ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುದ್ದೇಬಿಹಾಳ : ಹೆಚ್ಚುತ್ತಿರುವ ಶೀತಗಾಳಿ,ಜ್ವರದಿಂದ ಮಕ್ಕಳು,ವೃದ್ಧರು,ಮಹಿಳೆಯರಲ್ಲಿ ನೆಗಡಿ,ಕೆಮ್ಮು,ಜ್ವರ ಉಲ್ಬಣಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಿರುವ ರೋಗಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಕಳೆದೊಂದು ವಾರದಿಂದ ಶೀತಗಾಳಿ ಬೀಸುತ್ತಿರುವ ಕಾರಣ ತಾಪಮಾನದಲ್ಲಿ ಬದಲಾವಣೆಯಾಗಿದ್ದು ಹಲವು ರೋಗಗಳಿಗೆ ಈ ವಾತಾವರಣ ಕಾರಣವಾಗುತ್ತಿದೆ.10 ಡಿಗ್ರಿ ಸೆಲ್ಸಿಯಸ್‌ಗಿಂತ ತಾಪಮಾನ ಕುಸಿಯುತ್ತಿದ್ದು ಕೆಮ್ಮು,ನೆಗಡಿ ಜ್ವರದಿಂದ ಜನರು ಬಳಲುವಂತಾಗಿದೆ.

ಮುದ್ದೇಬಿಹಾಳ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ ಸುದ್ದಿಗಾರರೊಂದಿಗೆ ಮಾತನಾಡಿ, ಚಳಿಗಾಲದ ಸಮಯದಲ್ಲಿ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಸಾಮಾನ್ಯ ದಿನಗಳಲ್ಲಿ ಚಿಕ್ಕಮಕ್ಕಳು 20-30 ರೋಗಿಗಳು ಹೊರರೋಗಿಗಳಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ಈಗ ಚಳಿಗಾಲದ ಸಮಯದಲ್ಲಿ 60-70ಕ್ಕೆ ಏರಿಕೆಯಾಗಿದೆ.ದೈನಂದಿನ ತಪಾಸಣೆ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು 600-700 ಜನರು ನಿತ್ಯ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

Latest News

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಮುದ್ದೇಬಿಹಾಳ : ಇಲ್ಲಿನ ಯುವ ಉದ್ಯಮಿ,ಕಾಂಗ್ರೆಸ್ ಪಕ್ಷದ ಮುಖಂಡ ಆನಂದ ಪೂಜಾರಿ ಅವರನ್ನು ಕಾಂಗ್ರೆಸ್

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಮುದ್ದೇಬಿಹಾಳ : ದೇವಾಂಗ(ನೇಕಾರ)ಸಮುದಾಯದ ಸಂಘಟನೆ,ಜಾಗೃತಿಗಾಗಿ ಅಖಿಲ ಭಾರತ ದೇವಾಂಗ ಬೃಹತ್ ಜನಜಾಗೃತಿ ಸಮಾವೇಶ ಹಾಗೂ

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

​ಮುದ್ದೇಬಿಹಾಳ : ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಭಾರತದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಆಗಿದ್ದರೆ,ಡಾ.ಅಂಬೇಡ್ಕರ್ ಅವರು ಈ ದೇಶದ ಆತ್ಮವಾಗಿದ್ದಾರೆ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ;                                                                                 ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ; ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಮುದ್ದೇಬಿಹಾಳ : ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.100ರಷ್ಟಾಗಿದೆ.ಪರೀಕ್ಷೆಗೆ ಕೂತಿದ್ದ 229 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಆಸೀಫಾ ಕಾಶೀಮ್ ಖತೀಬ ಶೇ.98ರಷ್ಟು ಅಂಕ ಪಡೆದು ಮುದ್ದೇಬಿಹಾಳ ನಗರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ಇನ್ನುಳಿದAತೆ ಶೇ.97.83 ಅಂಕ ಪಡೆದ ಲಕ್ಷಿö್ಮÃ ಉಂಡಿ ದ್ವಿತೀಯ,ಶೇ.97.33 ಅಂಕ ಪಡೆದ ಸುಷ್ಮಿತಾ ದನ್ನೂರ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.ಉತ್ತೀರ್ಣರಾದ 229ರಲ್ಲಿ ಅದರಲ್ಲಿ 142 ಡಿಸ್ಟಿಂಕ್ಷನ್,76 ಪ್ರಥಮ,11 ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗಣಿತದಲ್ಲಿ 54,ಬಯೋಲಜಿ

ಯೂರಿಯಾ,ಡಿಎಪಿ ರಸಗೊಬ್ಬರ ವಿತರಣೆಗೆ ಎಫ್.ಐ.ಡಿ ಕಡ್ಡಾಯ

ಯೂರಿಯಾ,ಡಿಎಪಿ ರಸಗೊಬ್ಬರ ವಿತರಣೆಗೆ ಎಫ್.ಐ.ಡಿ ಕಡ್ಡಾಯ

ಮುದ್ದೇಬಿಹಾಳ : ಮುಂಗಾರು ಹಂಗಾಮಿನಲ್ಲಿ ಯೂರಿಯಾ ವಿತರಣೆಗೆ ಆಪ್ ಅಭಿವೃದ್ಧಿಪಡಿಸಲಾಗಿದ್ದು ಎಲ್ಲ ಕೃಷಿ ಪರಿಕರ ಮಾರಾಟಗಾರರು ಅದನ್ನು ಬಳಸಿಕೊಂಡು ಯೂರಿಯಾ ಮಾರಾಟ ಮಾಡಬೇಕು.ಯೂರಿಯಾ ,ಡಿಎಪಿ ಗೊಬ್ಬರ ಖರೀದಿಸಲು ರೈತರ ಖಾತೆಗಳು ಎಫ್.ಐ.ಡಿ ನೋಂದಣಿಯಾಗಿರುವುದು ಕಡ್ಡಾಯವಾಗಿದೆ ಎಂದು ವಿಜಯಪುರದ ಉಪ ಕೃಷಿ ನಿರ್ದೇಶಕ ಶರಣಗೌಡ ಆರ್, ಎಂದು ಹೇಳಿದರು. ಪಟ್ಟಣದ ಹುಡ್ಕೋದಲ್ಲಿರುವ ಬಿ.ಜಿ.ಮಠ್ ಸಭಾಭವನದಲ್ಲಿ ಮಂಗಳವಾರ ಕೃಷಿಪರಿಕರ ಮಾರಾಟಗಾರರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸನ್ 2026-27ನೇ ಸಾಲಿನಲ್ಲಿ ರೈತರಿಗೆ ಯೂರಿಯಾ