ಕನ್ನಡ ಭಾಷಾಭಿಮಾನ ಬೆಳೆಸಿ – PSI ಸಂಜಯ ತಿಪರೆಡ್ಡಿ

ಕನ್ನಡ ಭಾಷಾಭಿಮಾನ ಬೆಳೆಸಿ – PSI ಸಂಜಯ ತಿಪರೆಡ್ಡಿ

ಮುದ್ದೇಬಿಹಾಳ : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಶಿಕ್ಷಕರು ಬೆಳೆಸಬೇಕು ಎಂದು ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು.

ಪಟ್ಟಣದ ಹಡಲಗೇರಿ ವ್ಯಾಪ್ತಿಯ ಬಿ.ಎ.ಎಸ್ ಇಂಟರನ್ಯಾಷನಲ್ ಶಾಲೆಯಲ್ಲಿ ಭಾನುವಾರ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಎಎಸ್ ಶಾಲೆಯು ಆಂಗ್ಲ ಮಾಧ್ಯಮವಾಗಿದ್ದರೂ ನಮ್ಮ ಕನ್ನಡದ ಬಗ್ಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಹೆಮ್ಮೆ ಎನಿಸುತ್ತಿದೆ ಎಂದರು.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಆಧುನಿಕ ದಿನಗಳಲ್ಲಿ ಉನ್ನತಮಟ್ಟದ ಶಿಕ್ಷಣದ ಜೊತೆಗೆ ನಮ್ಮ ಕನ್ನಡದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಬಿಎಎಸ್ ಶಾಲೆಯ ಆಡಳಿತ ಮಂಡಳಿ ಇನ್ನಿತರ ಆಂಗ್ಲ ಮಾದ್ಯಮ ಶಾಲೆಗೆ ಮಾದರಿಯಾಗಿದೆ. ಇಂತಹ ಶಾಲೆಯನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಇಲ್ಲಿನ ವಿದ್ಯಾರ್ಥಿಗಳ ಜವಾಬ್ದಾರಿಯೂ ಆಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸುಮಂಗಲಾ ಬಿರಾದಾರ, ಮುಖ್ಯ ಅತಿಥಿಯಾಗಿದ್ದ ಶಿವನಗೌಡ ಬಿರಾದಾರ, ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮಾತನಾಡಿದರು. ಇದೇ ವೇಳೆಯಲ್ಲಿ ಶಾಲೆಯ ವಿದ್ಯಾರ್ಥಿಗಳಲ್ಲಿ ನೀಲಿ, ಕೆಂಪು, ಹಲದಿ ಹಾಗೂ ಹಸಿರು ಬಣ್ಣಗಳ ನಾಲ್ಕು ತಂಡಗಳನ್ನು ರಚಿಸಿ ಆಯಾ ತಂಡಕ್ಕೆ ಶಾಲೆಯ ಒಂದು ಒಂದು ಜವಾಬ್ದಾರಿಯನ್ನು ಪ್ರಾಂಶುಪಾಲರಾದ ಕು.ರಿಷಿಕಾ ನಾಯಕ ಒದಗಿಸಿದರು.

Latest News

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ:                    ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ

ಶಾಸಕ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ:  ‘ನಿನ್ನ ಹಾಗೆ ಹವಾಯಿ ಚಪ್ಪಲಿ ಹಾಕಿಕೊಂಡು ನಾನು ನಾಟಕ ಮಾಡಿಲ್ಲ’-ನಡಹಳ್ಳಿ’

ಶಾಸಕ ನಾಡಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ: ‘ನಿನ್ನ ಹಾಗೆ ಹವಾಯಿ ಚಪ್ಪಲಿ ಹಾಕಿಕೊಂಡು ನಾನು ನಾಟಕ ಮಾಡಿಲ್ಲ’-ನಡಹಳ್ಳಿ’

ಮುದ್ದೇಬಿಹಾಳ : ನಾನು ನಿಮ್ಮ ಹಾಗೆ ಹವಾಯಿ ಚಪ್ಪಲ ಹಾಕಿಕೊಂಡು ನಾಟಕ ಮಾಡಿಲ್ಲ.ಬೆಂಗಳೂರು ತುಂಬ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಬರಗಾಲದಲ್ಲಿ ಸನ್ಮಾನ ಸಾಮಗ್ರಿ ತರಬೇಡಿ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಜನರಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬುವುದು.ಇರುವAತಹ ವಾತಾವರವನ್ನು

ಸಿಜೆಪಿಯಿಂದ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ-ಎಸ್.ಕೆ.ಬೆಳ್ಳುಬ್ಬಿ

ಸಿಜೆಪಿಯಿಂದ ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ-ಎಸ್.ಕೆ.ಬೆಳ್ಳುಬ್ಬಿ

ಮುದ್ದೇಬಿಹಾಳ : ಸರ್ವಾಧ್ಯಕ್ಷ ಆಡಳಿತವಿರುವ ದೇಶಗಳಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಕಾಕ್ರೋಚ ಜನತಾ ಪಾರ್ಟಿ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಶಿಕ್ಷಣ ಇಂದಿನ ಅಗತ್ಯ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಪಿಂಜಾರ ಸಮುದಾಯ ಶ್ರಮಿಕ ಸಮಾಜವಾಗಿದ್ದು ಎಲ್ಲ ಸಮಾಜದವರೊಂದಿಗೆ ಬೆರೆಯುವ ಜನಾಂಗವಾಗಿದ್ದಾರೆ.ನೀವು ಯಾವ ಧರ್ಮದಲ್ಲಿದ್ದಿರೋ ಮಕ್ಕಳಿಗೆ ಆ ಧರ್ಮದ ಸಂಸ್ಕಾರ ಕೊಡಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ಮುದ್ದೇಬಿಹಾಳ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಭವಿಷ್ಯದಲ್ಲಿ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳದಲ್ಲಿ ಐತಿಹಾಸಿಕ ನವರಾತ್ರಿ ನವಶಕ್ತಿ ವೈಭವ

ಮುದ್ದೇಬಿಹಾಳ : ನವರಾತ್ರಿ ದಸರಾ ಉತ್ಸವ ಸಂಚಲನ ಸಮಿತಿ ವತಿಯಿಂದ ನವದುರ್ಗೆಯರ ಕಡೆಗೆ ನಮ್ಮ ನಡಿಗೆ (ದುರ್ಗಾ ದೌಡ) ಹಾಗೂ ನವರಾತ್ರಿ ನವಶಕ್ತಿ ವೈಭವ–ಧರ್ಮ ಜಾಗೃತಿ ಸಮಾರಂಭದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಮಹಿಳೆಯರ ಧಾರ್ಮಿಕ ಪಥಸಂಚಲನ ಗಮನ ಸೆಳೆಯಿತು. ಪಟ್ಟಣದ ಶ್ರೀ ಬನಶಂಕರಿ ದೇವಾಲಯದಿಂದ ಧಾರ್ಮಿಕ ಸಂಚಲನ ಆರಂಭಗೊAಡಿತು.ಅಲ್ಲಿOದ ಗ್ರಾಮದೇವತೆ ಕಟ್ಟೆ, ಸರಾಫ್ ಬಜಾರ್, ಕಿಲ್ಲಾಗಲ್ಲಿಯ ಕಾಳಿಕಾದೇವಿ ಮಂದಿರ, ಕುಂಬಾರ ಓಣಿಯ ಗ್ರಾಮದೇವತೆ ಮಂದಿರ, ದುರ್ಗಾದೇವಿ ಹಾಗೂ ನಾಡದೇವಿ ಮಂದಿರ,