ಮುದ್ದೇಬಿಹಾಳ : ಗ್ರಾಹಕರ ಸಹಕಾರದಿಂದಲೇ ಸಹಕಾರಿ ಸಂಘಗಳ ಪ್ರಗತಿ ಸಾಧ್ಯವಾಗುತ್ತದೆ ಎಂದು ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಇಸ್ಲಾಂಪೂರ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಬಸವ ಗಾರ್ಡನ್‌ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ 16ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ 18 ವರ್ಷದಲ್ಲಿ ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು ಈ ಸಾಲಿನಲ್ಲಿ 6.13 ಲಕ್ಷ ಲಾಭ ಗಳಿಸಿದೆ. ಆಸ್ತಿ ಮೇಲಿನ ಸಾಲ ನೀಡಿಕೆ ಪ್ರಮಾಣ ಹೆಚ್ಚಳ ಮಾಡಬೇಕಾದರೆ ಇ-ಉತಾರೆ ಸಲ್ಲಿಸಬೇಕು. ಅದರ ಮೇಲೆ ಯಾವುದೇ ತಂಟೆಗಳು ಇರಬಾರದು.ಅಂತಹ ಆಸ್ತಿಗಳಿಗೆ ಸಂಘವು ನಿಯಮಾನುಸಾರವಾಗಿ ಸಾಲ ನೀಡಲಿದೆ ಎಂದರು.
ಸಂಘದ ನಿರ್ದೇಶಕ ಎಸ್.ಬಿ.ಹೊನ್ನಳ್ಳಿ,ಎಸ್.ಜಿ.ಚಿತ್ತವಾಡಗಿ, ವಕೀಲ ಸಿ.ಎಂ.ಹಾವರಗಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಮಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಶೈಲ ಕಡಿ, ನಿರ್ದೇಶಕರಾದ ಅಮರಪ್ಪ ಕೋಟಿ,ಬಸವರಾಜ ಅಮರಾವತಿ, ಜಿ.ಎಸ್.ಕಡಕೋಳ, ಸಿ.ಎಸ್.ಬೇನಾಳ,ಬಿ.ಸಿ.ಕಲ್ಲೂರ, ಜಿ.ಎಂ.ಉಪ್ಪಲದಿನ್ನಿ, ಎಂ.ಎಂ.ಕೋಲಕಾರ, ಬಸವರಾಜ ಹೆಗಡೆ, ಆನಂದ ಚೌಧರಿ ಇದ್ದರು.
ಮಹಾಂತೇಶ ಗಂಜಿಹಾಳ ಸ್ವಾಗತಿಸಿದರು.ಎಸ್.ಎಸ್.ಮಾಗಿ ನಿರೂಪಿಸಿದರು.
ಇದನ್ನೂ ಓದಿ: Crime News: ಗ್ರಾಪಂ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಉಪಾಧ್ಯಕ್ಷೆ!