ಮುಧೋಳ : ರೈತರ ಖಾತೆಗೆ ಬಾಕಿ ಹಣ ಜಮಾ ಮಾಡುವಂತೆ ಒತ್ತಾಯಿಸಿ ಸಮೀಪದ ಐಸಿಪಿಎಲ್ ಕಾರ್ಖಾನೆ ಎದುರು ಕಬ್ಬು ಬೆಳೆಗಾರರು ಹಾಗೂ ರೈತರು ಧರಣಿ ಆರಂಭಿಸಿದ್ದಾರೆ.
ಅ.24ರಂದು ನಗರದಲ್ಲಿ ಸಭೆ ಸೇರಿದ್ದ ರೈತರು 26ರೊಳಗೆ 2023ರ ಹಂಗಾಮಿನ ಪ್ರತಿಟನ್ನಿಗೆ ಹೆಚ್ಚುವರಿ 62ರೂ. ನೀಡಬೇಕು ಎಂದು ಎಲ್ಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಗಡುವು ನೀಡಿದ್ದರು. ಆದರೆ ರೈತರ ಗಡುವಿಗೆ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳು ಸ್ಪಂದನೆ ನೀಡದ ಕಾರಣ ಶನಿವಾರ ಮತ್ತೆ ಸಭೆ ಸೇರಿದ ರೈತರು ಕಾರ್ಖಾನೆ ನಡೆಯ ವಿರುದ್ದ ಆಕ್ರೋಶ ಹೊರಹಾಕಿದರು. ಬಳಿಕ ಸಕ್ಕರೆ ಕಾರ್ಖಾನೆ ಎದುರು ಧರಣಿ ಕೂರುವ ನಿರ್ಧಾರ ಕೈಗೊಂಡು ನೇರವಾಗಿ ಕಾರ್ಖಾನೆಗೆ ತೆರಳಿದರು.
ಕಾರ್ಖಾನೆ ಎದುರು ಧರಣಿ ಕುಳಿತಿರುವ ರೈತರು ಬಾಕಿ ಬಿಲ್ ಪಾವತಿಗೆ ಒತ್ತಾಯಿಸುತ್ತಿದ್ದಾರೆ.
ರೈತಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ರೈತಮುಖಂಡರಾದ ಹನಮಂತ ನಬಾಬ, ಸುಭಾಷ ಶಿರಬೂರ, ಎ.ಜಿ.ಪಾಟೀಲ ಸೇರಿದಂತೆ ಇತರರು ಇದ್ದರು.
ಬಾಕಿ ಹಣಕ್ಕಾಗಿ ಕರ್ಖಾನೆ ಎದುರು ರೈತರ ಪ್ರತಿಭಟನೆ
ಬಾಕಿ ಹಣಕ್ಕಾಗಿ ಕರ್ಖಾನೆ ಎದುರು ರೈತರ ಪ್ರತಿಭಟನೆ
Latest News
ಕುಂಟೋಜಿ ಎಸ್ಡಿಎಂಸಿ ರಚನೆಯಲ್ಲಿ ನಿಯಮ ಉಲ್ಲಂಘನೆ ಆರೋಪ
ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಸಮೀತಿ
ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ
ಮುದ್ದೇಬಿಹಾಳ : ಕೆಎಸ್ಡಿಎಲ್ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಬರ ಪರಿಸ್ಥಿತಿ ಕುರಿತು ಆ.11,12
ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ
ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ
ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ
ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ
ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ
ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ ಸ್ಥಾಪಿಸುವ ಯತ್ನ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ,ಕಮೀಟಿಗೆ ಸ್ಪರ್ಧಿಸಿರುವ ಅಬ್ದುಲಗಫೂರ ಮಕಾನದಾರ ಹೇಳಿದರು. ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1936ರಲ್ಲಿ ಇಲ್ಲಿನ ಅಂಜುಮನ್ ಸಂಸ್ಥೆಯನ್ನು ಹಿರಿಯರು ಹುಟ್ಟು ಹಾಕಿದ್ದಾರೆ.ಅಂಜುಮನ್ ಸಂಸ್ಥೆಯ ಬೆಳವಣಿಗೆಯಲ್ಲಿ ಹಿಂದೂ ಬಾಂಧವರ ಸಹಕಾರವೂ ಇತ್ತು.ಆದರೆ ಕಾರಣಾಂತರಗಳಿAದ ಸಂಸ್ಥೆಯ ಅಭಿವೃದ್ಧಿ ಕುಂಠಿತಗoಡಿದೆ. ಹೊಸಬರು,ಒಳ್ಳೆಯವರ ಆಯ್ಕೆಗೆ
ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್
ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ ಪ್ರತಿ ಎಕರೆ ಜಮೀನಿಗೆ 50 ಸಾವಿರ ರೂ.ಬರ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ ಆಗ್ರಹಿಸಿದರು. ಬಿಜೆಪಿ ನಿಯೋಗದಿಂದ ಬರ ಅಧ್ಯಯನ ಪ್ರವಾಸ ನಡೆಸುವ ಮುನ್ನ ತಾಲ್ಲೂಕಿನ ಕುಂಟೋಜಿ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ರೈತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕೇವಲ ಕೇಂದ್ರದತ್ತ ಬೆರಳು ಮಾಡದೇ







