
ಮುದ್ದೇಬಿಹಾಳ : ಪಟ್ಟಣದ ಹೆಸ್ಕಾಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಟಿಸಿ ದುರಸ್ತಿ ಕೇಂದ್ರದ ಉದ್ಘಾಟನಾ¸ ಸಮಾರಂಭದಲ್ಲಿ ಶಾಸಕ ಸಿ.ಎಸ್.ನಾಡಗೌಡ ಕ್ಷೌರಿಕ ಜನಾಂಗದವರ ವೃತ್ತಿಯ ಕುರಿತು ಅಪಮಾನಕರ ಪದ ಬಳಸಿದ್ದು ಇದನ್ನು ಖಂಡಿಸುವುದಾಗಿ ತಾಲೂಕ ಸವಿತಾ ಸಮಾಜದ ಅಧ್ಯಕ್ಷ ರವಿ ತೇಲಂಗಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಾಗರಿಕ ಸಮಾಜದ ನಿರ್ಮಾಣದಲ್ಲಿ ಕುಲವೃತ್ತಿದಾರರ ಕೊಡುಗೆ ಅಪಾರವಾಗಿದ್ದು ಇದನ್ನು ಗೌರವಿಸಬೇಕಾಗಿದ್ದು ಪ್ರತಿಯೊಬ್ಬರ ಕರ್ತವ್ಯ. ಆದರೆ ಶಾಸಕ ನಾಡಗೌಡರು ವಿದ್ಯುತ್ ಇಲ್ಲದೇ ಏನು ನಡೆಯವುದಿಲ್ಲವೆಂಬ ಮಾತಿನ ಭರದಲ್ಲಿ ” ಹಜಾಮತಿ ‘ ಅಂಗಡಿಗಳು ಸಹ ನಡೆಯುವುದಿಲ್ಲವೆಂದು ಕ್ಷೌರಿಕ ವೃತ್ತಿಗೆ ಅಪಮಾನ ಮಾಡಿದ್ದಾರೆ. ಶಾಸಕರು ಕಟಿಂಗ್ ಅಂಗಡಿ ಅಥವಾ ಹೇರ ಸಲೂನ ಅಂತ ಪದಬಳಕೆ ಮಾಡಬಹುದಿತ್ತು. ಅದನ್ನು ಹಜಾಮತಿ ಅಂಗಡಿ ಎನ್ನುವ ಮೂಲಕ ಒಂದು ಸಮುದಾಯದ ವೃತ್ತಿಗೆ ಅಪಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ಸರಕಾರ ಗೆಜೆಟ್‌ನಲ್ಲಿ ಹಜಾಮ ಪದ ತಗೆದು ಹಾಕಿದ್ದು ಅವಮಾನಕರವಾಗಿ ಕ್ಷೌರಿಕ ವೃತ್ತಿಗೆ ಮಾತನಾಡಬಾರದೆಂದು ಹೇಳಿದೆ. ತುಂಬಿದ ಸಭೆಯಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ವೃತ್ತಿಗೆ ಹಿಯ್ಯಾಳಿಸುವ ಪದಬಳಕೆ ಮಾಡಿದ್ದು ಕೂಡಲೇ ಅವರು ಸಮಾಜದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.