ಫಲ ನೀಡಿದ ಶಾಸಕರ ಪತ್ರ ವ್ಯವಹಾರ : ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಫಲ ನೀಡಿದ ಶಾಸಕರ ಪತ್ರ ವ್ಯವಹಾರ : ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಮುದ್ದೇಬಿಹಾಳ : ಆಲಮಟ್ಟಿ ನೀರಾವರಿ ಸಲಹಾ ಸಮೀತಿ ಅಧ್ಯಕ್ಷ,ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಸಂಬoಧಿಸಿದ ಬೆಳಗಾವಿ ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಸಿ.ಎಸ್.ನಾಡಗೌಡ ನಡೆಸಿದ ಪತ್ರ ವ್ಯವಹಾರ ಹಾಗೂ ಮಾತುಕತೆಗೆ ಸ್ಪಂದನೆ ಸಿಕ್ಕಿದ್ದು ಎಎಲ್‌ಬಿಸಿ ಕಾಲುವೆಯಿಂದ ರೈತರ ಒಣಗುತ್ತಿರುವ ಬೆಳೆಗೆ ನೀರಿನ ಆಸರೆ ದೊರೆತಿದೆ.

ತಾಲ್ಲೂಕಿನ ಕೃಷ್ಣಾ ನದಿ ನೀರನ್ನು ನಂಬಿ ಬಿತ್ತನೆ ಮಾಡಿದ್ದ ಮೆಣಸಿಣಕಾಯಿ ಬೆಳೆಗೆ ಮೂರು ದಿನಗಳ ಕಾಲ ನೀರು ಹರಿಸುವಂತೆ ರೈತರು ವಿನಂತಿಸಿದ್ದರಿoದ ನ.22ರಂದು ಪತ್ರ ಬರೆದಿದ್ದ ನಾಡಗೌಡರು ರೈತರ ಬೆಳೆಗಳಿಗೆ ನೀರು ಹರಿಸುವಂತೆ ವಿನಂತಿಸಿದ್ದರು.ಇದೀಗ ಆಲಮಟ್ಟಿ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸುವ ಮೂಲಕ ಶಾಸಕರ ಮಾತಿಗೆ ಸ್ಪಂದನೆ ದೊರೆತಂತಾಗಿದೆ.

ನಾಗರಬೆಟ್ಟದ ಯೋಜನೆಯ ಪೈಪಲೈನ್ ದುರಸ್ತಿ:
ಬಹು ನಿರೀಕ್ಷಿತ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಟ್ರಯಲ್ ರನ್ ಬುಧವಾರ ಅಧಿಕಾರಿಗಳು ಯಶಸ್ವಿಯಾಗಿ ನಡೆಸಿದ್ದಾರೆ.ಕ್ಷೇತ್ರದ ಶಾಸಕರು, ನಾಗರಬೆಟ್ಟದ ಪರಮಾನಂದ ದೇವಸ್ಥಾನದ ಆವರಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪೈಪಲೈನ್ ದುರಸ್ತಿ ಮಾಡಿಸಿ ಟ್ರಯಲ್ ರನ್ ನಡೆಸಲು ನೀಡಿದಂತೆ ಸೂಚನೆಯಂತೆ ಅಧಿಕಾರಿಗಳು ಮತ್ತು ತಂತ್ರಜ್ಞರ ತಂಡ ಪ್ರಾಯೋಗಿಕವಾಗಿ ನೀರನ್ನು ಹರಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಶಾಸಕರ ಕಚೇರಿ, ಕೆಲವೇ ದಿನಗಳಲ್ಲಿ ಸಿಎಂ, ನೀರಾವರಿ ಸಚಿವರನ್ನು ಆಹ್ವಾನಿಸಿ ಅವರಿಂದ ಯೋಜನೆಯನ್ನು ಲೋಕಾರ್ಪಣೆಗೊಳಿಸಲು ಅಗತ್ಯ ಕ್ರಮವನ್ನು ಶಾಸಕರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದೆ.

Latest News

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ:                       ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ: ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಅಳಡಿಸಿರುವ ಪೈಪಲೈನ್ ಕಳಪೆ ಗುಣಮಟ್ಟದ್ದಾಗಿದೆ ಎಂಬ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ನ.25ರಂದು ಬೆಳಿಗ್ಗೆ 9:30 ಗಂಟೆಗೆ

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ:                                 ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ: ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ವಿಶೇಷ ವರದಿ : ಶಂಕರ್ ಹೆಬ್ಬಾಳ ಮುದ್ದೇಬಿಹಾಳ : ಹಲವು ಆಶಾಭಾವನೆ ಹಾಗೂ ಭರವಸೆಗಳೊಂದಿಗೆ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ:                                       ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ: ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಮುದ್ದೇಬಿಹಾಳ : ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಆಲ್ ಕಿದ್ಮತ್ ಫೌಂಡೇಶನ್ ವತಿಯಿಂದ

ನ.24 ರಂದು ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ನ.24 ರಂದು ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೌರಿ ಹುಣ್ಣಿಮೆ ಜಾತ್ರೆ ಮತ್ತು ಅನ್ನಪೂರ್ಣೇಶ್ವರಿ ನೂತನ ಮೂರ್ತಿ ಪ್ರತಿಷ್ಠಾಪನೆ ನ.21 ರಿಂದ 24ರವರೆಗೆ ಜರುಗಲಿದೆ ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ ಹೇಳಿದರು. ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.ನ.21 ರಂದು ಸಾವಿರಾರು ಕುಂಭಗಳನ್ನು ಹೊತ್ತ ಮಹಿಳೆಯರು ಬೆಳಗ್ಗೆ 9 ರಇಂದ ಪವಾಡ ಬಸವೇಶ್ವರರ ನೂತನ

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಬಾಲಾಜಿ ಸಕ್ಕರೆ ಕಾರ್ಖಾನೆ: ಮೊದಲ ಕಂತಿನಲ್ಲೇ 3800 ರೂ.ಪಾವತಿ..!

ಮುದ್ದೇಬಿಹಾಳ : ತಾಲೂಕಿನ ಯರಗಲ್‌ನಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯು 2026–27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ್ದು ಅದರಂತೆ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರೂ.3,800 ಮೊದಲ ಕಂತಿನಲ್ಲಿಯೇ ಪಾವತಿಸುವುದಾಗಿ ತಿಳಿಸಿದೆ.ಇದರಿಂದ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ. ಕಾರ್ಖಾನೆಯ ಶೇ.11.62 ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ರೂ.4,138 ಎಫ್‌ಆರ್‌ಪಿ ದರ ನಿಗದಿಯಾಗಿದ್ದು, ರೈತರು ಮತ್ತು ಕಾರ್ಖಾನೆ