ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ಮುದ್ದೇಬಿಹಾಳ : ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪಟ್ಟಣದ ಆಲಮಟ್ಟಿ ರಸ್ತೆಯ ಬಳಿ ಇರುವ ಸಾಯಿಮಂದಿರ ಸಮೀಪದಲ್ಲಿರುವ ಢವಳಗಿ ಲೇಔಟ್ ಬಳಿ ಇರುವ ಸಾರ್ವಜನಿಕ ಉದ್ಯಾನವನದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.

ಪಟ್ಟಣದ ಆಲಮಟ್ಟಿ ರಸ್ತೆಯ ಸಾಯಿ ಮಂದಿರದ ಹತ್ತಿರ ಇರುವ ಢವಳಗಿ ಲೇಔಟ್‌ಬಳಿ ಸಾರ್ವಜನಿಕ ಉದ್ಯಾನವನದಲ್ಲಿ ನಿಗದಿ ಮಾಡಿದ ಸ್ಥಳದಲ್ಲಿ ಭಾನುವಾರ ನಿಯೋಜಿತ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಸಾಂಕೇತಿಕ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಕನ್ನಡ ಭವನಕ್ಕೆ ಜಾಗೆ ಗುರುತಿಸುವುದಾಗಿ ನಾನು ಈ ಹಿಂದೆ ಮಾತು ಕೊಟ್ಟಿದ್ದೆ.ಅದರಂತೆ ಈಗ ಸ್ಥಳ ಗುರುತಿಸಲಾಗಿದೆ.ಶಾಸಕರು,ದಾನಿಗಳ ನೆರವಿನಿಂದ ಮುಂದಿನ ಕಾರ್ಯ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಹಿರಿಯ ಸಾಹಿತಿ ಬಿ.ಎಂ.ಹಿರೇಮಠ,ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಶೋಕ ಮಣಿ,ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ,ವಾಯ್.ಎಚ್.ವಿಜಯಕರ್,ಪತ್ರಕರ್ತ ಶಂಕರ ಹೆಬ್ಬಾಳ ಮಾತನಾಡಿ, ಶಾಸಕರ ಅಧ್ಯಕ್ಷತೆಯಲ್ಲಿ ಇನ್ನೊಂದು ಸುತ್ತಿನ ಸಭೆ ನಡೆಸಿ ಭವನದ ನಿರ್ಮಾಣಕ್ಕೆ ದಾನಿಗಳ ಸಹಕಾರ ಕೋರಲು ತಿಳಿಸಿದರು.ಈ ಸಂದರ್ಭದಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ,ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ,ಹಿರಿಯ ಸಾಹಿತಿ ಅಬ್ದುಲರಹೆಮಾನ್ ಬಿದರಕುಂದಿ,ಶಿವಪುತ್ರಪ್ಪ ಅಜಮನಿ,ಚಂದ್ರು ಕಲಾಲ,ಹುಸೇನ್ ಮುಲ್ಲಾ,ಸಂಗಮೇಶ ಶಿವಣಗಿ,ಮೊಹ್ಮದರಫೀಕ ಶಿರೋಳ,ಕಿರಣ ಪಾಟೀಲ,ಪ್ರಕಾಶ ನರಗುಂದ,ಮಹಾAತೇಶ ಬೂದಿಹಾಳಮಠ,ಪ್ರಭುಗೌಡ ರಾರೆಡ್ಡಿ,ಸಂಗಯ್ಯ ಸಾರಂಗಮಠ,ಸಿದ್ದನಗೌಡ ಬಿಜ್ಜೂರ,ಉಮೇಶ ಕಡಿ,ಎಚ್.ಆರ್.ಬಾಗವಾನ,ಸಂಗಣ್ಣ ಮೇಲಿನಮನಿ,ಚೈತನ್ಯ ಮುದ್ದೇಬಿಹಾಳ ಮೊದಲಾದವರು ಇದ್ದರು.

Latest News

ಅಸೂಯೆ,ಮತ್ಸರ ಬಿಟ್ಟು ಸಕಲರಿಗೆ ಲೇಸು ಬಯಸಿ-ಅಂಕಲಿಮಠ ಶ್ರೀ

ಅಸೂಯೆ,ಮತ್ಸರ ಬಿಟ್ಟು ಸಕಲರಿಗೆ ಲೇಸು ಬಯಸಿ-ಅಂಕಲಿಮಠ ಶ್ರೀ

ಮುದ್ದೇಬಿಹಾಳ : ಮಾನವ ಜನ್ಮದಲ್ಲಿ ಹುಟ್ಟಿ ಬಂದಿರುವ ಎಲ್ಲರೂ ಅಸೂಯೆ,ಮತ್ಸರದ ಭಾವನೆ ಬಿಟ್ಟು ಸಕಲರಿಗೆ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ:   ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನೇತೃತ್ವ: ನಾಯನೇಗಲಿ,ಬಾಲಾಜಿ ಶುಗರ‍್ಸ್ ಸಕ್ಕರೆ ಗೋದಾಮುಗಳಿಗೆ ಬೀಗ

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ನಡೆಯುತ್ತಿರುವ ಹೋರಾಟದ ಮುಂದುವರೆದ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಮುದ್ದೇಬಿಹಾಳ : ದಸರಾ  ನಿಮಿತ್ಯವಾಗಿ  ತಾಲ್ಲೂಕಿನ  ಗಂಗೂರ  ಗ್ರಾಮದಲ್ಲಿ ಅ.30  ರಂದು ಬೆಳಗ್ಗೆ 11.30ಕ್ಕೆ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ:                    ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ:                                                                                         ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ರಾಣಿಬೆನ್ನೂರಿನ ಭವಾನಿ ಹಾಸ್ಪಿಟಲ್ ನೇತೃತ್ವ: ಜನರ ಸೇವೆಗೆ ಅವಕಾಶ ದೊರಕಿದ್ದೇ ನನ್ನ ಸೌಭಾಗ್ಯ-ಡಾ.ತಿರುಪತಿ ನಾಯಕ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಬರುವ ಬಹುತೇಕ ಗ್ರಾಮಗಳಲ್ಲಿ ಫ್ಲೋರೈಡ್ ಅಂಶವಿರುವ ನೀರು ಇದ್ದು ಸಮಸ್ಯೆಯಿಂದ ಬಳಲುತ್ತಿರುವ ನನ್ನ ಭಾಗದ ಜನರಿಗೆ ಸೇವೆ ಒದಗಿಸಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದು ರಾಣಿಬೆನ್ನೂರು ಭವಾನಿ ಹಾಸ್ಪಿಟಲ್ ಮುಖ್ಯಸ್ಥ ಡಾ.ತಿರುಪತಿ ನಾಯಕ ಹೇಳಿದರು. ತಾಲ್ಲೂಕಿನ ಯರಝರಿ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಶನಿವಾರ ಶ್ರೀದೇವಿ ನವರಾತ್ರೋತ್ಸವ ಅಂಗವಾಗಿ ರಾಣೆಬೆನ್ನೂರಿನ ಶ್ರೀಭವಾನಿ ಹಾಸ್ಪಿಟಲ್ ಹಾಗೂ ಕಾಳಜಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಏರ್ಪಡಿಸಿದ್ದ

ಅ.25 ರಂದು ಯರಝರಿಯಲ್ಲಿ ನವರಾತ್ರೋತ್ಸವ,ಸಾಮೂಹಿಕ ವಿವಾಹ

ಅ.25 ರಂದು ಯರಝರಿಯಲ್ಲಿ ನವರಾತ್ರೋತ್ಸವ,ಸಾಮೂಹಿಕ ವಿವಾಹ

ಮುದ್ದೇಬಿಹಾಳ : ನವರಾತ್ರೋತ್ಸವದ ಅಂಗವಾಗಿ ತಾಲ್ಲೂಕಿನ ಯರಝರಿಯ ಯಲ್ಲಾಲಿಂಗೇಶ್ವರ ಮಠದಲ್ಲಿ ಮಲ್ಲಾರಲಿಂಗ ಮಹಾರಾಜರ ನೇತೃತ್ವದಲ್ಲಿ ಅ,24 ಹಾಗೂ 25ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ.24 ರಂದು ಬೆಳಗ್ಗೆ ಪರಮಾನಂದರ ಉತ್ಸವದೊಂದಿಗೆ ಖಾದರಲಿಂಗ ದರ್ಗಾಕ್ಕೆ ಗಂಧ ಹೊರಡುತ್ತದೆ.ನಂತರ ಬಸರಕೋಡ ಪವಾಡ ಬಸವೇಶ್ವರರು ಉಪಯೋಗಿಸಿದ ವಸ್ತುಗಳನ್ನು ಮಠಕ್ಕೆ ಮೆರವಣಿಗೆ ಮೂಲಕ ಕರೆತರುವುದು.ನಂತರ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ,ರಾತ್ರಿ 10ಕ್ಕೆ ಕಲಾ ಸಂಗಮ ಮೆಲೋಡಿಸ್‌ನಿಂದ ಹಾಸ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗುವುದು. ಅ.25 ರಂದು