ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ತಾಲ್ಲೂಕು ಬರಪೀಡಿತ ಎಂದು ಘೋಷಣೆಗೆ ಸ್ಥಳ ಪರಿಶೀಲನೆಗೆ ಆದೇಶ ಮಾಡಿದ್ದಾರೆ.ಅಧಿಕೃತವಾಗಿ ಬರಪೀಡಿತ ತಾಲ್ಲೂಕು ಇನ್ನೂವರೆಗೂ ಘೋಷಣೆಯಾಗಿಲ್ಲ.ಎರಡು ದಿನಗಳ ಕಾಲ ಮಣ್ಣಿನ ತೇವಾಂಶ,ಬೆಳೆಯ ಗುಣಮಟ್ಟ,ವಾತಾವರಣದಲ್ಲಿ ತೇವಾಂಶ ಎಷ್ಟಿದೆ ಎಂದು ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕು.ಈಗ ಸಾಧಾರಣ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ನಿಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ದಿನವೂ ರೈತರ ಜೊತೆಗೆ ಕೂತು ಹಳ್ಳಿಗಳಿಗೆ ಹೋಗಿ ಮಾತನಾಡಿಲ್ಲ.ಸ್ವತಃ ರಾಜಕೀಯ ಬಣ್ಣ ಬಳಿದು ಉಸ್ತುವಾರಿ ಸಚಿವರು,ನನ್ನ ಮೇಲೆ ಆರೋಪ ಮಾಡಿದ್ದರು ಎಂದು ನಡಹಳ್ಳಿ ಕಿಡಿ ಕಾರಿದರು.

ಮುದ್ದೇಬಿಹಾಳದ ಶಾಸಕರು ಅಸರ್ಮರ್ಥರಿದ್ದಾರೆ.ರೈತ ವಿರೋಧಿ,ನಿಷ್ಕಾಳಜಿತನ ತೋರುತ್ತಿದ್ದಾರೆ.ಹದಿನೈದು ದಿನಗಳಿಂದ ರೈತರ ಜೊತೆಗೆ ನಿಂತು ಹೋರಾಟ ಮಾಡುತ್ತಿದ್ದೇವೆ.ಇದು ಸಾಧಾರಣ ಬರ ಅಲ್ಲ.ಶಬ್ದಗಳ ಜೊತೆಗೆ ಆಟ ಆಡುತ್ತಿದ್ದಾರೆ.ಭೀಕರ ಬರ ಬಂದಿದೆ.ನಮ್ಮಲ್ಲಿ ಶೇ.33ರಷ್ಟು ಅಲ್ಲ, ಶೇ.100ರಷ್ಟು ಬೆಳೆ ಹಾನಿ ಆಗಿರುವ ಪರಿಸ್ಥಿತಿ ಇದೆ.ಅಪ್ಪಾಜಿ ನಾಡಗೌಡ ಮಾತು ಜಿಲ್ಲಾಧಿಕಾರಿಗಳೇ,ಉಸ್ತುವಾರಿ ಸಚಿವರೇ ಅವರ ಮಾತು ಕೇಳಬೇಡಿ.ಇವರಿಗೆ ರೈತರ ಕಾಳಜಿ ಇಲ್ಲ.ಧರಣಿ ಸತ್ಯಾಗ್ರಹ, ರೈತರ ಹೋರಾಟಕ್ಕಲ್ಲ ಅಂಕಿ ಅಂಶಗಳಿoದ ಆಗುತ್ತದೆ ಎಂದು ರಾಜಕಾರಣ ಮಾಡುತ್ತಿದ್ದಾರೆ.ತಾಲ್ಲೂಕಿನ ಜನತೆಗೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಸ್ಥಳ ಪರಿಶೀಲನೆ ಸರ್ವೆಗೆ ಉಸ್ತುವಾರಿ ಸಚಿವರನ್ನು ನಮ್ಮ ತಾಲ್ಲೂಕಿಗೆ ಸ್ವಾಗತಿಸುತ್ತೇವೆ.ರೈತರ ವಿಷಯದಲ್ಲಿ ನಾವು ನಿಮ್ಮೊಂದಿಗೆ ಸಹಕಾರ ಮಾಡುತ್ತೇವೆ.ಅತ್ಯಂತ ಭೀಕರ ಬರ ಎಂದು ಘೋಷಣೆ ಮಾಡಬೇಕು.ಒಂದನೇ ಪಟ್ಟಿಯಲ್ಲಿ 101,ಎರಡನೇ ಪಟ್ಟಿಯಲ್ಲಿ 23 ಸಂಪೂರ್ಣ ಬರಪೀಡಿತ, ಮೂರನೇ ಪಟ್ಟಿಯಲ್ಲಿ 53 ತಾಲ್ಲೂಕುಗಳಲ್ಲಿ ಸ್ಥಳ ಪರಿಶೀಲನೆ ಮಾಡಲು ಸೂಚಿಸಲಾಗಿದೆ.ತಾಳಿಕೋಟಿಯಲ್ಲೂ ರೈತರು ಹೋರಾಟ ಮಾಡುತ್ತಿದ್ದಾರೆ. ಜೆಡಿಎಸ್,ಬಿಜೆಪಿ ಪಕ್ಷದಿಂದಲೂ ಬೆಂಬಲ ಸೂಚಿಸಿ ಹೋರಾಟ ಮುಂದುವರೆಸಲಾಗುತ್ತಿದೆ ಎಂದು ಹೇಳಿದರು.

ತಾಳಿಕೋಟಿ,ಇಂಡಿ,ಚಡಚಣ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲು ಉಸ್ತುವಾರಿ ಸಚಿವರಲ್ಲಿ ಮನವಿ ಮಾಡುತ್ತೇನೆ.ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಅಯ್ಯೋ ಪಾಪ ಎನ್ನಿಸುತ್ತಿದೆ.ರೈತರಿಗೆ,ನಗರದ ಜನರಿಗೆ ಎಲ್ಲಿ ಕ್ರೆಡಿಟ್ ಹೋಗಿ ಬಿಡುತ್ತದೆ ಎಂದು ಮೊದಲು ಪಟಾಕಿ ಸಿಡಿಸಿ, ಸಿಹಿ ಹಂಚಿಸಿದ್ದಾರೆ.ಸರ್ವೆ ಆರಂಭಗೊಳ್ಳುತ್ತಿದ್ದು ಅವರು ಸ್ಥಳದಲ್ಲಿ ಇರಬೇಕಿತ್ತು.ಮೂರುವರೆ ವರ್ಷದಲ್ಲಿ ನಮ್ಮ 500 ಕಾರ್ಯಕರ್ತರ ಮೇಲೆ ಎಫ್.ಆಯ್.ಆರ್ ದಾಖಲಿಸಿದ್ದಾರೆ.ಇವರ ಪಾಪದ ಕೊಡ ತುಂಬಿ ಬಂದಿದೆ.ಚೇತನ ಸಂಗಮ ಎಂಬ ಯುವ ಮೋರ್ಚಾದ ಮುಖಂಡನ ಪೆಟ್ರೋಲ್ ಬಂಕ್‌ನ ಕರೆಂಟ್ ಕಡಿತ ಮಾಡಿಸುತ್ತಾರೆ ಎಂದು ಹೇಳಿದರು.
ಧಮ್ ಇದ್ದರೆ ನನ್ನ ಜೊತೆಗೆ ಗುದ್ದಾಡಬೇಕು.ಮುದ್ದೇಬಿಹಾಳ ಸ್ಥಳ ಪರಿಶೀಲನೆ ಮಾಡಲು ಆದೇಶ ಆಗಿದೆ ಅಂದರೆ ಅದಕ್ಕೆ ತಾಲ್ಲೂಕಿನ ರೈತರು,ಎಲ್ಲ ವ್ಯಾಪಾರಸ್ಥರು,ಎಲ್ಲ ಮಾಧ್ಯಮದವರು ಒಳ್ಳೆಯ ವರದಿ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ಗಮನಕ್ಕೆ ತಂದಿದ್ದಕ್ಕೆ ಇದು ಆಗಿದೆ.ವಾತಾವರಣ,ಮಳೆ ತೇವಾಂಶ,ಇದರ ಆಧಾರದ ಮೇಲೆ ಜನಕ್ಕೆ ನೀರು,ಮೇವು ಪರಿಹಾರ ಒದಗಿಸುವ ವಾಚಡಾಗ್ ಆಗಿ ಕಾಯ್ತಿರುತ್ತೇವೆ.ಕ್ರೆಡಿಟ್ ರೈತರಿಗೆ,ವ್ಯಾಪಾರಸ್ಥರಿಗೆ,ಮಾಧ್ಯಮದವರಿಗೆ ಹೋಗಬೇಕು.ಶೇ.100ರಷ್ಟು ವಿಮೆ ಬಿಡುಗಡೆ ಆಗಬೇಕು.5ಲಕ್ಷದವರೆಗೆ ಸಾಲ ಮನ್ನಾ ಮಾಡಬೇಕು ಎಂದು ನಡಹಳ್ಳಿ ಆಗ್ರಹಿಸಿದರು.

ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ,ಮುಖoಡರಾದ ಎಂ.ಬಿ.ಅoಗಡಿ,ಕೆ.ವಾಯ್.ಬಿರಾದಾರ,ಯುವ ಘಟಕದ ಅಧ್ಯಕ್ಷ ಗಿರೀಶಗೌಡ ಪಾಟೀಲ, ಮಲಕೇಂದ್ರಾಯಗೌಡ ಪಾಟೀಲ,ಪ್ರಭು ಕಡ,ಗುರುನಾಥ ದೇಶಮುಖ,ಬಸಯ್ಯ ನಂದಿಕೇಶ್ವರಮಠ ,ವೀರೇಶ್ ಪಾಟೀಲ ,ಸಂಗಮ್ಮ ದೇವರಳ್ಳಿ ,ಗೌರಮ್ಮ ಹುನಗುಂದ ,ಬಸಲಿಂಗಮ್ಮ ಬಿರಾದಾರ,ಗುರುನಾಥಗೌಡ ಬಿರಾದಾರ, ಸೋಮನಗೌಡ ಬಿರಾದಾರ, ಅಶೋಕ ರಾಠೋಡ ,ಎಸ್. ಬಿ. ಪ್ಯಾಟಿ,ಸಿದ್ಧರಾಜ ಹೊಳಿ,ಶಂಕರಗೌಡ ಶಿವಣಗಿ,ವೈ.ಟಿ.ಗೌಡರ್ ,ಮುತ್ತಣ್ಣ ಹುಂಡೇಕಾರ,ಹರೀಶ ನಾಟೀಕಾರ,ಹನುಮಂತ ನಾಯಕಮಕ್ಕಳ,ಸೋಮನಗೌಡ ಮೇಟಿ,ಮಂಜುನಾಥ ಛಲವಾದಿ ,ಸಂಗಣ್ಣ ಹತ್ತಿ ,ಲಕ್ಷ್ಮಣ ಬಿಜ್ಜೂರ ,ಶೇಖರ ಮಾದರ,ನಾಗೇಶ್ ಕವಡಿಮಟ್ಟಿ,ನೀಖಿಲ್ ಮಲಗಲದಿನ್ನಿ,ಶ್ರೀಕಾಂತ ಹಿರೇಮಠ,ರವೀಂದ್ರ ಬಿರಾದಾರ ಇದ್ದರು.

Latest News

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ:                     ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ: ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಮುದ್ದೇಬಿಹಾಳ : ಸರ್ಕಾರ ಕಾಲುವೆಗಳ ದುರಸ್ತಿಗೆ ಹಣ ಕೊಡುತ್ತಿಲ್ಲ.ನೀವೇ ಪಟ್ಟಿ ಹಾಕಿಕೊಂಡು ಕಾಲುವೆ ರಿಪೇರಿ

ಬಿಎಚ್‌ಇಓ ಹುದ್ದೆ ಪದೋನ್ನತಿ ವಿಳಂಬ: ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ

ಬಿಎಚ್‌ಇಓ ಹುದ್ದೆ ಪದೋನ್ನತಿ ವಿಳಂಬ: ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ

ಮುದ್ದೇಬಿಹಾಳ : ಆರೋಗ್ಯ ಇಲಾಖೆಯಲ್ಲಿ ಪದವೀಧರ ಆರೋಗ್ಯ ನಿರೀಕ್ಷಣಾಧಿಕಾರಿಗಳು (ಬಿಎಚ್‌ಇಓ) ಹಾಗೂ ಪದವೀಧರ ಪ್ರಾಥಮಿಕ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಮುದ್ದೇಬಿಹಾಳ : ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶಕ್ತಿವಂತ ದೇವರೆಂದೇ ಪ್ರಸಿದ್ಧಿಯಾದ ಶ್ರೀ ವೀರಭದ್ರೇಶ್ವರ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ:                                 ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ: ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ಮುದ್ದೇಬಿಹಾಳ : ಸಂಪೂರ್ಣ ಬಂದ್ ಮಾಡಿ ಜನರು ಸಹಕರಿಸಿದ್ದಾರೆ.ಶಾಸಕ ನಾಡಗೌಡರ ಮಾತಿಗೆ ಜನರು ಬೆಲೆ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ:                   ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ: ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಮುದ್ದೇಬಿಹಾಳ : ಮನುಷ್ಯನಿಗೆ ದೈವ ಬಲದೊಂದಿಗೆ ಗುರುವಿನ ಅವಶ್ಯಕತೆ ಬಹಳವಿದೆ. ಇದರಿಂದಲೇ ಇಂದಿನ ಆಧುನಿಕ ದಿನಗಳಲ್ಲಿಯೂ ಗುರುವಿಗೆ ಮಹತ್ವವಿದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಬಿ.ಎ.ಎಸ್ ಇಂಟರನ್ಯಾಶನ್ ಶಾಲೆಯ ಕಾರ್ಯದರ್ಶಿ ಎಸ್.ಎಸ್.ಬಿರಾದಾರ ಹೇಳಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎ.ಎಸ್. ಇಂಟನ್ಯಾಷನಲ್ ಸ್ಕೂಲ್‌ನಲ್ಲಿ ಬುಧವಾರ ಶಿಕ್ಷಕರ ದಿನಾಚರಣೆ ಹಾಗೂ ಇತ್ತಿಚಿಗೆ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯಯೊಂದೆ ಅಗತ್ಯವಲ್ಲ. ಪಠ್ಯತರ

ಮಾಜಿ ಶಾಸಕ ನಡಹಳ್ಳಿ ಆಗ್ರಹ:                                                           ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮಾಜಿ ಶಾಸಕ ನಡಹಳ್ಳಿ ಆಗ್ರಹ: ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮುದ್ದೇಬಿಹಾಳ : ರಾಜ್ಯದಲ್ಲಿ 199 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು ಕಾಂಗ್ರೆಸ್ ಸರ್ಕಾರ ರೈತರ ಐದು ಲಕ್ಷಗಳವರೆಗಿನ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು. ಪಟ್ಟಣದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ನಡೆದಿರುವ ಧರಣಿ ಸತ್ಯಾಗ್ರಹದ ನಾಲ್ಕನೇ ದಿನದ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮುದ್ದೇಬಿಹಾಳ ತಾಲ್ಲೂಕು ಮಾತ್ರ ಬರಪಟ್ಟಿಗೆ ಸೇರ್ಪಡೆಯಾದರೆ ಸುಮ್ಮನಾಗುವುದಿಲ್ಲ.ಕ್ಷೇತ್ರದ ತಾಳಿಕೋಟಿ ತಾಲ್ಲೂಕು, ಜಿಲ್ಲೆಯ