MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ.

ಈ ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ಮುಂದುವರೆದಿದೆ.

ಮಹೆಬೂಬ ನಗರದ ಪಕ್ಕದಲ್ಲಿರುವ ಆಶ್ರಯ ಕಾಲನಿಯಲ್ಲಿ ವಾಸವಿದ್ದ ಸುಡಗಾಡ ಸಿದ್ಧ ಜನಾಂಗದ ಇಬ್ಬರು ಯುವಕರು, ಓರ್ವ ಯುವತಿ ಕಾಲುವೆಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರಿಂದ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಬಸಮ್ಮ ಚೆನ್ನಪ್ಪ ಕೊಣ್ಣೂರ(21), ಸಂತೋಷ ಚೆನ್ನಪ್ಪ ಕೊಣ್ಣೂರ(16), ಹಾಗೂ ರವಿ ಹಣಮಂತ ಕೊಣ್ಣೂರ (15) ಕಾಲುವೆಯಲ್ಲಿ ಜಾರಿ ಬಿದ್ದು ಮುಳುಗಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಶೋಧ ಕಾರ್ಯ ಮುಂದುವರೆದಿದೆ.ಘಟನಾ ಸ್ಥಳಕ್ಕೆ ಸಿಪಿಐ ಮೊಹ್ಮದ ಫಸಿವುದ್ದೀನ , ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿದ್ದಾರೆ.

Latest News

ಕಂದಗನೂರ-ಮುದೂರ ರಸ್ತೆ ದುರಸ್ತಿ : ರೈತರ ಹೊಲಗಳ ದರ ದುಪ್ಪಟ್ಟು-ಶಾಸಕ ಸಿ.ಎಸ್.ನಾಡಗೌಡ

ಕಂದಗನೂರ-ಮುದೂರ ರಸ್ತೆ ದುರಸ್ತಿ : ರೈತರ ಹೊಲಗಳ ದರ ದುಪ್ಪಟ್ಟು-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಹಳ್ಳಿಗಳನ್ನು ಸಂಪರ್ಕಿಸುವ ರೈತರ ಹೊಲಗಳಿಗೆ ಹೋಗುವ ರಸ್ತೆಗಳ ಸುಧಾರಣೆಯಿಂದ

ನಾನು  ಕಾಂಗ್ರೆಸ್  ಹೈಕಮಾಂಡ್  ಲಿಸ್ಟ್’ನಲ್ಲಿರುವೆ-C.S.ನಾಡಗೌಡ

ನಾನು  ಕಾಂಗ್ರೆಸ್  ಹೈಕಮಾಂಡ್  ಲಿಸ್ಟ್’ನಲ್ಲಿರುವೆ-C.S.ನಾಡಗೌಡ

ಮುದ್ದೇಬಿಹಾಳ : ‘ಕೆಲವರು ನಾನು ಡಿಕೆಶಿ ಲಿಸ್ಟ್’ನಲ್ಲಿರುವೆ,ಇನ್ನು ಕೆಲವರು ಸಿದ್ಧರಾಮಯ್ಯ ಲಿಸ್ಟ್’ನಲ್ಲಿರುವೆ ಎನ್ನುತ್ತಿದ್ದಾರೆ.ನಾನು ಅವರಿಬ್ಬರ

ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ಸವಾರಿ ಮಾಡುವರು : ಕೆ. ಶಿವಕುಮಾರ್

ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ಸವಾರಿ ಮಾಡುವರು : ಕೆ. ಶಿವಕುಮಾರ್

ಚಾಮರಾಜನಗರ : ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ನಿಮ್ಮಗಳ ಮೇಲೆ ಸವಾರಿ ಮಾಡುವರು ಎಂದು ವಿಧಾನ

ರೈತರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಾಲ್ಲೂಕು ಕೃಷಿ ಕಚೇರಿಗೆ ಮುತ್ತಿಗೆ

ರೈತರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಾಲ್ಲೂಕು ಕೃಷಿ ಕಚೇರಿಗೆ ಮುತ್ತಿಗೆ

ಬೀದರ್ ;- ರಾಜ್ಯದಲ್ಲಿ ಸಂಭವಿಸಿರುವ ನೆರೆ, ಬರ, ಪ್ರವಾಹ ಮೊದಲಾದ ಪ್ರಕೃತಿ ವಿಕೋಪಗಳಿಂದ ರೈತರು,

ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ

ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ

ಗುಳಬಾಳ : ಹುಣಸಗಿ ತಾಲ್ಲೂಕಿನ ಗುಳಬಾಳ ಗ್ರಾಮದ ನಿವಾಸಿಯಾದ ಶ್ರೀಮತಿ ಯಂಕಮ್ಮ ಬಮ್ಮನಳ್ಳಿ ಅವರು ಕಲಿತ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆಯಾಗಿ ನೀಡಿದರು. "ನಾನು ಕಲಿತ ಶಾಲೆ ನನ್ನ ಹೆಮ್ಮೆ" ಎಂದು ತಿಳಿದು ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕ್ರಮಗಳು ಇನ್ನಿತರೆ ಜಯಂತಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ತಮ್ಮ ವೈಯಕ್ತಿಕ ಹಣದಲ್ಲಿ ಶಾಲೆಗೆ ದೇಣಿಗೆ ನೀಡಿದರು. ಹುಣಸಗಿ ತಾಲೂಕಿನ ಪದವಿದರರೂ ತಮ್ಮ ಊರಿನ ಶಾಲೆಗೆ ದೇಣಿಗೆ ನೀಡಿ ಮಾದರಿಯಾಗಿ

ಬಸರಕೋಡ ಪಿ.ಕೆ.ಪಿ.ಎಸ್ :                                         ಅಧ್ಯಕ್ಷರಾಗಿ ಹೇಮರೆಡ್ಡಿ ಮೇಟಿ, ಉಪಾಧ್ಯಕ್ಷರಾಗಿ ಬಾಬು ಸೂಳಿಭಾವಿ ಅವಿರೋಧ ಆಯ್ಕೆ

ಬಸರಕೋಡ ಪಿ.ಕೆ.ಪಿ.ಎಸ್ : ಅಧ್ಯಕ್ಷರಾಗಿ ಹೇಮರೆಡ್ಡಿ ಮೇಟಿ, ಉಪಾಧ್ಯಕ್ಷರಾಗಿ ಬಾಬು ಸೂಳಿಭಾವಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೇಮರೆಡ್ಡಿ ಮೇಟಿ,ಉಪಾಧ್ಯಕ್ಷರಾಗಿ ಬಾಬು ಸೂಳಿಭಾವಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ತಲಾ ಒಂದೊAದೇ ನಾಮಪತ್ರ ಸಲ್ಲಿಕೆ ಆದ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಎಸ್.ಉತ್ನಾಳ ತಿಳಿಸಿದರು. ಎರಡನೇ ಅವಧಿಗೆ