Kalburgi: Honeytrap racket, arrest of accused

Kalburgi: ಹನಿಟ್ರ್ಯಾಪ್ ದಂಧೆ, ಆರೋಪಿಗಳ ಬಂಧನ

Kalburgi: ಹನಿಟ್ರ್ಯಾಪ್ ದಂಧೆ, ಆರೋಪಿಗಳ ಬಂಧನ

Ad
Ad

ಕಲಬುರಗಿ: ಅಮಾಯಕ ಯುವತಿಯರನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಪರಿಚಯಿಸಿಕೊಂಡು ಕಲಬುರಗಿಯಲ್ಲಿನ ಸರಕಾರಿ ಅಧಿಕಾರಿಗಳ, ಉದ್ಯಮಿಗಳಿಗೆ ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡುವ ದಂಧೆ ಎಗ್ಗಿಲ್ಲದೆ ಸಾಗಿದೆ.

Ad
Ad

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

10ಕ್ಕೂ ಅಧಿಕ ಅಮಾಯಕ ಯುವತಿಯರನ್ನು ಬಳಸಿಕೊಂಡು ಹನಿಟ್ರಾಪ್ ದಂಧೆ ಮಾಡುತ್ತಿರುವ ಗ್ಯಾಂಗ್‌ನ ರಾಜು ಲೇಂಗಟಿ ಸೇರಿದಂತೆ 4 ಜನರ ವಿರುದ್ಧ ಇದೀಗ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನುಳಿದ, ಗ್ಯಾಂಗ್ ನ ಸದಸ್ಯರ ಹುಡುಕಾಟಕ್ಕಾಗಿ ಪೊಲೀಸರು ತಮ್ಮ ಜಾಲವನ್ನು ಬಿಸಾಡಿದ್ದಾರೆ.

ದಲಿತ ಸೇನೆಯ ಮುಖಂಡನ ಬಂಧನ:

ಯುವತಿಯರನ್ನು ಬಳಸಿಕೊಂಡು ಸರಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಆರೋಪದ ಹಿನ್ನಲೆಯಲ್ಲಿ ದಲಿತ ಸೇನೆಯ ಮುಖಂಡ ರಾಜು ಲೇಂಗಟಿ ಅವರನ್ನು ಇದೀಗ ಪೊಲೀ ಸರು ಬಂಧನ ಮಾಡಿದ್ದಾರೆ.

ಆಡಿಯೊ ಬಿಡುಗಡೆ:

ಕಲಬುರಿಗಿಯಲ್ಲಿ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ರಾಜು ಬೇಂಗಟಿ ಹಾಗೂ ಸಂತ್ರಸ್ತ ಯುವತಿಯ ನಡುವಿನ ಮಾತುಕತೆಯ ಅಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉದ್ಯಮಿಯೊಬ್ಬರ ಬಳಿ ಪಡೆದಿರುವ ಹಣದ ಕುರಿತಾಗಿ ಆರೋಪಿ ರಾಜು ಲೇಂಗಟಿ ಆಡಿಯೋದಲ್ಲಿ ಮಾತನಾಡಿದ್ದು, ಇದೀಗ ಬಹಿರಂಗವಾಗಿದೆ. 40 ಲಕ್ಷ ಡೀಲ್ ನಲ್ಲಿ ಹಣದ ಬಗ್ಗೆ ಗೊಂದಲವನ್ನು ಸೃಷ್ಟಿ ಮಾಡಿಕೊಂಡಿರುವ ಹನಿಟ್ರಾಪ್ ಗ್ಯಾಂಗ್, ಆಡಿಯೊದಲ್ಲಿ ಎಲ್ಲವೂ ಮಾತನಾಡಿರುವುದು ಬೆಳಕಿಗೆ ಬಂದಿದೆ.

ಯುವತಿಯ ಜೊತೆಗೆ ಮಾತನಾಡುವಾಗಲೇ ಉದ್ಯಮಿಗೆ ಕರೆ ಮಾಡಿ ಡೀಲ್ ಹಣದ ಸ್ಪಷ್ಟತೆಯನ್ನು ಆರೋಪಿ ರಾಜು ಲೇಂಗಟಿ ನೀಡಿದ್ದಾನೆ. 40 ಲಕ್ಷ ಹಣ ಡೀಲ ಆಗಿದೆ. ಹತ್ತು ಲಕ ಹಣ ಈಗಾಗಲೇ ಕೊಟ್ಟಿದ್ದು, ಉಳಿದ ಹಣವನ್ನು ಆಮೇಲೆ ನೀಡುವುದಾಗಿ ಹೇಳಿದ್ದಾರೆ. ಎಲ್ಲರಿಗೂ ಎರಡು ಎರಡು ಲಕ್ಷ ಹಂಚಿಕೊಳ್ಳುವುದಾಗಿ ಅಂತ ಆಡಿಯೋದಲ್ಲಿ ರಾಜು ಮಾತನಾಡಿದ್ದು, ಪ್ರಭು ಹಿರೇಮಠ ನಿಮಗೆ ಗೊಂದಲ ಸೃಷ್ಟಿ ಮಾಡುತ್ತಿದ್ದಾನೆ ಎಂದು ಆಡಿಯೋ ಮಾಡಿ ಇದೀಗ ವಿವರಣೆ ನೀಡಿದೆ.

ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ:

ಅಮಾಯಕ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ

ಕರಾಳ ದಂಧೆಯ ಮುಖವಾಡ ಬಗೆದಷ್ಟೂ ಬಯಲಾಗುತ್ತಿದೆ. ಹನಿಟ್ರಾಪ್ ಪ್ರಕರಣದ ಆರೋಪಿ ಪ್ರಭು ಸ್ವಾಮಿ ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ್ದಾನೆ. ವಿಡಿಯೊ ಬಿಡುಗಡೆ ಮಾಡಿ, ಉದ್ಯಮಿಯಿಂದ ರಾಜು ಬೇಂಗತಿ ಅವರು 6 ಲಕ್ಷ ಹಣವನ್ನು ಪಡೆದು ನನ್ನ ಖಾತೆಗೆ ಆರ್ ಟಿ ಜಿ ಎಸ್ ಮೂಲಕ ಹಾಕಿದ್ದರು.

ಇದನ್ನೂ ಓದಿ: Shocking news: ಪತ್ನಿಯ ಹೆರಿಗೆ ಬಿಲ್ ಪಾವತಿಸಲು ಮಗನನ್ನೇ ಮಾರಲು ಮುಂದಾದ ತಂದೆ!

ಅದಾದ ಬಳಿಕ ನಮ್ಮ ಮಾವನ ಖಾತೆಗೆ 8 ಲಕ್ಷ ಹಣವನ್ನು ಪುನಃ ನೆಫ್ಟ್, ಆರ್‌ಟಿಜಿಎಸ್ ಮೂಲಕ ಹಾಕಿದ್ದಾರೆ. ಹೀಗೆ ನನ್ನ ಹಾಗೂ ನನ್ನ ಮಾವನ ಖಾತೆಗೆ ಹಾಕಿದ ಹಣವನ್ನು ರಾಜು ಲೇಂಗಟಿ ಅವರು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಯಾರಿಗೋ ಕೊಡಬೇಕು ಅಂತ ಹೇಳಿ ನನ್ನ ಹಾಗೂ ನನ್ನ ಮಾವನ ಖಾತೆಗೆ ಹಾಕಿಸಿದ್ದು, ಹಣ ಹಾಕಿದ ಬಳಿಕ ಅವರೇ ವಿತ್ ಡ್ರಾ ಮಾಡಿಕೊಂಡಿದ್ದಾರೆ.ರಾಜು ಲೇಂಗಟಿ ಅವರನ್ನು ಕೇಳಿದಾಗ ಸಂಘಟನೆಯವರಿಗೆ ಕೊಡಬೇಕು ಎಂದು ಹೇಳಿದ್ದರು. ಸಾಲದಂತೆ ಹಣದ ವಿಚಾರದಲ್ಲಿ ಗಲಾಟೆ ಮಾಡಿ ನನ್ನ ಮೇಲೆ ಕೇಸ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪ್ರಕರಣದ ಆರೋಪಿ ಪ್ರಭುಸ್ವಾಮಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾನೆ.

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500