Protest in front of Kuntoji Grama

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಕುಂಟೋಜಿ ಗ್ರಾಪಂ ಮುಂದೆ ಧರಣಿ: ನಕಲಿ ದಾಖಲೆ ಸೃಷ್ಟಿಸಿ ನೇಮಕವಾದ ವಾಟರ್‌ಮನ್‌ಗಳ ವಜಾಗೆ ಆಗ್ರಹ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಮಕಗೊಂಡಿರುವ ಮೂವರು ವಾಟರ್‌ಮನ್‌ಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರದಿಂದ ಮಾದಿಗ ಜನಸಂಘದ ಪದಾಧಿಕಾರಿಗಳು ಧರಣಿ ಸತ್ಯಾಗ್ರಹ ಆರಂಭಿಸಿದರು.

ಹೋರಾಟದ ನೇತೃತ್ವ ವಹಿಸಿದ ಜಿಲ್ಲಾ ದೌರ್ಜನ್ಯ ತಡೆ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ, ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಸೇರಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಯಮಬಾಹಿರವಾಗಿ ಕೆಲಸದಲ್ಲಿ ಮುಂದುವರೆದಿರುವ ಮೂವರು ವಾಟರ್‌ಮನ್‌ಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಮಾಡಿದ್ದರೂ ಅದಕ್ಕೆ ಬೆಲೆ ಕೊಡದೇ ಅವರನ್ನು ಹಾಗೆ ಮುಂದುವರೆಸಿದ್ದಾರೆ. ಅಕ್ರಮವಾಗಿ ನೇಮಕಗೊಂಡಿರುವ ವಾಟರ್‌ಮನ್‌ಗಳಿಂದ ಪಿಡಿಒ, ಅಧ್ಯಕ್ಷರು ಲಂಚ ಪಡೆದುಕೊಂಡಿದ್ದಾರೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಮೇಲಧಿಕಾರಿಯಾಗಿರುವ ತಾಪಂ ಇಒ ಅವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಹಾರಿಕೆ ಉತ್ತರಗಳನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ವಂಚಿಸುತ್ತಿರುವ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನಧಿಕೃತವಾಗಿ ಸರ್ಕಾರದ ವೇತನವನ್ನೂ ಪಡೆದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಪಂಚಾಯಿತಿ ಅಧ್ಯಕ್ಷ, ಪಿಡಿಒ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಒ ನಿಂಗಪ್ಪ ಮಸಳಿ ಹೋರಾಟಗಾರರ ಮನವೊಲಿಸಲು ಯತ್ನಿಸಿದರೂ ವಾಟರ್‌ಮನ್‌ಗಳ ವಜಾಗೊಳಿಸಿದ ಬಳಿಕವೇ ನಮ್ಮ ಹೋರಾಟ ಹಿಂದಕ್ಕೆ ಪಡೆದುಕೊಳ್ಳುವುದಾಗಿ ತಿಳಿಸಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿ ವಾಪಸ್ ಮರಳಿದರು.

ಮಾದಿಗ ಸಮಾಜದ ಮುಖಂಡರಾದ ರಮೇಶ ದೊಡ್ಡಮನಿ, ಶಿವಪುತ್ರಪ್ಪ ಪೂಜಾರಿ, ದುರಗಪ್ಪ ಮಾದರ, ಹಣಮಂತ ಅಬ್ಬಿಹಾಳ, ರಾಮಪ್ಪ ಕವಡಿಮಟ್ಟಿ,ಕುಂಟಪ್ಪ ಜೋಗಿನ , ಪರಶುರಾಮ ಫಿರಂಗಿ, ಮುದಕಪ್ಪ ಫಿರಂಗಿ, ಹಣಮಂತ ಕವಡಿಮಟ್ಟಿ ಮೊದಲಾದವರು ಇದ್ದರು.

Latest News

ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ

ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ

ಮುದ್ದೇಬಿಹಾಳ : ರಾಯಚೂರಿನ ಸಿದ್ದರಾಮ ಜಮ್ಮಲದಿನ್ನಿ ಕಲ್ಯಾಣ ಮಂಟಪದಲ್ಲಿ ನಡೆದ ಮಾತೋಶ್ರೀ ಮಹಾಂತಮ್ಮ ಶಿವಬಸ್ಸಪ್ಪ

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ :                   ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ : ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ

ಮುದ್ದೇಬಿಹಾಳ : ನಗರ ಪ್ರದೇಶಗಳಲ್ಲಾದರೆ ಸಂಸ್ಥೆಗಳು ಕೇಳಿದಷ್ಟು ಶುಲ್ಕ ಕೊಡಲು ಪಾಲಕರು ಸಿದ್ಧರಿರುತ್ತಾರೆ.ಅಲ್ಲಿ ಶಿಕ್ಷಣ

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಕದನಕ್ಕೆ ಮಹೂರ್ತ ಫಿಕ್ಸ್..

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಕದನಕ್ಕೆ ಮಹೂರ್ತ ಫಿಕ್ಸ್..

ಬೆಂಗಳೂರು: ರಾಜ್ಯದಲ್ಲಿ ಇಬ್ಬರು ಶಾಸಕರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ

ಟಗರಿನ ಕಾಳಗ ಪ್ರಮುಖ ಆಕರ್ಷಣೆ:                              ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ

ಟಗರಿನ ಕಾಳಗ ಪ್ರಮುಖ ಆಕರ್ಷಣೆ: ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದ ಪಿಲೇಕೆಮ್ಮ ನಗರದಲ್ಲಿರುವ ಪಿಲೇಕೆಮ್ಮ ದೇವಿ ಜಾತ್ರಾಮಹೋತ್ಸವ ಮಾ.18 ಹಾಗೂ 19ರಂದು

ಪತ್ರಕರ್ತರಾದ ದಫೇದಾರ,ಉಕ್ಕಲಿ,ಹೋರಾಟಗಾರ ನಾಟೀಕಾರ ಸೇರಿ 30 ಜನ ಆಯ್ಕೆ

ಪತ್ರಕರ್ತರಾದ ದಫೇದಾರ,ಉಕ್ಕಲಿ,ಹೋರಾಟಗಾರ ನಾಟೀಕಾರ ಸೇರಿ 30 ಜನ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಏಜ್ಯೂಕೇಷನ ರೂರಲ್ ಕಲ್ಚರಲ್ ಸೊಸೈಟಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿಗೆ ಮಾಧ್ಯಮ, ಸಂಕೀರ್ಣ,ಶಿಕ್ಷಣ,ಸಾಮಾಜಿಕ ಹೋರಾಟ ಕ್ಷೇತ್ರಗಳಿಂದ ಒಟ್ಟು 30 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುದ್ದೇಬಿಹಾಳ ತಾಲ್ಲೂಕಿನ ಹಂಡರಗಲ್‌ದಲ್ಲಿ ತ್ರಿಕೂಟೇಶ್ವರ ದೇವಸ್ಥಾನದ ಉಳಿವು,ಜೀರ್ಣೋದ್ಧಾರಕ್ಕೆ ಹೋರಾಟ ಮಾಡಿದ ಕುಮಾರಸ್ವಾಮಿ ಹಿರೇಮಠ, ಮಾಧ್ಯಮ ಕ್ಷೇತ್ರದಲ್ಲಿ

ಒಲೆಯ ಮೇಲೆ ರೊಟ್ಟಿ ಬೇಯಿಸಿ ಪ್ರತಿಭಟನೆ:                     ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ

ಒಲೆಯ ಮೇಲೆ ರೊಟ್ಟಿ ಬೇಯಿಸಿ ಪ್ರತಿಭಟನೆ: ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ

ಮುದ್ದೇಬಿಹಾಳ : ದೇಶವನ್ನು ಆಳುತ್ತಿರುವ ಪ್ರಧಾನ ನರೇಂದ್ರ ಮೋದಿ ಅವರಿಗೆ ಬಡವರು,ಮಧ್ಯಮ ವರ್ಗದವರದ್ದು ಆಲೋಚನೆ ಇಲ್ಲ.ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಇದುವರೆಗೂ ಏನೂ ಮಾಡಿಲ್ಲ.ಸಿಲಿಂಡರ್ ದೊರೆಯದಂತಹ ಪರಿಸ್ಥಿತಿ ತಂದಿಟ್ಟಿದ್ದು ತುರ್ತು ಸ್ಥಿತಿ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸಚೀನಗೌಡ ಪಾಟೀಲ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎನ್.ಎಸ್.ಯೂ.ಐ., ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್‌ನಿAದ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕೇಂದ್ರ