ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್‌ನ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮ ಮಾ.9 ರಂದು ಸಾಯಂಕಾಲ 5ಗಂಟೆಗೆ ಪಟ್ಟಣದ ಮಹಾಂತೇಶ ನಗರದ ಗಣೇಶ ಗುಡಿ ಹತ್ತಿರದಲ್ಲಿರುವ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನಿಧ್ಯವನ್ನು ಶಾಲೆಯ ಗೌರವಾಧ್ಯಕ್ಷ ವೇ.ಸಂಗಯ್ಯ ಹಾಲಗಂಗಾಧರಮಠ ವಹಿಸುವರು.ವೈದ್ಯರಾದ ಡಾ.ಚಂದ್ರಶೇಖರ ಶಿವಯೋಗಿಮಠ ಅಧ್ಯಕ್ಷತೆ ವಹಿಸುವರು.ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ಧಮ್ಮೂರಮಠ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಹಾಗೂ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಹುಲ್ಲೂರ ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಅಧ್ಯಕ್ಷ ಮಂಜುನಾಥ ಕೊಪ್ಪ,ಅತಿಥಿಗಳಾಗಿ ಶಾಲೆಯ ಮಾರ್ಗದರ್ಶಕರಾದ ಶಿವಯ್ಯ ಹಿರೇಮಠ,ಶಿವಕುಮಾರ ಬಿಜಾಪೂರ,ವರದಿಗಾರ ಶಂಕರ ಈ.ಹೆಬ್ಬಾಳ,ಪಾಲಕರ ಪ್ರತಿನಿಧಿಗಳಾದ ನಾಗಭೂಷಣ ಪೊಲೇಶಿ, ಸಂತೋಷ ಪಾಟೀಲ,ಮಹಾಂತೇಶ ಮಠಪತಿ ಆಗಮಿಸುವರು ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ವೀರೇಶ ಗುರುಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







