ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲ ಒದಗಿಸಿಕೊಡಲು ನಮ್ಮ ಸಂಘಕ್ಕೆ ಮಂಜೂರಾಗಿದ್ದ ಮದ್ಯದಂಗಡಿಯನ್ನು ನಿರಾಕರಿಸಿ ಪೆಟ್ರೋಲ್ ಬಂಕ್‌ನ್ನು ನಡೆಸಲು ಅನುಮತಿ ಪಡೆದುಕೊಂಡಿದ್ದೇವೆ ಎಂದು ತಾಲ್ಲೂಕಿನ ಕೇಸಾಪೂರ ಶ್ರೀ ಸಂಗಮೇಶ್ವರ ವಿವಿಧೋದ್ಧೇಶಗಳ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆರ್.ಬಿ.ಖಾನಾಪೂರ ಹೇಳಿದರು.
ತಾಲ್ಲೂಕಿನ ಕೇಸಾಪೂರದ ಪಟ್ಟಣದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಶುಕ್ರವಾರ 26ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ವಿಜಯಪುರ ಸಹಕಾರ ಸಂಘಗಳ ಉಪ ನಿಬಂಧಕಿ ಭಾಗ್ಯಶ್ರೀ ಎಸ್.ಕೆ., ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ ಅವರ ಸಹಕಾರದಿಂದ ನಮ್ಮ ಸಂಘಕ್ಕೆ ಪೆಟ್ರೋಲ್ ಬಂಕ್ ಬಂದಿದ್ದು ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ವರ್ಷ 2025-26 ನೇ ಸಾಲಿನಲ್ಲಿ 16.36 ಲಕ್ಷ ನಿವ್ವಳ ಲಾಭವನ್ನು ಸಂಘ ಮಾಡಿದೆ. ಸಂಘದ ಅಡಿಟ್ ” ಅ” ವರ್ಗದಲ್ಲಿದೆ. ಯರಗಲ್ ಹಾಗೂ ಕೇಸಾಪೂರದಲ್ಲಿ ಶಾಖೆಗಳನ್ನು ಹೊಂದಿರುವ ಜಿಲ್ಲೆಯ ಎರಡನೇ ಶಾಖೆ ನಮ್ಮದಾಗಿದೆ ಎಂದು ತಿಳಿಸಿದರು.
ತೊಗರಿ ಕೇಂದ್ರ ಆರಂಭಿಸಿದರೆ ಅದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎನ್ನುವ ಕಾರಣದಿಂದ ಇಷ್ಟು ವರ್ಷಗಳ ಕಾಲ ಕೇಂದ್ರ ಆರಂಭಿಸಿರಲಿಲ್ಲ.ಅದರ ಸಾಧಕ ಬಾಧಕಗಳು ಮಾಧ್ಯಮದವರಿಗೆ ತಿಳಿದಿದೆ.ಮುಂಬರುವ ದಿನಗಳಲ್ಲಿ ತೊಗರಿ,ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ.ರೈತರ ಪಾದದ ಧೂಳಿನಿಂದ ನಮ್ಮ ಸಂಘ ಅಭಿವೃದ್ಧಿಯತ್ತ ಸಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಸಿದ್ದಪ್ಪ ತಳವಾರ,ನಿರ್ದೇಶಕ ಜಗದೀಶ ಪಂಪಣ್ಣನವರ ಮಾತನಾಡಿ , ಸಂಘದಲ್ಲಿ ರೋಖ ಪತ್ತಿನ ಬೆಳೆ ಸಾಲ ನಿತ್ಯದ ಕೃಷಿಗೆ ಉಪಯೋಗವಿದೆ.ರೈತರು ಪಡೆದ ಸಾಲವನ್ನು ಸಕಾಲಕ್ಕೆ ಭರ್ತಿ ಮಾಡಿದರೆ ಉಳಿದವರಿಗೂ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಎಫ್‌ಡಿಎ ಜಿ.ಕೆ.ಬಿರಾದಾರ ಮಾತನಾಡಿ, ಸದಸ್ಯರ ಸಹಕಾರದಿಂದಲೇ ಇಷ್ಟೊಂದು ದೊಡ್ಡಮಟ್ಟಕ್ಕೆ ಸೊಸೈಟಿ ಬೆಳೆದಿದೆ.ರೈತರು ನಿರಂತರವಾಗಿ ಸಂಘದ ಜೊತೆಗೆ ವ್ಯವಹಾರ ಕಾಯ್ದುಕೊಳ್ಳಬೇಕು ಎಂದರು.
ಕೋಲಾರ(ಕೆಜಿಎಫ್)ನಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿರುವ ಮೂಲತಃ ಕೇಸಾಪೂರದ ಪುತ್ರ ವಿಠ್ಠಲ ಉಪ್ಪಿನಕಾಯಿ(ತಳವಾರ) ಅವರನ್ನು ಸಂಘದಿoದ ಗೌರವಿಸಲಾಯಿತು.
ಸಭೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಶರಣಪ್ಪ ಗಂಗಾವತಿ, ನಿರ್ದೇಶಕರುಗಳಾದ ಬಿ.ಬಿ ತಳವಾರ,ಜಿ.ಜಿ ಗೌಡರ,ಸಿ.ಎಸ್ ದೇಸಾಯಿ, ಎಸ್ ವೈ ವಡ್ಡರ,ಎ.ಹೆಚ್ ವಾಲಿಕಾರ, ಹಣಮಂತ ಕಂಗಳ,ನಿರ್ದೇಶಕಿಯರಾದ ಜ್ಯೋತಿ ವಡ್ಡರ,ಗಿರೀಜಾ ಪಾಟೀಲ್ ,ಭುವನೇಶ್ವರಿ ಪಡಶೆಟ್ಟಿ,ಸಿಬ್ಬಂದಿಗಳಾದ ಎಸ್ ಜಿ ಗೌಡರ, ಎಸ್ ಎಸ್ ಕುಸ್ತಿ, ಎಸ್ ಎಲ್ ಬಿರಾದಾರ, ಬಿ.ಎಸ್ ಬಂಗಾರಗುoಡ, ಬಿ.ಬಿ ತಳವಾರ, ಜಿ.ಜಿ ಗೌಡರ ,ಬಿ.ಬಿ ಪಡಶೆಟ್ಟಿ,ಎಂ.ಎA ಕಂಠಿ ಸೇರಿದಂತೆ ಊರಿನ ಗಣ್ಯರು,ಯರಗಲ್ಲ,ಮದರಿ,ಬೈಲಕೂರಿನ ಸಂಘದ ಸದಸ್ಯರು ರೈತರು ಭಾಗವಹಿಸಿದ್ದರು.
ಸಭೆ ಆರಂಭಕ್ಕೂ ಮುನ್ನ ರೈತ ಗೀತೆ ಹಾಡಲಾಯಿತು, ಅಕಾಲಿಕ ನಿಧನ ಹೊಂದಿದ ಸಂಘದ ಸದಸ್ಯ ರೈತ ಸಿದ್ದಪ್ಪ ಬಿರಾದಾರ ನೆರಬೆಂಚಿ ಅವರಿಗೆ ಮೌನಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಅಮರೇಶ ಗೂಳಿ ಸ್ವಾಗತಿಸಿದರು.ಸಂಘದ ಸಿಬ್ಬಂದಿ ಜಿ.ಕೆ ಬಿರಾದಾರ ನಿರೂಪಿಸಿದರು.ದ ಸದಸ್ಯ ರೈತ ಸಿದ್ದಪ್ಪ ಬಿರಾದಾರ ನೆರಬೆಂಚಿ ಅವರಿಗೆ ಮೌನಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಅಮರೇಶ ಗೂಳಿ ಸ್ವಾಗತಿಸಿದರು.ಸಂಘದ ಸಿಬ್ಬಂದಿ ಜಿ.ಕೆ ಬಿರಾದಾರ ನಿರೂಪಿಸಿದರು.







