ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಅ. 18ರಂದು ನದಾಫ್/ಪಿಂಜಾರ ಸಂಘದ ಪ್ರತಿಭಾ ಪುರಸ್ಕಾರ, ಪದಗ್ರಹಣ ಸಮಾರಂಭ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಅ. 18ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ಹುಡ್ಕೋ ಕಾಲೋನಿಯ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕುಂಟೋಜಿ ಸುಕ್ಷೇತ್ರದ ಭಾವೈಕ್ಯತೆ ಹಿರೇಮಠದ ಪೂಜ್ಯ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಜಾಮಿಯಾತ್ ಉಲಮಾ ಎ ಹಿಂದ್‌ನ ತಾಲೂಕು ಘಟಕದ ಕಾರ್ಯದರ್ಶಿ ಮೌಲಾನಾ ಮಹಮ್ಮದ ರಫೀಕ್ ನದಾಫ್ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಸಿ.ಎಸ್. ನಾಡಗೌಡ (ಅಪ್ಪಾಜಿ) ಉದ್ಘಾಟಿಸಲಿದ್ದಾರೆ.

ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ತಾಲೂಕು ಘಟಕದ ಅಧ್ಯಕ್ಷ ಹಾಗೂ ಅಮಾನತ್ ಅಲ್ಪಸಂಖ್ಯಾತರ ಪತ್ತಿನ ಸೌಹಾರ್ದ ನನಿಯಮಿತ ಅಧ್ಯಕ್ಷ ಮಲಿಕಸಾಬ ದಾ. ನದಾಫ್ (ಅಮರಗೋಳ) ಅಧ್ಯಕ್ಷತೆ ವಹಿಸಲಿದ್ದಾರೆ.

ದೇವರಹಿಪ್ಪರಗಿ ಶಾಸಕ ರಾಜೂಗೌಡ ಪಾಟೀಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎ. ಕಟಗೂರ, ವಿಜಯಪುರ ಜಿಲ್ಲಾ ನದಾಫ್/ಪಿಂಜಾರ ಸಂಘದ ಅಧ್ಯಕ್ಷ ಎಂ.ಕೆ. ನದಾಫ್, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಲ್ಲಾಭಕ್ಷ ಎನ್. ದೇಸಾಯಿ, ಉದ್ಯಮಿ ಮಹೆಬೂಬ ಮುಲ್ಲಾ, ಹಿರಿಯ ನ್ಯಾಯವಾದಿ ಎಂ.ಎ. ಮುದ್ದೇಬಿಹಾಳ, ಬಿ.ಎಸ್. ಸೆಂಟ್ರಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ಮುದ್ದೇಬಿಹಾಳ ಹಾಗೂ ಕರ್ನಾಟಕ ಮುಸ್ಲಿಂ ಸಂಘದ ಅಧ್ಯಕ್ಷ ಲಾಳೇಸಾ ಕೆ. ನದಾಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸಮಾಜದ ಗಣ್ಯರನ್ನು ಸನ್ಮಾನಿಸಲಾಗುವುದು. ಸಂಘದ ನೂತನ ಉಪಾಧ್ಯಕ್ಷ ಹಸನಸಾ ಎಸ್. ನದಾಫ್ ಸೇರಿದಂತೆ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಪದಗ್ರಹಣ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Latest News

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ:         ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ: ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮುದ್ದೇಬಿಹಾಳ : ತೆಲಂಗಾಣಕ್ಕೆ ಅಧಿಕೃತ ಆದೇಶವಿಲ್ಲದೆ ಸಿಎಂ ಮೌಖಿಕ ಸೂಚನೆ ಮೇರೆಗೆ ಕೃಷ್ಣಾ ನದಿ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ:                           ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ :                    ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ : ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವು ಮೂಡಿಸಲು ಯುವ ಸಂಸತ್ ಮೂಲಕ

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

ಮುದ್ದೇಬಿಹಾಳ : ಕೆರೆಗಳನ್ನು ತುಂಬಿಸಲು,ಕುಡಿಯುವುದಕ್ಕೆAದು ನಾಲ್ಕು ಟಿಎಂಸಿ ನೀರು ಹರಿಸಬೇಕು ಎಂದು ಕಾನೂನು ಬದ್ಧವಾದ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ:                                          ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ: ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ವಿಜಯಪುರ : ಗ್ರಾಮೀಣ ಭಾಗದ ಜನರು, ರೈತರು ಹಾಗೂ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ನೈಜ ಭಾರತದ ಧ್ವನಿಯಾಗಿ ಗ್ರಾಮೀಣ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ನಗರದ ಗಾಂಧಿ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಪತ್ರಕರ್ತರ ಉಚಿತ

ಗಾಂಧೀಜಿಯವರ ಸಂದೇಶಗಳು ಗಾಳಿಪಾಲು-ಆರ್.ಜಿ.ಹಳ್ಳಿ ನಾಗರಾಜ

ಗಾಂಧೀಜಿಯವರ ಸಂದೇಶಗಳು ಗಾಳಿಪಾಲು-ಆರ್.ಜಿ.ಹಳ್ಳಿ ನಾಗರಾಜ

ಮುದ್ದೇಬಿಹಾಳ : ಒಂದೆಡೆ ಮಸೀದಿ,ಇನ್ನೊಂದೆಡೆ ದೇವಸ್ಥಾನ.ಇಂತಹ ಭಾವೈಕ್ಯತೆಯ ನೆಲದಲ್ಲಿ ತಂದೆ-ತಾಯಿಯ ಸ್ಮರಣೆಯೊಂದಿಗೆ ಗಾಂಧೀಜಿ-ಶಾಸ್ತಿçಜಿ ಜಯಂತಿ ಆಚರಿಸುವ ಅಬ್ದುಲರಹೆಮಾನ್ ಬಿದರಕುಂದಿ ಅವರು ನಿಜವಾದ ಸೌಹಾರ್ದತೆಯ ಸಂಕೇತವಾಗಿದ್ದಾರೆ ಎಂದು ಬೆಂಗಳೂರಿನ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಹೇಳಿದರು. ತಾಲ್ಲೂಕಿನ ಬಿದರಕುಂದಿಯ ಸಂಗಮೇಶ್ವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಿ.ಎನ್.ಎಲ್.ನಾಯ್ಕೋಡಿ ಶಿಕ್ಷಕರ ಪ್ರತಿಷ್ಠಾನದಿಂದ ಆಯೋಜಿಸಿದ್ದ ಗಾಂಧೀಜಿ-ಶಾಸ್ತಿçಜಿ ಜಯಂತಿ ,ದಿ.ಎನ್.ಎಲ್.ನಾಯ್ಕೋಡಿ ಅವರ 37ನೇ ಪುಣ್ಯಸ್ಮರಣೋತ್ಸವ ಹಾಗೂ ಅಪ್ಪನ ಸ್ಮರಣೆಯಲ್ಲಿ ಅವ್ವನ ನೆನಹು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯವರoತೆ ಶಾಸ್ತಿಜಿಯವರು