ಸ್ವ ಉದ್ಯೋಗದಿಂದ ಜೀವನ ರೂಪಿಸಿಕೊಳ್ಳಿ-ಶಿವಾನಂದ

ಸ್ವ ಉದ್ಯೋಗದಿಂದ ಜೀವನ ರೂಪಿಸಿಕೊಳ್ಳಿ-ಶಿವಾನಂದ

ಮುದ್ದೇಬಿಹಾಳ : ಸ್ವ ಉದ್ಯೋಗದಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ., ಹೇಳಿದರು.

ಪಟ್ಟಣದ ವಿದ್ಯಾನಗರದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುದ್ದೇಬಿಹಾಳ ಯೋಜನಾ ಕಚೇರಿಯಲ್ಲಿ ಸ್ವ ಉದ್ಯೋಗ ಆಧಾರಿತ ಫಲಾನುಭವಿಗಳಿಗೆ ಸಿಡ್ಬಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಬಡತನ ನಿರ್ಮೂಲನೆ ಉದ್ದೇಶದಿಂದ ಆಸಕ್ತರಿಗೆ ಸ್ವ ಉದ್ಯೋಗ ತರಬೇತಿ ನೀಡಲು ರುಡ್‌ಸಟ್ ಸಂಸ್ಥೆ ಪ್ರಾರಂಭಿಸಿದರು.

ಯೋಜನೆಯ ಸದಸ್ಯರಿಗೆ ಕಿರು ಉದ್ಯೋಗ ಆರಂಭಿಸಲು ಬ್ಯಾಂಕಿನ ಮೂಲಕ ಸಿಡ್ಬಿ ಪ್ರಯಾಸ್ ಸಂಸ್ಥೆಯೊAದಿಗೆ ಜಂಟಿಯಾಗಿ ಸಾಲ ನೀಡಲಾಗುತ್ತದೆ. ಸ್ವ ಉದ್ಯೋಗದಿಂದ ಹಲವು ಕುಟುಂಬಗಳು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.

ಯೋಜನಾ ಕಚೇರಿಯ ಹಣಕಾಸು ಪ್ರಬಂಧಕ ಅಣ್ಣರಾವ್ ಸಿಡ್ಬಿ ಸಾಲದ ಬೇಡಿಕೆ ಇಡುವಾಗ ಸದಸ್ಯರು ಕೊಡಬೇಕಾದ ದಾಖಲಾತಿಗಳ ಕುರಿತು ಬಡ್ಡಿಯ ಕುರಿತು ಮಾಹಿತಿ ನೀಡಿದರು.ಕಚೇರಿ ಸಹಾಯಕ ಶ್ರೀಮತಿ ನಂದಿನಿ, ಮಾರುತಿ ನಗರ ಸೇವಾಪ್ರತಿನಿಧಿ ಶ್ರೀಮತಿ ಸರಿತಾ ಇದ್ದರು. 84 ಮಂದಿ ಸ್ವ ಉದ್ಯೋಗ ಫಲಾನುಭವಿಗಳು ಭಾಗವಹಿಸಿದರು..

Latest News

ಸಂಘಟನೆಗೆ ಆದ್ಯತೆ ನೀಡಿ-ಅಶೋಕ ಚಟ್ಟೇರ

ಸಂಘಟನೆಗೆ ಆದ್ಯತೆ ನೀಡಿ-ಅಶೋಕ ಚಟ್ಟೇರ

ಮುದ್ದೇಬಿಹಾಳ : ಬಣಜಿಗ ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು.ಸಮಾಜದಲ್ಲಿ ಬೆಳೆಯುತ್ತಿರುವ ಪ್ರೋತ್ಸಾಹ ನೀಡುವ

ಮುದ್ದೇಬಿಹಾಳ : ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

ಮುದ್ದೇಬಿಹಾಳ : ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

ಮುದ್ದೇಬಿಹಾಳ : ರಸ್ತೆ ಕ್ರಾಸ್ ಮಾಡುತ್ತಿದ್ದ ವೇಳೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ:                    ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ: ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಹಾಗೂ

ಮುದ್ದೇಬಿಹಾಳ : ಬೈಕ್‌ಗೆ ಕಾರು ಡಿಕ್ಕಿ ; ಹಿಂಬದಿ ಸವಾರ ಸಾವು

ಮುದ್ದೇಬಿಹಾಳ : ಬೈಕ್‌ಗೆ ಕಾರು ಡಿಕ್ಕಿ ; ಹಿಂಬದಿ ಸವಾರ ಸಾವು

ಮುದ್ದೇಬಿಹಾಳ : ಬೈಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ

ಈ ಬಸ್ ಬೆಲೆಯೇ 39 ಲಕ್ಷ ರೂ.!!                            ಮುದ್ದೇಬಿಹಾಳ : ನಗರ ಸಾರಿಗೆ ಬಸ್‌ನಲ್ಲಿ ಏನೆಲ್ಲ ಸೌಲಭ್ಯವಿದೆ..?

ಈ ಬಸ್ ಬೆಲೆಯೇ 39 ಲಕ್ಷ ರೂ.!! ಮುದ್ದೇಬಿಹಾಳ : ನಗರ ಸಾರಿಗೆ ಬಸ್‌ನಲ್ಲಿ ಏನೆಲ್ಲ ಸೌಲಭ್ಯವಿದೆ..?

ಮುದ್ದೇಬಿಹಾಳ : ಹೈಟೆಕ್ ಸೌಲಭ್ಯವುಳ್ಳ ನಗರ ಸಾರಿಗೆ ಎರಡು ಬಸ್‌ಗಳಿಗೆ ಭಾನುವಾರ ಶಾಸಕ ಸಿ.ಎಸ್.ನಾಡಗೌಡ ಅವರು ಚಾಲನೆ ನೀಡಿದ್ದು ನಗರ ಸಾರಿಗೆಯ ಬಸ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಪ್ರಯಾಣಿಕರ ಸ್ನೇಹಿಯಾಗಿರು ಈ ಹೈಟೆಕ್ ಬಸ್‌ನಲ್ಲಿ ನಾಲ್ಕು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.ನಿಲುಗಡೆ ಸಮಯದಲ್ಲಿ ಪ್ರಯಾಣಿಕರು ಹತ್ತಿದ ಬಳಿಕ ಬಾಗಿಲು ಸ್ವಯಂಚಾಲಿತವಾಗಿ ಮುಚ್ಚಿದ ನಂತರವೇ ಬಸ್ ಮುಂದೆ ಸಾಗಲಿದೆ.ಅಲ್ಲದೇ ಆಯಾ ನಿಲ್ದಾಣಗಳ ಹೆಸರುಗಳನ್ನು ಮರ್ಕ್ಯೂರಿ ಲೈಟಿಂಗ್ ವ್ಯವಸ್ಥೆ

ಮುದ್ದೇಬಿಹಾಳ : ಫೆ.19 ರಂದು ಅದ್ದೂರಿ ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ

ಮುದ್ದೇಬಿಹಾಳ : ಫೆ.19 ರಂದು ಅದ್ದೂರಿ ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ

ಮುದ್ದೇಬಿಹಾಳ : ಸ್ಥಳೀಯ ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ಫೆ. 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಣೆ ಕುರಿತು ಸಮಾಜದ ಶ್ರೀ ಅಂಬಾಭವಾನಿ ಮಂದಿರದ ಆವರಣದಲ್ಲಿ ಶುಕ್ರವಾರರಂದು ಜರುಗಿದ ಪೂರ್ವಭಾವಿ ಸಭೆಯಲ್ಲಿ ಕೆಳಗೆ ನೀಡಿದಂತ ವಿವರಣೆಯಂತೆ ನಿರ್ಧರಿಸಲಾಯಿತು. ಅಂದು ಬೆಳಗಿನ ಜಾವ ಶ್ರೀ ಅಂಬಾಭವಾನಿ ಮೂರ್ತಿಗೆ ಮಹಾಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮ ಜರುಗುವದಲ್ಲದೇ ನಂತರ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಕುರಿತು ಬಜಾರ್ ಶ್ರೀ ಹನುಮಾನ್