ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಮುದ್ದೇಬಿಹಾಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ-ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ಮಾ.11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘದ ತಾಲ್ಲೂಕು ಪದಾಧಿಕಾರಿಗಳು ಶಾಸಕ ಸಿ.ಎಸ್.ನಾಡಗೌಡ ಹಾಗೂ ತಹಶೀಲ್ದಾರ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಇಲಾಖೆಯಿಂದ ಔಷಧಿ ಪೂರೈಕೆ ಮಾಡದೇ ಇರುವುದು,ಇಲಾಖೆಯ ವೃಂದ ಹಾಗೂ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡದೇ ಇರುವುದು,ಇಲಾಖೆಯ ಎಲ್ಲ ವೃಂದದ ಜೇಷ್ಠತಾ ಪಟ್ಟಿ ಪ್ರಕಟಿಸದೇ ಇರುವುದು,ಕಾಲಕಾಲಕ್ಕೆ ವೇತನ ಭತ್ಯೆ ನೀಡುವುದು, ಗುತ್ತಿಗೆ ನೌಕರರು,ವೈದ್ಯರು ಹಾಗೂ ಎನ್.ಎಚ್.ಎಂ ಗುತ್ತಿಗೆ ನೌಕರರಿಗೆ ಸೇವಾಭದ್ರತೆ ಒದಗಿಸುವುದೇ ಇರುವುದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ಸಿ.ಎಸ್.ನಾಡಗೌಡ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಬೇಡಿಕೆಗಳು ಈಗಾಗಲೇ ನನ್ನ ಗಮನಕ್ಕೆ ಬಂದಿವೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ ಅವರೊಂದಿಗೆ ಮಾತನಾಡಿದ್ದೇನೆ.ಇನ್ನೊಮ್ಮೆ ನಿಮ್ಮ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಆರೋಗ್ಯ ಸಚಿವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಬಹಳ ಪ್ರಾಮುಖ್ಯ ಹೀಗಾಗಿ ಮಾತುಕತೆಯ ಮೂಲಕ ನೀವು ಏನು ಬೇಡಿಕೆಗಳನ್ನು ಇಟ್ಟಿದ್ದೀರಿ ಅವುಗಳನ್ನು ಪರಿಶೀಲನೆ ಮಾಡಿ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಪರವಾಗಿ ಗ್ರೇಡ್-2 ತಹಶೀಲ್ದಾರ್ ಜಿ.ಎನ್.ಕಟ್ಟಿ ಮನವಿ ಪತ್ರ ಸ್ವೀಕರಿಸಿದರು.ತಾಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ,ತಾಲೂಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ ಅವರಿಗೂ ಮನವಿ ಪತ್ರ ಸಲ್ಲಿಸಲಾಯಿತು.

ತಾಲೂಕಿನ ವೈದ್ಯಾಧಿಕಾರಿಗಳಾದ ಡಾ.ಅನೀಲಕುಮಾರ ಶೇಗುಣಸಿ, ಡಾ.ರಂಗನಾಥ ವೈದ್ಯ, ಡಾ. ಬಿ.ಎಸ್.ಚೌದ್ರಿ , ಡಾ.ಅಬ್ದುಲಮಜೀದ್ ಬಾಗವಾನ, ಡಾ. ರಿಪತ್ತಕೌಸರ್ ಇನಾಮದಾರ, ಡಾ. ಬಸವರಾಜ್ ಅಲಗೂರ, ಡಾ.ಸಂಗಮೇಶ ದಶವಂತ, ಡಾ. ತಹಸೀನ್ ಶಿವಣಗಿ, ಡಾ.ಸಂದೀಪ ಬಿರಾದಾರ,ಆಲ್ ಕೆಡರ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದಗೌಡ ಎನ್ ಬಿರಾದಾರ,ತಾಲೂಕಿನ ಆರೋಗ್ಯ ಇಲಾಖೆಯ ನೌಕರರಾದ ಯಲ್ಲಪ್ಪ ಚಲವಾದಿ, ಎ.ಎಸ್.ತೆರದಾಳ, ಐ.ಸಿ. ಮಾನಕರ,ಎ.ಜಿ.ಆಳಗುಂಡಿ, ರೇಖಾ ಜಯಗೊಂಡರ,ಎA.ಎಸ್.ಗೌಡರ,ವ್ಹಿ.ವ್ಹಿ.ಪವಾಡಶೆಟ್ಟಿ,ವಿಠ್ಠಲ ಕಿಲಾರಟ್ಟಿ,ಸಂತೋಷ ಅಂಗಡಗೇರಿ, ಎಂ.ಬಿ.ಬಾಗವಾನ, ಎಸ್.ಎಸ್.ಮಾಗಿ,ಎ.ಐ.ಕೇಸಾಪುರ, ಮಲ್ಲು ತುರುಡಗಿ, ಯಲಗೂರೇಶ ತೊನಶ್ಯಾಳ, ಸಂತೋಷ ನಾಗರಬೆಟ್ಟ, ಚೇತನ್ ಕಲ್ಲುಂಡಿ,ಸಿ.ಜಿ.ಬಿದರಕುoದಿ, ಐ.ಬಿ. ಹೂಗಾರ, ಶಶಿಧರ ಒತಗೇರಿ,ನಾಗರಾಜ ಪಾಟೀಲ, ವಿಶ್ವನಾಥ ಬಿರಾದಾರ, ಹಣಮಗೌಡ ಬಿರಾದಾರ, ಮಂಜುಳಾ ಪಾಟೀಲ, ತಾಲೂಕಿನ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ತಾಲೂಕಿನ ಎಲ್ಲ ವೃಂದ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ತಾಲೂಕಿನ ಸಮಸ್ತ ನೌಕರರ ಬಾಂಧವರು ಹಾಜರಿದ್ದರು.

Latest News

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

​ಮುದ್ದೇಬಿಹಾಳ : ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಭಾರತದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಆಗಿದ್ದರೆ,ಡಾ.ಅಂಬೇಡ್ಕರ್ ಅವರು ಈ ದೇಶದ ಆತ್ಮವಾಗಿದ್ದಾರೆ

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ :                 ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ

ಬಳಬಟ್ಟಿ ಗ್ರಾಮದೇವತೆ ಜಾತ್ರೆ :                                            ಕುಸ್ತಿ ಪಂದ್ಯದಲ್ಲಿ ರಿಯಾಜ ಮುಳಕೋಟಗೆ ಬಹುಮಾನ

ಬಳಬಟ್ಟಿ ಗ್ರಾಮದೇವತೆ ಜಾತ್ರೆ : ಕುಸ್ತಿ ಪಂದ್ಯದಲ್ಲಿ ರಿಯಾಜ ಮುಳಕೋಟಗೆ ಬಹುಮಾನ

ಮುದ್ದೇಬಿಹಾಳ : ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ಶ್ರೀ ನಾಗಲಿಂಗೇಶ್ವರ, ಮಾರುತೇಶ್ವರ ಹಾಗೂಗ್ರಾಮ ದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ (ಪುಣೆ ತಾಲೀಮು) ರಿಯಾಜ ಮುಳಕೋಟೆ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಪಂದ್ಯಾವಳಿಯಲ್ಲಿ ಒಟ್ಟು 30 ಜೋಡಿ ಕುಸ್ತಿ ಪಟುಗಳು ರಾಜ್ಯದ ವಿವಿಧ ಕಡೆಯಿಂದ ಪಾಲ್ಗೊಂಡಿದ್ದರು. ಬಳಬಟ್ಟಿ ಗ್ರಾಮದ ಮಾಜಿ ಕುಸ್ತಿಪಟು ಕರಿಯಪ್ಪ ಆಸಂಗಿ ಹಾಗೂ ಯಮನಪ್ಪ ಮಾಳಗೊಂಡ ಇವರ ನೇತೃತ್ವದಲ್ಲಿ ಭರ್ಜರಿಯಾಗಿ ಕುಸ್ತಿ ಪಂದ್ಯಗಳು ನಡೆದವು. ಒನ್ ನಂಬರ ಕುಸ್ತಿ

ಮುದ್ದೇಬಿಹಾಳ : ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಅಶೋಕ ಮಣಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಅಶೋಕ ಮಣಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಗಿದೆ. ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಇರುವ ಸಂಘದ ಕಾರ್ಯಾಲಯದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಸಂಘದ ತಾಲೂಕ ಘಟಕದ ನೂತನ ಅಧ್ಯಕ್ಷರಾಗಿ ಬಸರಕೋಡದ ಶ್ರೀ ಪವಾಡ ಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು,ಹಿರಿಯ ಸಾಹಿತಿ ಅಶೋಕ ಪಿ.ಮಣಿ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬಾಪುಗೌಡ ಪಿ.ಪಾಟೀಲ್,ಉಪಾಧ್ಯಕ್ಷರಾಗಿ ಸದಾಶಿವ ಮಾಗಿ,ಪ್ರಧಾನ ಕಾರ್ಯದರ್ಶಿಗಳಾಗಿ ಎಸ.ಎ.ಬೇವಿನಗಿಡದ,ಖಜಾಂಚಿಯಾಗಿ ಬಿ.ಎಚ್.ಬಳಬಟ್ಟಿ,ಜಂಟಿ ಕಾರ್ಯದರ್ಶಿ ಡಿ.ಬಿ.ಓಲೇಕಾರ,ಯು.ಕೆ.ಬಾಗವಾನ,ಸಂಘಟನಾ ಕಾರ್ಯದರ್ಶಿಗಳಾಗಿ