ಆರೋಗ್ಯ ಇಲಾಖೆ ತಂಡದಿoದ ಸಾಧನೆ : ಮುದ್ದೇಬಿಹಾಳದಿಂದ 115 ಯೂನಿಟ್ ದಾಖಲೆಯ ರಕ್ತ ಸಂಗ್ರಹ

ಆರೋಗ್ಯ ಇಲಾಖೆ ತಂಡದಿoದ ಸಾಧನೆ : ಮುದ್ದೇಬಿಹಾಳದಿಂದ 115 ಯೂನಿಟ್ ದಾಖಲೆಯ ರಕ್ತ ಸಂಗ್ರಹ

ಮುದ್ದೇಬಿಹಾಳ : ಪಟ್ಟಣದ ಎಂಜಿವಿಸಿ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 115ಯೂನಿಟ್‌ನಷ್ಟು ದಾಖಲೆ ಪ್ರಮಾಣದ ರಕ್ತ ಸಂಗ್ರಹ ಮಾಡಲಾಗಿದೆ.

ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕ ಆಸ್ಪತ್ರೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವಿಜಯಪುರ ಮತ್ತು ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಹಾಗೂ ನಗರದ ವಿವಿಧ ಕಾಲೇಜುಗಳು ಮತ್ತು ಸೌಟ್ಸ್ ಗೈಡ್ಸ್ ಎನ್.ಎಸ್.ಎಸ್. ಮತ್ತು ಭಾರತೀಯ ಯೂತ್ ರೆಡ್ ಕ್ರಾಸ್ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನದ ಶಿಬಿರದಲ್ಲಿ ದಾನಿಗಳು ತಮ್ಮ ರಕ್ತವನ್ನು ದಾನ ಮಾಡಿದರು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ವಿಜಯಪುರ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಆನಂದಗೌಡ ಬಿರಾದಾರ, ಕೃತಕವಾಗಿ ತಯಾರಿಸಲು ಸಾಧ್ಯವಾಗದ ರಕ್ತವನ್ನು ಮತ್ತೊಬ್ಬರಿಗೆ ನೀಡಿ ಜೀವ ಉಳಿಸುವಂಥ ಕೆಲಸ ನಿಜಕ್ಕೂ ಶ್ರೇಷ್ಠ.ಎಲ್ಲಾ ದಾನಿಗಳಿಗೆ ನಾವು ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇವೆ. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯಿoದ ದಾನಿಗಳಿಗೆ ಒಂದು ಟೀ ಶರ್ಟ್ ಹಾಗೂ ಒಂದು ಗೋಡೆ ಗಡಿಯಾರವನ್ನು ಗೌರವಪೂರ್ವಕವಾಗಿ ನೀಡಲಾಗಿದೆ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಇನ್ನೋರ್ವ ನಿರ್ದೇಶಕ ಎಸ್.ಜಿ.ಮುರನಾಳ, ದಾನಿಗಳಿಂದ ಪಡೆದ ರಕ್ತವನ್ನು ಕೆಲವರು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಾರೆ ಎಂಬುದು ಸತ್ಯವೇ ಇದ್ದರೂ ಕೃತಕ ಅಭಾವವನ್ನು ಸೃಷ್ಟಿಸಿ ಪರಿಸ್ಥಿತಿಯ ದುರ್ಲಾಭವನ್ನು ಮಾಡಿಕೊಳ್ಳುವವರು ಇದ್ದಾರೆ.ಆದರೆ ಇದಕ್ಕೆ ವಿಜಯಪುರ ಜಿಲ್ಲೆಯಿಂದ ಕಡಿವಾಣ ಹಾಕಲಾಗಿದೆ.ರಕ್ತದಾನ ಮಾಡುವುದು ಆರೋಗ್ಯವಂತ ಮನುಷ್ಯನ ಲಕ್ಷಣ ಎಂದರು.

ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸತೀಶ ಭಗವಾನ್, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಂಗನಾಥ ವೈದ್ಯ ಮಾತನಾಡಿ, ರಕ್ತದಾನವು ಶ್ರೇಷ್ಠ ದಾನವಾಗಿದ್ದು, ಆರೋಗ್ಯವಂತರೆಲ್ಲರೂ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ಉಳಿಸಬಹುದಾಗಿದೆ.ನಮ್ಮ ತಾಲ್ಲೂಕಿನಿಂದ 100 ಯೂನಿಟ್ ರಕ್ತ ಸಂಗ್ರಹ ಗುರಿ ಹೊಂದಲಾಗಿದ್ದು ಅದನ್ನು ಸಾಧಿಸಿದ್ದೇವೆ ಎಂದು ಹೇಳಿದರು.
ಪಿಯು ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಕುಂಬಾರ್ 27 ನೇ ಬಾರಿಗೆ ಶಿಬಿರದಲ್ಲಿ ರಕ್ತದಾನ ಮಾಡಿದರು.

ವೈದ್ಯಾಧಿಕಾರಿಗಳಾದ ಸಂದೀಪ ಬಿರಾದಾರ, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಸ್.ಎನ್.ಪೋಲೇಶಿ,ಪ್ರೊ. ಎ.ಬಿ. ಕುಲಕರ್ಣಿ,ಐಕ್ಯೂಎಸಿ ಸಂಯೋಜಕ ಡಾ. ಎಂ.ಐ. ಬಿರಾದಾರ,ಡಾ. ಎಂ.ಎ. ಮುಲ್ಲಾ, ರೆಡ್‌ಕ್ರಾಸ್ ಸಂಯೋಜಕ ವ್ಹಿ. ಎಸ್. ಲಮಾಣಿ, ಬಸವರಾಜ ಹಡಪದ,,ಎಸ್. ಆರ್. ಹಟ್ಟಿ, ಆರೋಗ್ಯ, ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್.ಗೌಡರ, ವ್ಹಿ.ವ್ಹಿ.ಪವಾಡಶೆಟ್ಟಿ, ಯಲ್ಲಪ್ಪ ಚಲವಾದಿ, ಅಜಯಕುಮಾರ್ ಉತ್ನಾಳ, ವೀರೇಶ ಜಿಂಜಿಗಡ್ಡಿ, ವಿಠ್ಠಲ ಕಿಲಾರಹಟ್ಟಿ, ಸಂತೋಷ ಅಂಗಡಗೇರಿ, ಹಮೀದ್ ಹಾಲ್ಯಾಳ, ಪ್ರಶಾಂತ್ ಕಡಿ, ರಫೀಕ ನಾಗರಾಳ, ಇಸ್ಮಾಯಿಲ್ ವಾಲೀಕಾರ, ಎಂ.ಎo. ಟಪಾಲ, ಸುಜಾತಾ ಜಾಪಾಳ, ಎಸ್.ಆರ್.ಸಜ್ಜನ್,ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕರು ಸಿಬ್ಬಂದಿ,ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಇದ್ದರು.

Latest News

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ನ.25ರಂದು ಬೆಳಿಗ್ಗೆ 9:30 ಗಂಟೆಗೆ

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ:                                 ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ: ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ವಿಶೇಷ ವರದಿ : ಶಂಕರ್ ಹೆಬ್ಬಾಳ ಮುದ್ದೇಬಿಹಾಳ : ಹಲವು ಆಶಾಭಾವನೆ ಹಾಗೂ ಭರವಸೆಗಳೊಂದಿಗೆ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ:                                       ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ: ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಮುದ್ದೇಬಿಹಾಳ : ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಆಲ್ ಕಿದ್ಮತ್ ಫೌಂಡೇಶನ್ ವತಿಯಿಂದ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು:  ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು: ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ರೈತರ ಜಮೀನುಗಳಿಗೆ ನೀರು ಸಿಗದೆ ತೀವ್ರ ತೊಂದರೆಯಾಗುತ್ತಿರುವ

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಮುದ್ದೇಬಿಹಾಳ : ತಾಲೂಕಿನ ಯರಗಲ್‌ನಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯು 2026–27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ್ದು ಅದರಂತೆ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರೂ.3,800 ಮೊದಲ ಕಂತಿನಲ್ಲಿಯೇ ಪಾವತಿಸುವುದಾಗಿ ತಿಳಿಸಿದೆ.ಇದರಿಂದ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ. ಕಾರ್ಖಾನೆಯ ಶೇ.11.62 ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ರೂ.4,138 ಎಫ್‌ಆರ್‌ಪಿ ದರ ನಿಗದಿಯಾಗಿದ್ದು, ರೈತರು ಮತ್ತು ಕಾರ್ಖಾನೆ

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ:                      ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ: ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ಹೇಳಿದರು. ತಾಲ್ಲೂಕಿನ ಹುಲ್ಲೂರ ಗ್ರಾಮದ ಎಸ್‌ಎನ್‌ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹುಲ್ಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ತಮ್ಮ ಮಾತುಗಳಿಗಿಂತ ಶಿಕ್ಷಕರ ಮಾತುಗಳಿಗೆ ಹೆಚ್ಚಿನ ಗೌರವ ಹಾಗೂ ಮಹತ್ವ ನೀಡುತ್ತಾರೆ. ಹೀಗಾಗಿ ಶಿಕ್ಷಕರು ಜವಾಬ್ದಾರಿಯಿಂದ