ಮುದ್ದೇಬಿಹಾಳ : ತಾಲ್ಲೂಕಿನ ನೇಬಗೇರಿ ತಾಂಡಾದ ನಿವಾಸಿ,ಜಮಖಂಡಿ ARTO ಜಯರಾಂ ನಾಯಕ ಅವರ ಮುದ್ನಾಳ ಗ್ರಾಮದ ತೋಟದ ಮನೆಯಲ್ಲಿ ಜ.21 ರಂದು ಮಧ್ಯರಾತ್ರಿ ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳುವು ಮಾಡಿಕೊಂಡು ಕಳ್ಳರು ಪರಾರಿಯಾದ ಘಟನೆ ಬುಧವಾರ ನಡೆದಿದೆ.
ಜಮಖಂಡಿಯಲ್ಲಿ ಎ.ಆರ್.ಟಿ.ಒ ಆಗಿ ಸೇವೆಯಲ್ಲಿರುವ ಜಯರಾಮ ನಾನಪ್ಪ ನಾಯಕ ಅವರ ಮನೆಗಳ್ಳತನ ಮಾಡಲಾಗಿದೆ.
ದಿನಾಂಕ:21/01/2026 ರಂದು ಸಾಯಂಕಾಲ 06:00 ಗಂಟೆಯಿಂದ ದಿನಾಂಕ:22/01/2026 ರಂದು 00-20 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡುವ ಉದ್ದೇಶದಿಂದ ನಮ್ಮ ಮನೆಯ ಬಾಗಿಲುಗಳ ಕೀಲಿ ಕೊಂಡಿ ಮುರಿದು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ 10,76,000/- ರೂ.ಕಿಮ್ಮತ್ತಿನ ಬಂಗಾರದ ಆಭರಣ ಹಾಗೂ ನಗದು 9,00,000=00 ರೂ ಸೇರಿದಂತೆ ಒಟ್ಟು 19,76,000=00 ರೂಗಳ ಕಿಮ್ಮತ್ತಿನ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮೊಹ್ಮದ ಫಸಿವುದ್ದೀನ , ಅಪರಾಧ ವಿಭಾಗದ ಪಿಎಸೈ ಆರ್.ಎಸ್.ಭಂಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
.
.







