿ ಪಿಎಸೈ ಜ್ಯೋತಿ ಖೋತ,ಸಿಬ್ಬಂದಿ ಭದ್ರತೆ ಉಸ್ತುವಾರಿ ವಹಿಸಿದ್ದರು.







