ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಆಯೋಜನೆ: ನಾಳೆ ಬಾಗಲಕೋಟೆಯಲ್ಲಿ ಟ್ಯಾಲೆಂಟ್ ಸರ್ಚ್ ಎಕ್ಸಾಂ

ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಆಯೋಜನೆ: ನಾಳೆ ಬಾಗಲಕೋಟೆಯಲ್ಲಿ ಟ್ಯಾಲೆಂಟ್ ಸರ್ಚ್ ಎಕ್ಸಾಂ

ಮುದ್ದೇಬಿಹಾಳ : ಇಲ್ಲಿಗೆ ಸಮೀಪದ ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಆಕ್ಸ್ಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸ್ಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜು ವತಿಯಿಂದ ಫೆ.8ರಂದು ಮಧ್ಯಾಹ್ನ 12ಕ್ಕೆ

ಬಾಗಲಕೋಟೆ ನವನಗರದ ಕಾಳಿದಾಸ ವೃತ್ತದ ಹತ್ತಿರ ಇರುವ ಕಾಳಿದಾಸ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ‘ಆಕ್ಸ್ಫರ್ಡ್ ಪಾಟೀಲ್ಸ್ ಟ್ಯಾಲೆಂಟ್ ಸರ್ಚ್ ಎಕ್ಸಾಮ್-2026’ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಅಮಿತಗೌಡ ಎಂ.ಪಾಟೀಲ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಪಠ್ಯಕ್ರಮ,ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಓದುತ್ತಿರುವ ಕನ್ನಡ ಮತ್ತು ಆಂಗ್ಲ ಮಾಧ್ಯಮದವರಿಗೆ ಈ ಸ್ಪರ್ಧಾಪರೀಕ್ಷೆ ನಡೆಯುತ್ತದೆ. ವಿಜೇತರಿಗೆ ಪ್ರಥಮ 75,000 ರೂ., ದ್ವಿತೀಯ 50,000 ರೂ., ತೃತೀಯ 30,000 .ನಾಲ್ಕನೇ ಬಹುಮಾನ 15,000, ಐದನೇ ಬಹುಮಾನ 10,000 ,ಆರನೇ ಬಹುಮಾನ 5,000 ರೂ. ಬಹುಮಾನ ನೀಡಲಾಗುತ್ತದೆ. ಇದಲ್ಲದೆ 1-6 ಸ್ಥಾನಗಳ ನಂತರ ಹೆಚ್ಚು ಅಂಕ ಗಳಿಸುವ ಮೊದಲ 10 ವಿದ್ಯಾರ್ಥಿಗಳಿಗೆ ತಲಾ 1000 ರೂ. ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಐಡಿ ಕಾರ್ಡ್ ಅಥವಾ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಆಸಕ್ತರು ತಮ್ಮ ಹೆಸರು ನೋಂದಾಯಿಸಲು ವಿದ್ಯಾರ್ಥಿ ಹೆಸರು- ತರಗತಿ-ಶಾಲೆ-ವಿಳಾಸ-ಮೊಬೈಲ್ ನಂಬರ್ ಮಾಹಿತಿ ಎಸ್‌ಎಂಎಸ್ ಸಂದೇಶದ ಮೂಲಕ ಮೊ.9380095756 , 7483147040, 8310035858, 8971769144 ಸಂಖ್ಯೆ ಸಂಪರ್ಕಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಪರೀಕ್ಷೆ ದಿನದಂದೇ ವಿದ್ಯಾರ್ಥಿಗಳು ನೇರವಾಗಿ ಪರೀಕ್ಷಾ ಸ್ಥಳಕ್ಕೆ ಬಂದು ಹೆಸರು ನೋಂದಾಯಿಸಲು ಅವಕಾಶವಿದೆ. ಅಂದು ಬೆಳಗ್ಗೆ 10 ಗಂಟೆಗೂ ಮುನ್ನ ಪರೀಕ್ಷಾ ಸ್ಥಳಕ್ಕೆ ಆಗಮಿಸಬೇಕು ಎಂದು ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಕಾಲೇಜಿನ ಶಾಖೆ : ನಾಗರಬೆಟ್ಟ ಆಕ್ಸ್ಫರ್ಡ್ ಪಾಟೀಲ್ಸ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ನೂತನ ಶಾಖೆಯನ್ನು ಬಾಗಲಕೋಟೆ ನಗರದಲ್ಲಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ತಿಳಿಸಿದ್ದಾರೆ.

Latest News

ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಆಯೋಜನೆ:              ನಾಳೆ ಬಾಗಲಕೋಟೆಯಲ್ಲಿ ಟ್ಯಾಲೆಂಟ್ ಸರ್ಚ್ ಎಕ್ಸಾಂ

ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಆಯೋಜನೆ: ನಾಳೆ ಬಾಗಲಕೋಟೆಯಲ್ಲಿ ಟ್ಯಾಲೆಂಟ್ ಸರ್ಚ್ ಎಕ್ಸಾಂ

ಮುದ್ದೇಬಿಹಾಳ : ಇಲ್ಲಿಗೆ ಸಮೀಪದ ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಆಕ್ಸ್ಫರ್ಡ್ ಪಾಟೀಲ್ಸ್ ಸಮೂಹ

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಮುದ್ದೇಬಿಹಾಳ : ಪಟ್ಟಣದ ಸರಕಾರಿ ಆಸ್ಪತ್ರೆಯು ಸೇರಿದಂತೆ ತಾಲ್ಲೂಕಿನಲ್ಲಿಯ ಸರ್ಕಾರಿ ಆಸ್ಪತ್ರೆಗಳ ಆವರಣ,ಒಳ ಹೊರಗಡೆ

XXX Bet Bangladesh Review on Online Casino & Sports Betting Site 2025

Collect https://xxxbet.casino/ loyalty points on all of your wagers, which can

Best Online Casinos for Real Money 2026

To incentivize the download and use of their dedicated apps, it’s

ಹಾವು ಕಚ್ಚಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ನಾಡಗೌಡ ಸಾಂತ್ವನ

ಹಾವು ಕಚ್ಚಿ ಮೃತಪಟ್ಟ ರೈತನ ಕುಟುಂಬಕ್ಕೆ ಶಾಸಕ ನಾಡಗೌಡ ಸಾಂತ್ವನ

ಮುದ್ದೇಬಿಹಾಳ : ಸಮೀಪದ ಬಿಜ್ಜೂರ ಗ್ರಾಮದಲ್ಲಿ ಫೆ.1 ರಂದು ಕೃಷಿ ಚಟುವಟಿಕೆ ಕೈಗೊಂಡಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಮೃತಪಟ್ಟ ರೈತ ಗಂಗಪ್ಪ ಗುರಿಕಾರ ಅವರ ಕುಟುಂಬಕ್ಕೆ ಶಾಸಕ ಸಿ.ಎಸ್.ನಾಡಗೌಡ ಗುರುವಾರ ರೈತನ ಮನೆಗೆ ತೆರಳಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ದೌರ್ಜನ್ಯ ತಡೆ ಸಮೀತಿ ನಾಮನಿರ್ದೇಶಿತ ಸದಸ್ಯ ಮಲ್ಲು ತಳವಾರ, ವಿಪತ್ತು ನಿರ್ವಹಣಾ ಕಾಯ್ದೆ 12ರ ಪ್ರಕಾರ, ವಿಪತ್ತುಗಳಿಂದ ಉಂಟಾಗುವ ಮಾನವ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯದ

ಗರಸಂಗಿಯಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

ಗರಸಂಗಿಯಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತ್ ವಿಜಯಪುರ ಹಾಗೂ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಸ್ಪರ್ಶ ಕುಷ್ಟರೋಗ ಅರಿವು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಭಾರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿ, ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಫೆಬ್ರವರಿ 13ರವರೆಗೆ ಜಿಲ್ಲಾದ್ಯಂತ ನಡೆಯಲಿದ್ದು ಜಿಲ್ಲೆಯಲ್ಲಿ ಕುಷ್ಠರೋಗವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಅಭಿಯಾನ ಹಮ್ಮಿಕೊಳ್ಳಲಾಗಿದೆ.