ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೌರಿ ಹುಣ್ಣಿಮೆ ಜಾತ್ರೆ ಮತ್ತು ಅನ್ನಪೂರ್ಣೇಶ್ವರಿ ನೂತನ ಮೂರ್ತಿ ಪ್ರತಿಷ್ಠಾಪನೆ ನ.21 ರಿಂದ 24ರವರೆಗೆ ಜರುಗಲಿದೆ ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ ಹೇಳಿದರು.
ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.ನ.21 ರಂದು ಸಾವಿರಾರು ಕುಂಭಗಳನ್ನು ಹೊತ್ತ ಮಹಿಳೆಯರು ಬೆಳಗ್ಗೆ 9 ರಇಂದ ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಹಾಗೂ ಅನ್ನಪೂರ್ಣೇಶ್ವರಿ ಮೂರ್ತಿಯನ್ನು ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆಯೊಂದಿಗೆ ದೇವಸ್ಥಾನ ತಲುಪಲಿದೆ ಎಂದು ತಿಳಿಸಿದರು.
ನ.22 ಹಾಗೂ 23 ರಂದು ಹೋಮಹವನ ನಡೆಯಲಿದೆ. ನ.24 ರಂದು ಬೆಳಗ್ಗೆ 5ಕ್ಕೆ ಪವಾಡ ಬಸವೇಶ್ವರರ ಬೆಳ್ಳಿ ನೂತನ ಮೂರ್ತಿ ಗದ್ದುಗೆ ಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತದೆ.ನಂತರ ಗದ್ದುಗೆಗೆ ಕರ್ತೃ ಗದ್ದುಗೆಗೆ ಅಭಿಷೇಕ 10ಕ್ಕೆ ಭಜನಾ ಪದಗಳ ಕಾರ್ಯಕ್ರಮ ನಂತರ 11.30ಕ್ಕೆ ಧರ್ಮಸಭೆ ನಡೆಯಲಿದೆ.ನಾಡಿನ ಹರಗುರು ಚರಮೂರ್ತಿಗಳು,ಹಾಲಿ,ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಮದ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ 10ಕ್ಕೆ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ ನಾಟಕ ಪ್ರದರ್ಶನ ನಡೆಯಲಿದೆ.ನ.25 ರಂದು ಸಾಧು ಮಹರಾಜರಿಗೆ ಮಹಾಪ್ರಸಾದ,ಮದ್ಯಾಹ್ನ 12ಕ್ಕೆ ಸಾಧು ಸಂತರಿಗೆ ಬಟ್ಟೆ ವಿತರಣೆ. ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ ಹೊರಗಿನಮಠಕ್ಕೆ ಹೊರಡಲಿದೆ ಎಂದು ತಿಳಿಸಿದರು.ನ.26 ರಂದು ಸಂಜೆ 7ಕ್ಕೆ ಜಾತ್ರೆಯಲ್ಲಿ ಹಾಗೂ ಪಲ್ಲಕ್ಕಿ ಉಸ್ತವದಲ್ಲಿ ಸೇವೆ ಸಲ್ಲಿಸಿದವರಿಗೆ ಭಕ್ಷಿಸ ವುತರಣಾ ಕಾರ್ಯಕ್ರಮ ಹಾಗೂ ಸಂಜೆ 6ಕ್ಕೆ ಮಹಾ ಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.
ದೇವಸ್ಥಾನ ಸಮೀತಿ ಸದಸ್ಯ ಶ್ರೀಶೈಲ ಮೇಟಿ ಮಾತನಾಡಿ, ನೂತನ ಬೆಳ್ಳಿ ಮೂರ್ತಿಯನ್ನು ವಿಜಯಪುರದ ಧ್ರುವ ಪತ್ತಾರ ಎಂಬುವರು ತಯಾರಿಸಿದ್ದು ಅಂದಾಜು 40 ಕೆಜಿ ತೂಕವಿದೆ.ಪ್ರಭಾವಳಿ ತಯಾರಿಕೆಗೆ ಇನ್ನಷ್ಟು ಬೆಳ್ಳಿ ಅಗತ್ಯವಿದ್ದು ಭಕ್ತರು ತಮ್ಮಿಂದಾದಷ್ಟು ಬೆಳ್ಳಿ ಕಾಣಿಕೆಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ಸಂಖ್ಯೆ ಹೆಚ್ಚಿಸಿದ್ದು ಗೌರಿ ಹುಣ್ಣಿಮೆ ನಿಮಿತ್ಯ ಅದ್ದೂರಿಯಾಗಿ ಜಾತ್ರೋತ್ಸವ ಜರುಗಲಿದೆ ಎಂದು ತಿಳಿಸಿದರು.
ದೇವಸ್ಥಾನ ಕಮೀಟಿ ಪ್ರಧಾನ ಕಾರ್ಯದರ್ಶಿ ಎಸ್.ಬಿ.ನಾಡಗೌಡ್ರ,ಸದಸ್ಯ ಸಂತೋಷ ಸೂಳಿಭಾವಿ,ಮಲ್ಲಣ್ಣ ಮೇಟಿ,ಶಂಭು ಸಗರಿ ಇದ್ದರು.
ಜುಲೈ ತಿಂಗಳಲ್ಲಿ ಮೂರ್ತಿ ಕಳ್ಳತನವಾದ ನಂತರ ಶೂನ್ಯಭಾವ ಆವರಿಸಿದ್ದ ದೇವಸ್ಥಾನಕ್ಕೆ ಮತ್ತೆ ನೂತನ ಮೂರ್ತಿ ಆಗಮನವಾಗುತ್ತಿರುವುದು ಜೀವಕಳೆ ಹೆಚ್ಚುವಂತೆ ಮಾಡುತ್ತಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.







