ಮುದ್ದೇಬಿಹಾಳ : ಬಸವಣ್ಣನವರ ಬಗ್ಗೆ ಬಂದಿರುವಷ್ಟು ಸಾಹಿತ್ಯ ಬೇರೆಯವರ ಬಗ್ಗೆ ಬಂದಿಲ್ಲ.ಆದರೆ ಕೆಲವು ಕುತ್ಸಿತ ಮನೋಭಾವದವರು ಸಮಾಜದಲ್ಲಿ ಸಮಾನತೆಯ ವ್ಯವಸ್ಥೆಯನ್ನು ಉರುಳಿಸಬೇಕು ಎನ್ನುವ ಹುನ್ನಾರದಿಂದ ಬಸವಣ್ಣನವರ ಅವಹೇಳನಕ್ಕೆ ಮುಂದಾಗಿರುವುದನ್ನು ಬಸವಾಭಿಮಾನಿಗಳು ಪ್ರಬಲವಾಗಿ ಖಂಡಿಸುವುದಾಗಿ ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಪುಸ್ತಕ ಬರೆಯಲು ಪ್ರೇರೇಪಣೆ ನೀಡಿದವರನ್ನು ಸಿಎಂ ಪಕ್ಕದಲ್ಲಿ ಕೂಡುತ್ತಾರೆ.ಬಸವಣ್ಣನವರ ಅನುಯಾಯಿಗಳ ಮೌನ,ನಿರ್ಲಕ್ಷ್ಯ ಭಾವನೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಟೀಕಿಸಿದ ಅವರು, ವಿಶ್ವದ 700 ಕೋಟಿ ಜನರ ನಾಯಕನಾಗಿರುವ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ ಎಂದು ಆಧಾರರಹಿತವಾಗಿ ಅವಹೇಳನ ಪದಗಳನ್ನು ಬರೆದಿರುವ ಲೇಖಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇನ್ನೋರ್ವ ಹಿರಿಯ ಸಾಹಿತಿ ಅಬ್ದುಲರಹೆಮಾನ ಬಿದರಕುಂದಿ ಮಾತನಾಡಿ, ಬಸವಣ್ಣನವರನ್ನು ಲಿಂಗಾಯತರಷ್ಟೇ ಪೂಜಿಸುವುದಿಲ್ಲ.ಬಸವಣ್ಣನವರು ಜಾತಿಗಷ್ಟೇ ಸೀಮಿತವಾಗಿ ಕೆಲಸ ಮಾಡಲಿಲ್ಲ.ವಚನಗಳ ಕಟ್ಟುಗಳನ್ನಿಟ್ಟುಕೊಂಡು ಓಡುವಾಗ ಇಂತಹ ಪಿಶಾಚಿಗಳು ಅಂದು ಬೆನ್ನಟ್ಟಿದ್ದವು.ಬಸವಣ್ಣನವರ ಆರಾಧಕರು ದುಷ್ಟರಾಗಿದ್ದೇವೆ.ಅವರ ಹೆಸರು ಹಾಳಾಗುತ್ತಿದೆ.ಪ್ರಬುದ್ಧ ನಾಯಕರೆನ್ನಿಸಿಕೊಂಡ ಶಂಕರ ಬಿದರಿ,ಮನು ಬಳಿಗಾರ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.ನಿಜವಾಗಲೂ ಅಂತವರನ್ನು ಮೊದಲು ವಿರೋಧಿಸಬೇಕು ಎಂದು ಹೇಳಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಪ್ರಚಾರಕ್ಕೋಸ್ಕರ ಬರೆಯುವವರಿಗೆ,ಪ್ರಕಟಗೊಳಿಸಿ ಇಂತಹ ಅವಹೇಳನಕ್ಕೆ ಸರ್ಕಾರ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮಹಾಮನೆ ಅಧ್ಯಕ್ಷ ಶಂಕರಗೌಡ ಬೇವಿನಗಿಡದ,ಬಸವ ಸಮೀತಿಯ ಮುಖಂಡ ಬಿ.ವಿ.ಕೋರಿ ಮಾತನಾಡಿ, ವೈಚಾರಿಕ ವಿಚಾರಗಳನ್ನು ಅಧಃಪತನಕ್ಕೆ ಕೊಂಡೊಯ್ಯುವ ಇಂತಹ ಪ್ರಸ್ತಾಪಗಳಿಗೆ ಸಮಾಜ ಸೊಪ್ಪು ಹಾಕಬಾರದು ಎಂದರು.
ಶಸಾಪ ಅಧ್ಯಕ್ಷ ಸಿ.ಜಿ.ನಾಗರಾಳ, ವಿಶ್ವೇಶ್ವರಭಟ್ ರವಿ ಬೆಳಗೆರೆ ಅಂತವರಿಗೆ ಸಾಹಿತ್ಯ ಕೊಟ್ಟವರು.ರವಿ ಹಂಜೆ ಮುಂದೆ ಮಾಡಿ ಬಸವಣ್ಣನವರ ಅವಹೇಳನಕ್ಕೆ ಮುಂದಾಗಿದ್ದಾರೆ.ಅವರೆಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದರು.
ದಲಿತ ಸಾಹಿತಿ ಶಿವಪುತ್ರ ಅಜಮನಿ,ಬಸವರಾಜ ನಾಲತವಾಡ,ಬಿ.ವಾಯ್.ಲಿಂಗದಳ್ಳಿ,ಗAಗಾಧರ ಕಲಬುರ್ಗಿ,ಗುರುಬಟ್ಟಿ ಎಸ್.ಆರ್.,ಹುಸೇನ ಮುಲ್ಲಾ,ರಾಮಣ್ಣ ಕುಂಟೋಜಿ,ಮಲೀಕಸಾಬ ನದಾಫ,ರಫೀಕ ಶಿರೋಳ ಇದ್ದರು.







