ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ : ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ರಾಷ್ಟ್ರೀಯ ಹೆದ್ದಾರಿ 50-ಸ್ತಬ್ಧ : ರೈತರು ಯಾರ ಗುಲಾಮರೂ ಅಲ್ಲ- ಶಾಂತಗೌಡ ಪಾಟೀಲ್

ವಿಜಯಪುರ : ಕಬ್ಬಿನ ಎಂ.ಎಸ್.ಪಿ ದರ ಹೆಚ್ಚಳ,ಕೇಂದ್ರ ಸರ್ಕಾರ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೇನಾಲ್‌ನ್ನು ಖರೀದಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ಜಿಲ್ಲೆಯ ಯಲಗೂರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 8 ಗಂಟೆಯಿAದಲೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಕಿಲೋಮೀಟರ್‌ದವರೆಗೆ ಅಂತರಾಜ್ಯಗಳಿಗೆ ಸಂಚರಿಸುವ ವಾಹನಗಳು ರಸ್ತೆಯ ಪಕ್ಕದಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತು.ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ,ಡಿವೈಎಸ್ಪಿ ಚಂದ್ರಕಾoತ ನಂದರೆಡ್ಡಿ ಅವರು ನಿಡಗುಂದಿಯಿoದ ಬಾಗಲಕೋಟೆಗೆ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಿದ್ದರು.ಅದರಂತೆ ಸಾರಿಗೆ ಬಸ್‌ಗಳು,ತುರ್ತು ಸಂದರ್ಭದಲ್ಲಿ ಸಂಚರಿಸುವ ಅಂಬ್ಯುಲೆನ್ಸ್,ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಸೇವೆಗಳಿಗೆ ಯಾವುದೇ ಸಮಸ್ಯೆ ಆಗದಂತೆ ಪೊಲೀಸರು ನೋಡಿಕೊಂಡರು.

ಟ್ರಾö್ಯಕ್ಟರ್ ಟ್ರಾಲಿಯನ್ನೇ ವೇದಿಕೆ ಮಾಡಿಕೊಂಡ ರೈತರು: ಕಬ್ಬು ಬೆಳೆಗಾರರ ಪ್ರತಿಭಟನೆಗೆ ರಾಷ್ಟ್ರೀಯ ಹೆದ್ದಾರಿ ಮಧ್ಯೆದಲ್ಲಿಯೇ ಟೆಂಟ್ ಹಾಕಿ ರೈತರಿಗೆ ಕೂಡಲು ನೆರಳಿನ ವ್ಯವಸ್ಥೆ ಮಾಡಲಾಗಿತ್ತು.ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ,ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ದೆಹಲಿಗೆ ರೈತ ಮುಖಂಡರನ್ನು ಕರೆಯಿಸಿ ಅವಮಾನಿಸಿದ್ದಾರೆ.ಯಾವುದೇ ತೀರ್ಮಾನ ಕೈಗೊಳ್ಳದೇ ಮತ್ತೆ ಸಮೀತಿ ರಚನೆ ಮಾಡುವ ನಾಟಕದ ಮಾತುಗಳನ್ನು ಹೇಳುತ್ತಿರುವುದು ಬೇಸರದ ವಿಷಯ.ರೈತರ ಕಷ್ಟದ ಬಗ್ಗೆ ಎಲ್ಲ ಪಕ್ಷಗಳ ಮುಖಂಡರು ಹಗುರವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದು ಹೇಳಿದರು.

ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಮಾತನಾಡುವ ಲಕ್ಷö್ಮಣ ಸವದಿ ಅವರು ತೂಕದಲ್ಲಿ ಹೇಗೆ ಮೋಸ ಮಾಡುತ್ತಿರುತ್ತಾರೆ ಎನ್ನುವುದನ್ನು ಹೇಳಿದ್ದರು.’ಶಾಸಕರು ಶಾಸಕರೇ, ಮಿನಿಸ್ಟ್ರು ಮಿನಿಸ್ಟ್ರೇ, ತೂಕದಲ್ಲಿ ನಾ ಹೆಂಗೆ ಹೊಡಿತೀನಿ, ನೀ ಹೆಂಗೆ ಹೊಡಿತೀನಿ ಅಂತ. ಅದು ಹೊಡೆದದ್ದು ಗೊತ್ತಾಗಲ್ಲ ಅಂತ. ನಮಗೆ ಹೆಂಗೆ ರಿಮೋಟ್ ಒತ್ತಿ ಟ್ವಿಕ್ ಅಂತ ತೂಕ ಕಮ್ಮಿ ಆಗ್ಬಿಡ್ತದ ಎಂದು ಹೇಳಿದ್ದನ್ನು ಶಾಂತಗೌಡ ನೆನಪಿಸಿದರು.

ಹಸಿರು ಟವಲ್ ಇತ್ತಪ್ಪ ರೈತರದ್ದು ಅಂದ್ರೆ ಅಧಿಕಾರಿಗಳು ಸೆಲ್ಯೂಟ್ ಹೊಡಿಬೇಕು, ಅಂತ ಆಡಳಿತ ಈ ದೇಶದಲ್ಲಿ ಬರಬೇಕು.ಈ ದೇಶದ ನಿಜವಾದ ಮಾಲೀಕರು ರೈತರು.ಶೇ. 80ರಷ್ಟು ರೈತರು ಇದ್ದೀವಿ. ಇವತ್ತು ತಹಶೀಲ್ದಾರ್ ಆಫೀಸ್‌ಗೆ ಹೋದ್ರೆ ಪ್ಯೂನ್ ನಿಂತಿರ್ತಾನೆ, ನೀವು ಹೋಗಿರ್ತೀರಿ ಸಾರ್ ಅದರ ಅಂದ್ರೆ ಏಯ್ ಹೊರಗನಡಿ ಹೊರಗನಡಿ ಅಂತಾನೆ. ಸಾಹೇಬ್ರು ಬಿಜಿಯಿದ್ದಾರೆ ಹೊರಗೆ ನಿಲ್ಲು ಅಂತಾನೆ, ನೀವು ಹೋಗಿ ಕೈ ಕಟ್ಕೊಂಡು ನಿಂತಿರ್ತೀರಿ. ಯಾಕೆ ಕೈ ಕಟ್ಕೊಂಡು ನಿಂತಿರ್ತೀರಿ ನೀವು ? ಒಬ್ಬ ರೈತ ತಹಶೀಲ್ದಾರ್ ಆಫೀಸ್ ಮುಂದೆ ನಿಂತರೆ, ಹೋದ್ರೆ ಕುರ್ಚಿಯಲ್ಲಿ ಕೂಡಿಸಿ ಒಂದು ಗ್ಲಾಸ್ ನೀರು ಕೊಟ್ಟು ಮಾತನಾಡಿಸುವಂತಹ ಆಡಳಿತ ಈ ದೇಶದಲ್ಲಿ ಬರಬೇಕು ಅಂದ್ರೆ ರೈತರು ಒಗ್ಗಟ್ಟಾಗಬೇಕು.ಇಲ್ಲದಿದ್ದರೆ ನಾವು ಗುಲಾಮರಾಗುತ್ತೇವೆ ಎಂದರು.

ತಾಳಿಕೋಟಿ ತಾಲ್ಲೂಕು ಪಡೇಕನೂರದ ರೈತ ಮುಖಂಡ ಸೋಮನಗೌಡ ಪಾಟೀಲ ಕೋಳೂರ ಮಾತನಾಡಿ, ಪ್ರಹ್ಲಾದ್ ಜೋಷಿ ಅವರು ಈಗಾಗಲೇ ಇರುವ ವರದಿಗಳ ಅನುಷ್ಠಾನದತ್ತ ಗಮನ ಹರಿಸಬೇಕೆ ಹೊರತು ಮತ್ತೆ ತಜ್ಞರನ್ನು ಸೇರಿಸಿ ಸಮೀತಿ ರಚಿಸುವೆ ಎಂದು ಹೇಳುವುದು ಹಾಸ್ಯಾಸ್ಪದ.ಕಬ್ಬು ಬೆಳಗಾರರು ಈ ಭಾಗದಲ್ಲಿ ಸಂಘಟಿತರಾಗಿದ್ದಾರೆ.ಕಬ್ಬಿಗೆ ನ್ಯಾಯಯುತ ಬೆಲೆ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು. ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ,ನಿಡಗುಂದಿ ತಾಲ್ಲೂಕು ಅಧ್ಯಕ್ಷ ಸೀತಪ್ಪ ಗಣಿ, ತಾಳಿಕೋಟಿ ಮುಖಂಡ ದೇವರಾಜ ಗುಂಡಕನಾಳ,ರೈತ ಸಂಘದ ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಮೊದಲಾದವರು ರೈತರನ್ನುದ್ದೇಶಿಸಿ ಮಾತನಾಡಿದರು.

ಪ್ಯಾರಿ ಕಾರ್ಖಾನೆಯ ವಿರುದ್ಧ ಆಕ್ರೋಶ : ಪ್ಯಾರಿ ಕಾರ್ಖಾನೆಯವರು ರೈತರ ಕಬ್ಬನ್ನು ಎರಡು ಮೂರು ಟನ್ ಹೊಡಿಲಿಲ್ಲ ಅಂದ್ರೆ ಉಂಡಿದ್ದು ಆತನಿಗೆ ಕರಗೋದೇ ಇಲ್ಲ. ಬಹಳ ಜನ ರೈತರು ಕಾಟ ಮಾಡಿ ಹೋದ್ರೆ ಆ ಗಾಡಿ ಹೊರಗೆ ನಿಲ್ಲಿಸುತ್ತಾನೆ. ಕರ್ನಾಟಕ ರಾಜ್ಯ ರೈತ ಸಂಘ ಈ ಪ್ಯಾರಿ ಫ್ಯಾಕ್ಟರಿ ಮುಂದೆ ಕೂಡ ಒಂದು ವೇ ಬ್ರಿಡ್ಜ್ ಹಾಕ್ತದ, ಅದಕ್ಕೆ ದಯವಿಟ್ಟು ಈ ಭಾಗದ ರೈತರು ಎಲ್ಲಿದ್ದೀರಲ್ಲ ಆ ಟೋಲ್‌ನ ಬಾಜು ದಯವಿಟ್ಟು ಯಾರು ಜನ ರೈತರಿದ್ದೀರಲ್ಲ ನಿಮ್ಮ ಕೈ ಮುಗಿದು ಕೇಳ್ಕೊತಾ ಇದ್ದೀನಿ. ಸ್ವಲ್ಪ ಜಾಗ ಕೊಡಿ. ನಮಗೆ. 20 ಫುಟ್ ಅಗಲ ಒಂದು 30 ಫುಟ್ ಉದ್ದ ಒಂದು ಜಾಗ ಕೊಡಿ. ಒಂದು ವಾರದಲ್ಲಿ ಅಲ್ಲಿ ವೇ ಬ್ರಿಜ್ ಹಾಕುವ ಕೆಲಸ ಮಾಡುತ್ತೇವೆ ಎಂದು ಶಾಂತಗೌಡ ಪಾಟೀಲ ಹೇಳಿದರು.

Latest News

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ:                           ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ :                    ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ : ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವು ಮೂಡಿಸಲು ಯುವ ಸಂಸತ್ ಮೂಲಕ

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

‘ಕುತಂತ್ರಿ ನೀವು ಎನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದೇನೆ,ನನ್ನ ಬಗ್ಗೆ ನೀವು ಸಾಕ್ಷಿ ಕೊಡಿ’

ಮುದ್ದೇಬಿಹಾಳ : ಕೆರೆಗಳನ್ನು ತುಂಬಿಸಲು,ಕುಡಿಯುವುದಕ್ಕೆAದು ನಾಲ್ಕು ಟಿಎಂಸಿ ನೀರು ಹರಿಸಬೇಕು ಎಂದು ಕಾನೂನು ಬದ್ಧವಾದ

ವಣಕಿಹಾಳ ಗ್ರಾಮದಲ್ಲಿ ಘಟನೆ :                                                   ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ವಣಕಿಹಾಳ ಗ್ರಾಮದಲ್ಲಿ ಘಟನೆ : ವಿದ್ಯುತ್ ಶಾಟ್ ಸರ್ಕಿಟ್: 12 ಎಕರೆಗೆ ಕಬ್ಬು ಬೆಂಕಿಗೆ ಆಹುತಿ

ಮುದ್ದೇಬಿಹಾಳ : ವಿದ್ಯುತ್ ಶಾಟ್ ಸರ್ಕಿಟ್‌ನಿಂದಾಗಿ ಹನ್ನೆರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ

ಗಾಂಧೀಜಿಯವರ ಸಂದೇಶಗಳು ಗಾಳಿಪಾಲು-ಆರ್.ಜಿ.ಹಳ್ಳಿ ನಾಗರಾಜ

ಗಾಂಧೀಜಿಯವರ ಸಂದೇಶಗಳು ಗಾಳಿಪಾಲು-ಆರ್.ಜಿ.ಹಳ್ಳಿ ನಾಗರಾಜ

ಮುದ್ದೇಬಿಹಾಳ : ಒಂದೆಡೆ ಮಸೀದಿ,ಇನ್ನೊಂದೆಡೆ ದೇವಸ್ಥಾನ.ಇಂತಹ ಭಾವೈಕ್ಯತೆಯ ನೆಲದಲ್ಲಿ ತಂದೆ-ತಾಯಿಯ ಸ್ಮರಣೆಯೊಂದಿಗೆ ಗಾಂಧೀಜಿ-ಶಾಸ್ತಿçಜಿ ಜಯಂತಿ ಆಚರಿಸುವ ಅಬ್ದುಲರಹೆಮಾನ್ ಬಿದರಕುಂದಿ ಅವರು ನಿಜವಾದ ಸೌಹಾರ್ದತೆಯ ಸಂಕೇತವಾಗಿದ್ದಾರೆ ಎಂದು ಬೆಂಗಳೂರಿನ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಹೇಳಿದರು. ತಾಲ್ಲೂಕಿನ ಬಿದರಕುಂದಿಯ ಸಂಗಮೇಶ್ವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಿ.ಎನ್.ಎಲ್.ನಾಯ್ಕೋಡಿ ಶಿಕ್ಷಕರ ಪ್ರತಿಷ್ಠಾನದಿಂದ ಆಯೋಜಿಸಿದ್ದ ಗಾಂಧೀಜಿ-ಶಾಸ್ತಿçಜಿ ಜಯಂತಿ ,ದಿ.ಎನ್.ಎಲ್.ನಾಯ್ಕೋಡಿ ಅವರ 37ನೇ ಪುಣ್ಯಸ್ಮರಣೋತ್ಸವ ಹಾಗೂ ಅಪ್ಪನ ಸ್ಮರಣೆಯಲ್ಲಿ ಅವ್ವನ ನೆನಹು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯವರoತೆ ಶಾಸ್ತಿಜಿಯವರು

ಪ್ರಧಾನಿ ಮೋದಿ ಹೆಸರು ಕೆಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಇಂಚಗೇರಿ ಮಠದ ಶಶಿಕಾಂತ ಗುರೂಜಿ ವಾಗ್ದಾಳಿ

ಪ್ರಧಾನಿ ಮೋದಿ ಹೆಸರು ಕೆಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಇಂಚಗೇರಿ ಮಠದ ಶಶಿಕಾಂತ ಗುರೂಜಿ ವಾಗ್ದಾಳಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು ಕೆಡಿಸಿದ್ದಾರೆ ಎಂದು ಇಂಚಗೇರಿ ಮಠದ ಸ್ವಾಮೀಜಿಯೂ ಆದ ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ವಾಗ್ದಾಳಿ ನಡೆಸಿದರು. ಇಲ್ಲಿನ ರಾಣಿ ಚನ್ನಮ್ಮ ಸರ್ಕಲ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಆಯೋಜಿಸಿರುವ ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಇಲ್ಲಿ ಸೇರಿದ ಹೋರಾಟಗಾರರಲ್ಲಿ ಬಿಜೆಪಿಯ ಕಾರ್ಯಕರ್ತರೇ ಹೆಚ್ಚಾಗಿದ್ದಾರೆ