ಅಸ್ಕಿ ಫೌಂಡೇಶನ್ ಜನಸೇವೆ ಶ್ಲಾಘನೀಯ: ಪವನಸುತನ ನಾಡಲ್ಲಿ ಅಸ್ಕಿ ಫೌಂಡೇಶನ್ ದಿನದರ್ಶಿಕೆ ಬಿಡುಗಡೆ

ಅಸ್ಕಿ ಫೌಂಡೇಶನ್ ಜನಸೇವೆ ಶ್ಲಾಘನೀಯ: ಪವನಸುತನ ನಾಡಲ್ಲಿ ಅಸ್ಕಿ ಫೌಂಡೇಶನ್ ದಿನದರ್ಶಿಕೆ ಬಿಡುಗಡೆ

ಆಲಮಟ್ಟಿ : ಇಲ್ಲಿಗೆ ಸಮೀಪದ ಯಲಗೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ, ಪ್ರಥಮ ದರ್ಜೆ ಗುತ್ತಿಗೆದಾರರಾದ ಸಿ.ಬಿ.ಅಸ್ಕಿ ಅವರ ನೇತೃತ್ವದಲ್ಲಿ ಹೊರ ತಂದಿರುವ 2026ನೇ ಸಾಲಿನ ಅಸ್ಕಿ ಫೌಂಡೇಶನ್‌ದ ನೂತನ ವರ್ಷದ ಕ್ಯಾಲೆಂಡರನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುದ್ದೇಬಿಹಾಳ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಸದಸ್ಯ ಬುಡ್ಡೇಸಾಬ ಚಪ್ಪರಬಂದ, ಅಸ್ಕಿ ಫೌಂಡೇಶನ್ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ.ಫೌಂಡೇಶನ್ ಸಂಸ್ಥಾಪಕ ಸಿ.ಬಿ.ಅಸ್ಕಿ ಅವರು ಮಾನವೀಯ,ಅಂತಃಕರಣ ಹೃದಯವುಳ್ಳವರಾಗಿದ್ದಾರೆ.ಫೌಂಡೇಶನ್ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದರು.

ರೈತ ಸಂಘದ ಮುಖಂಡ ಬಸವರಾಜ ಬಾಗೇವಾಡಿ ಮಾತನಾಡಿ, ಅಸ್ಕಿ ಫೌಂಡೇಶನ್ ಜನಸೇವೆ ಮಾದರಿಯಾಗಿದೆ.ಉಳ್ಳವರು ಹಲವಾರು ಜನ ಇದ್ದರೂ ಕೊಡುವವರ ಕೈ ಮಾತ್ರ ವಿರಳವಾಗಿರುತ್ತವೆ.ಅಂತಹ ವಿರಳ ಕೈಗಳಲ್ಲಿ ಅಸ್ಕಿ ಫೌಂಡೇಶನ್‌ವರು ಸೇರಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾದದ್ದು.ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮುಖಂಡರಾದ ಅಸ್ಕಿ ಅವರಿಗೆ ಜನಸೇವೆ ಮಾಡುವ ಅವಕಾಶ ಒದಗಿ ಬರಲಿ ಎಂದು ಹೇಳಿದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಸಾಮಾಜಿಕ ಕಾರ್ಯಗಳಲ್ಲಿ ನಮ್ಮ ಫೌಂಡೇಶನ್ ಸದಾ ಮುಂದೆ ಇರಲಿದೆ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರರು, ಕಾಂಗ್ರೆಸ್ ಹಿರಿಯ ಮುಖಂಡ ಶ್ಯಾಮ ಪಾತ್ರದ, ಟಿಎಪಿಸಿಎಂಎಸ್ ನಿರ್ದೇಶಕರಾದ ಮುತ್ತಣ್ಣ ಮುತ್ತಣ್ಣವರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎಚ್.ಬಿ.ಸಂಗಮ, ವಾಯ್.ವಾಯ್.ಬಿರಾದಾರ,ಹಣಮಂತ ಪೂಜಾರಿ (ಕಾಶಿನಕುಂಟಿ),ಬಿ.ಎಸ್.ಪಾಟೀಲ, ಬಸವರಾಜ ದಂಡಿನ, ಶಿವು ಗದಿಗೆಪ್ಪಗೌಡರ, ಯುವ ಕಾಂಗ್ರೆಸ್ ಮುಖಂಡ ಆಸಿಫ್ ಬಿಲಕೇರಿ, ಅಸ್ಕಿ ಫೌಂಡೇಶನ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಶ್ರೀಧರ ಬಿರಾದಾರ, ಸಚಿನ ನಾಡಗೌಡ, ರಾಮನಗೌಡ ಹೊಸಮನಿ, ಮಲ್ಲು ಢವಳಗಿ ಸೇರಿದಂತೆ ಯಲಗೂರ, ಕಾಶಿನಕುಂಟಿ,ಬೂದಿಹಾಳ, ಗ್ರಾಮದ ಗಣ್ಯರು ಹಿರಿಯ ಮುಖಂಡರು, ಯುವಕರು ಉಪಸ್ತಿತರಿದ್ದರು.

Latest News

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ:                                        ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ: ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಮುದ್ದೇಬಿಹಾಳ : ಸುಮಾರು 30-40 ವರ್ಷದಿಂದ ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ವಾಸವಿರುವ ನಿವಾಸಿಗಳಿಗೆ ಸರ್ಕಾರದಿಂದ

ನಾಗರಬೆಟ್ಟ ಏತ ನೀರಾವರಿ ಯೋಜನೆ:                                ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ನಾಗರಬೆಟ್ಟ ಏತ ನೀರಾವರಿ ಯೋಜನೆ: ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 2018ರಲ್ಲಿಯೇ ಟೆಂಡರ್ ಆಗಿದ್ದು ಕಳೆದ ಎಂಟು

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಮುದ್ದೇಬಿಹಾಳ : ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ:                              ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಆಗ್ರಹಿಸಿದರು. ಪಟ್ಟಣದ ಮುದ್ದೇಬಿಹಾಳ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ(ಪಿಕಾರ್ಡ್)ದ ಬ್ಯಾಂಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 62ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕಳೆದ 3 ವರ್ಷಗಳಿಂದ ನಮ್ಮ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಸತತ ಮೂರುಬಾರಿ ಜಿಲ್ಲೆಗೆ ಪ್ರಥಮ

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ:                     ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ: ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಮುದ್ದೇಬಿಹಾಳ : ಸರ್ಕಾರ ಕಾಲುವೆಗಳ ದುರಸ್ತಿಗೆ ಹಣ ಕೊಡುತ್ತಿಲ್ಲ.ನೀವೇ ಪಟ್ಟಿ ಹಾಕಿಕೊಂಡು ಕಾಲುವೆ ರಿಪೇರಿ ಮಾಡಿಕೊಳ್ಳಬೇಕು ಎಂದು ಕೆಬಿಜೆಎನ್‌ಎಲ್ ಎಎಲ್‌ಬಿಸಿ ಉಪವಿಭಾಗ ನಂ.2ದ ಅಧಿಕಾರಿ ನಮ್ಮ ರೈತರಿಗೆ ಪುಕ್ಕಟೆ ಸಲಹೆ ಕೊಡುತ್ತಿದ್ದಾರೆ ಎಂದು ನಾಲತವಾಡದ ಯುವ ರೈತ ಮುಖಂಡ ಸಂಗಮೇಶ ಮೇಟಿ ಆರೋಪಿಸಿದರು. ತಾಲ್ಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯಲ್ಲಿ ಹಾಯ್ದು ಹೋಗಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಲ್ಯಾಟರಲ್ ನಂ.10ರ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ಹುಡ್ಕೋದಲ್ಲಿರುವ ಸಂಬAಧಿಸಿದ